Advertisement

ಬೆಳ್ತಂಗಡಿ: ಪ.ಪಂ. ಚರಂಡಿ ವಾಸನೆ ಸಹಿಸಲು ಬೇಕಿದೆ ಮಾಸ್ಕ್!

11:35 PM Mar 24, 2021 | Team Udayavani |

ಬೆಳ್ತಂಗಡಿ: ಕೊರೊನಾ ಸೋಂಕು ತಡೆಯಲು ಮಾಸ್ಕ್ ಬಳಸಿ, ಸ್ವತ್ಛತೆಗೆ ಆದ್ಯತೆ ನೀಡಿ ಎಂದು ದಿನ ಬೆಳಗ್ಗೆ ಧ್ವನಿವರ್ಧಕ ಮೊಳಗಿಸುತ್ತಿರುವ ಪ.ಪಂ., ಕಚೇರಿ ಮುಂಭಾಗದ ಚರಂಡಿಯಲ್ಲಿ ಕೊಳಚೆ ನೀರು ಗಬ್ಬು ನಾರುತ್ತಿರುವುದರಿಂದ ಸಾರ್ವಜನಿಕರಿಗೆ ಮೂಗು ಮುಚ್ಚಿಕೊಳ್ಳಲು ಮಾಸ್ಕ್ ವಿತರಿಸುವುದು ಅನಿವಾರ್ಯ ಎಂಬಂತಾಗಿದೆ.

Advertisement

ಪಟ್ಟಣ ಪಂಚಾಯತ್‌, ಮಿನಿವಿಧಾನ, ಪ್ರವಾಸಿ ಬಂಗಲೆ, ಕೋರ್ಟ್‌, ತಾ.ಪಂ. ಸೇರಿದಂತೆ ಅನೇಕ ಸರಕಾರಿ ಕಚೇರಿ ತೆರಳುವವರು, ಶಾಸಕರು, ಸಚಿವರು, ಗಣ್ಯವ್ಯಕ್ತಿಗಳು ಸಂಚರಿಸುವ, ಬೆಳ್ತಂಗಡಿ ಕೇಂದ್ರ ಭಾಗದಲ್ಲಿರುವ ಮೂರು ಮಾರ್ಗದ ಬಳಿ ತೆರೆದ ಚರಂಡಿಯೊಂದು ನಗರದ ಸೌಂದರ್ಯ ಕೆಡಿಸುತ್ತಿದೆ. ಮೂರು ವರ್ಷಗಳಿಂದ ಚರಂಡಿ ಸ್ವತ್ಛತೆಗೆ ಪ.ಪಂ. ಲಕ್ಷಾಂತರ ಅನುದಾನ ಮೀಸಲಿ ರಿಸುತ್ತಿದ್ದರೂ ಈವರೆಗೆ ಮೂರು ಮಾರ್ಗದ ಮುಂಭಾಗದ ಚರಂಡಿ ದುಸ್ಥಿತಿಯನ್ನು ಸರಿಪಡಿಸಲು ಸಾಧ್ಯವಾಗಿಲ್ಲ.

ಸಂತೆಕಟ್ಟೆಯಿಂದ ಬಸ್‌ ನಿಲ್ದಾಣದವರೆಗೆ, ಮೂರು ಮಾರ್ಗದಿಂದ ಮಿನಿವಿಧಾನ ಸೌಧಕ್ಕೆ ಹೋಗುವ ರಸ್ತೆ ಬದಿಯಲ್ಲಿರುವ ಚರಂಡಿ ತುಂಬಿ ನಡೆದಾಡಲು ಸಾಧ್ಯವಿಲ್ಲದಷ್ಟು ದುರ್ನಾತ ಬೀರುತ್ತಿದೆ. ಸಮೀಪದ ಕಚೇರಿ, ಅಂಗಡಿ, ಮುಂಗಟ್ಟು, ಮನೆಯ ಮಂದಿ ಮೂಗಿಮುಚ್ಚಿ ಕುಳಿತುಕೊಳ್ಳುವ ಸ್ಥಿತಿ ಇದೆ. ಈ ಕುರಿತು ಹಲವು ಬಾರಿ ವರದಿ ಪ್ರಕಟಗೊಂಡರೂ ಸಬಂಧಪಟ್ಟವರು ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ಬಳಿ ಈ ಕುರಿತು ಪ್ರಸ್ತಾಪಿಸಿದರೆ ಚರಂಡಿಗೆ ಮನೆ, ಹೋಟೆಲ್‌ ತ್ಯಾಜ್ಯ ಬಿಡದಂತೆ ಸೂಚಿಸಲಾಗಿದೆ, ನೋಟಿಸ್‌ ನೀಡಲಾಗಿದೆ.
ಎಂಬ ಸಿದ್ಧ ಉತ್ತರವಷ್ಟೆ ಬರುತ್ತಿದೆ. ಮಾಸ್ಕ್ ದಂಡ ವಿಧಿಸುವ ಮುನ್ನ ಪ.ಪಂ. ಅವ್ಯವಸ್ಥೆಗೆ ದಂಡ ವಿಧಿಸುವ ಅನಿವಾರ್ಯತೆಯಿದೆ.

ಟೌನ್‌ ಪ್ಲಾನಿಂಗ್‌ ಕೊರತೆ
ಕೊಳಚೆ ನೀರಿನ ಚರಂಡಿಗಳ ಸಮರ್ಪಕ ನಿರ್ವಹಣೆಗೆ ಯೋಜನೆ ರೂಪಿಸಬೇಕಿದೆ. ನಗರದ ಹೃದಯ ಭಾಗದಲ್ಲಿ ಇರುವ ಚರಂಡಿಗಳು ಅವೈಜ್ಞಾನಿಕವಾಗಿವೆ.

ಈಗಾಗಲೇ ಟೌನ್‌ಪ್ಲಾನಿಂಗ್‌ ಎಂಜಿನಿಯರಿಂಗ್‌ ಸರ್ವೇ ನಡೆಸಿದ್ದರೂ ಕಾಮಗಾರಿಗಳು ವೇಗ ಪಡೆಯಬೇಕಿದೆ.

Advertisement

10 ದಿನಗಳೊಳಗಾಗಿ ಕ್ರಮ
ನಗರದ ನೀರು, ಚರಂಡಿ ನೀರು ಹಾಗೂ ಹೊಟೇಲ್‌ ತ್ಯಾಜ್ಯ ಪ್ಯೂರಿಫೈ ಮಾಡುವ ಸಲುವಾಗಿ ದೇವನಹಳ್ಳಿ ಮಾದರಿಯಲ್ಲಿ ಘಟಕ ನಿರ್ಮಿಸಲು ಕೃಷಿ ಇಲಾಖೆಯ ಸಮೀಪ 1 ಎಕ್ರೆ ಕಾಯ್ದೆರಿಸಿ ಸರಕಾರಕ್ಕೆ ಬರೆಯಲಾಗಿದೆ. ಮೂರು ಮಾರ್ಗದ ಬಳಿ ಚರಂಡಿ ಸ್ವತ್ಛಗೊಳಿಸಿ ಸ್ಲ್ಯಾಬ್‌ ಅಳವಡಿಸಲು 2.30 ಲಕ್ಷ ರೂ.ನ ಟೆಂಡರ್‌ ಕರೆಯಲಾಗಿದ್ದು, 10 ದಿನಗಳ ಒಳಗಾಗಿ ಅಳವಡಿಸಲಾಗುತ್ತದೆ.
-ಮಹಾವೀರ ಆರಿಗ, ಪಂ.ಪಂ. ಎಂಜಿನಿಯರ್

Advertisement

Udayavani is now on Telegram. Click here to join our channel and stay updated with the latest news.

Next