ಮದ್ದಡ್ಕ ಸಮೀಪ ಅಂಗಡಿ ಮುಂಗಟ್ಟು, ಮನೆಗಳ ಮೇಲ್ಛಾವಣಿ ಹಾರಿ ಹೋಗಿದ್ದು, ಅಡಕೆ ಮರಗಳು ಧರೆಗುರುಳಿವೆ. ಓಡಿಲಾ°ಳ ಗ್ರಾಮದ ಕೆರೆಕೋಡಿ ಜಾನಕಿ ಅವರ ಮನೆಗೆ ಅಡಿಕೆ ಮರ ಬಿದ್ದು ಹಾನಿಯಾಗಿದೆ. ರೇಷ್ಮೆ ರಸ್ತೆಯಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಬಳಿಕ ಮರ ತೆರವುಗೊಳಿಸಿದ್ದು, ಮೆಸ್ಕಾಂ ಇಲಾಖೆ ವಿದ್ಯುತ್ ತಂತಿ ತೆರವುಗೊಳಿಸಿದೆ.
Advertisement
ವಿಪರೀತ ಗಾಳಿಗೆ ಓಡಿಲಾ°ಳ ಗ್ರಾಮದ ಪದ್ಮ ಮೂಲ್ಯ ಪರಾರಿ ಅವರ ಅಡಿಕೆ ತೋಟದಲ್ಲಿ 20ಕ್ಕೂ ಅಧಿಕ ಮರಗಳು ಧರೆಗುರುಳಿದ್ದು, ಸಮೀಪದ ತೋಟಗಳಿಗೂ ಹಾನಿಯಾಗಿದೆ. ಲತಾ ರಾಜೇಶ್ ಶೆಟ್ಟಿ ಅವರ ಶೀಟ್ ಹಾಸಿದ ಮೇಲ್ಛಾವಣಿ ಸಂಪೂರ್ಣ ಗಾಳಿಗೆ ಧ್ವಂಸವಾಗಿದೆ. ಕಳಿಯ ಗ್ರಾ.ಪಂ. ವ್ಯಾಪ್ತಿಯ ಗೇರುಕಟ್ಟೆ ಪೇಟೆಯಲ್ಲಿರುವ ಸತೀಶ್‌ಕುಮಾರ್ ಬೆಳಿಬೈಲು ಅವರ ಮಾಲಕತ್ವದ ಕಟ್ಟಡದಲ್ಲಿರುವ ಕೋಳಿ ಅಂಗಡಿ, ವೆಲ್ಡಿಂಗ್ ಶಾಪ್, ವಾಹನ ಹೊಗೆ ತಪಾಸಣಾ ಕೇಂದ್ರ, ಸೆಲೂನ್ ಅಂಗಡಿ, ದಿನಸಿ ಅಂಗಡಿ ವಿಪರೀತ ಗಾಳಿ ಮಳೆಗೆ ಸಂಪೂರ್ಣ ಹಾನಿಯಾಗಿದೆ. ಸ್ಥಳಕ್ಕೆ ಗ್ರಾ.ಪಂ. ಸದಸ್ಯರಾದ ಕೆ.ಎಂ.ಅಬ್ದುಲ್ ಕರೀಮ್, ಹರೀಶ್‌ಕುಮಾರ್ ಭೇಟಿ ನೀಡಿ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.