Advertisement

ನಕ್ಷತ್ರಗಳ ಕೆಳಗೆ ಒಂದು ಟಾಕೀಸು

12:04 PM May 05, 2018 | |

ಪುಟ್ಟ ಉದ್ಯಾನವೇ ಇಲ್ಲಿ ಥಿಯೇಟರ್‌! ನೆತ್ತಿ ಮೇಲೆ ನಿಗಿನಿಗಿ ಹೊಳೆಯುವ ನಕ್ಷತ್ರಗಳು, ಎದುರು ಮಲ್ಪಿಪ್ಲೆಕ್ಸ್‌ ಫೀಲ್‌ ಕೊಡುವ ದೊಡ್ಡ ಎಲ್‌ಇಡಿ ಸ್ಕ್ರೀನ್‌, ಕೈಯಲ್ಲಿ ಪಾಪ್‌ ಕಾರ್ನ್, ಅದನ್ನು ಮೆಲ್ಲುತ್ತಾ ಹಾಲಿವುಡ್‌ನ‌ ಕ್ಲಾಸಿಕ್‌ ಸಿನಿಮಾಗಳನ್ನು ಆಸ್ವಾದಿಸುವ ಗಮ್ಮತ್ತೇ ಬೇರೆ.
   ಹೀಗೊಂದು ವಿಶೇಷ ಸಿನಿ ಅನುಭವ ದಕ್ಕಬೇಕಾದರೆ, ವೈಟ್‌ಫೀಲ್ಡ್‌ನ ದಿ ಫಾರ್ಮ್ ಹೌಸ್‌ಗೆ ಬರಬೇಕು. ದಿ ಸನ್‌ ಸೆಟ್‌ ಸಿನಿಮಾ ಕ್ಲಬ್‌, ಮೂರು ದಿನಗಳ “ಮೂವೀಸ್‌ ಇನ್‌ ದಿ ಪಾರ್ಕ್‌ ಫೆಸ್ಟಿವಲ್‌’ ಆಯೋಜಿಸಿದ್ದು, ಬಯಲಿನಲ್ಲಿ ಆರಾಮವಾಗಿ ಮಲಗಿಕೊಂಡೇ ಈ ಚಿತ್ರೋತ್ಸವದ ಮನರಂಜನೆ ಪಡೆಯಬಹುದು. ಸ್ಟೀವನ್‌ ಸ್ಪೀಲ್‌ಬರ್ಗ್‌ ನಿರ್ದೇಶನದ “ಇ.ಟಿ’, ಟೋನಿ ಸ್ಕಾಟ್‌ ನಿರ್ದೇಶಿಸಿ, ಟಾಮ್‌ ಕ್ರೂಸ್‌ ನಟಿಸಿರುವ “ಟಾಪ್‌ ಗನ್‌’, ರಾಬ್‌ ರೀನರ್‌ನ ರೋಮ್ಯಾಂಟಿಕ್‌ ಕಲಾಕೃತಿ “ವೆನ್‌ ಹ್ಯಾರಿ ಮೆಟ್‌ ಸ್ಯಾಲಿ’ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ.
ಲಿಮಿಟೆಟ್‌ ಸೀಟ್‌ ಇರುವ ಕಾರಣ, ನಿಮ್ಮ ಟಿಕೆಟ್‌ ಅನ್ನು ಆದಷ್ಟು ಬೇಗ ಕಾಯ್ದಿರಿಸುವುದು ಉತ್ತಮ.

Advertisement

ಯಾವಾಗ?: ಮೇ 18ರಿಂದ 20, ಸಂ.6.30- ರಾ.10
ಎಲ್ಲಿ?: ದಿ ಫಾರ್ಮ್ ಹೌಸ್‌, ಇಪಿಐಪಿ ಇಂಡಸ್ಟ್ರಿಯಲ್‌ ಏರಿಯಾ, ವೈಟ್‌ಫೀಲ್ಡ್‌
ಪ್ರವೇಶ: 299 ರೂ.

ಆಕಾಶ ನೋಡೋಕೆ ಬರ್ತೀರ?
ಆಕಾಶ, ನಕ್ಷತ್ರಗಳನ್ನು ಕುತೂಹಲದಿಂದ ಗಮನಿಸೋದು ಕೆಲವರ ಹವ್ಯಾಸ. ಅಂಥವರು
ನೀವಾಗಿದ್ದರೆ, ನಕ್ಷತ್ರ ನೋಡೋಕೆ ಇಲ್ಲೊಂದು ಅವಕಾಶವಿದೆ. ಅಸೋಸಿಯೇಷನ್‌ ಫಾರ್‌
ಸೈನ್ಸ್‌ ಎಜುಕೇಶನ್‌ ವತಿಯಿಂದ, ಜವಾಹರ್‌ ಲಾಲ್‌ ನೆಹರು ತಾರಾಲಯದಲ್ಲಿ “ನಕ್ಷತ್ರ ವೀಕ್ಷಣೆ’
ಕಾರ್ಯಕ್ರಮ ನಡೆಯುತ್ತಿದೆ. ನಿಮ್ಮ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸಬಲ್ಲವರೂ ಜೊತೆಗಿರುತ್ತಾರೆ.
ಮತ್ಯಾಕೆ ತಡ, ನಕ್ಷತ್ರ ನೋಡೋಕೆ ಬನ್ನಿ

ಎಲ್ಲಿ?: ಜವಾಹರಲಾಲ್‌ ನೆಹರು ತಾರಾಲಯ, ಟಿ.ಚೌಡಯ್ಯ ರಸ್ತೆ, ಹೈ ಗ್ರೌಂಡ್ಸ್‌
„ ಯಾವಾಗ?: ಮೇ 6, ಭಾನುವಾರ ಸಂಜೆ 6.30
„ ಮಾಹಿತಿಗೆ: 22379725,  www.taralaya.org

Advertisement

Udayavani is now on Telegram. Click here to join our channel and stay updated with the latest news.

Next