ಬೆಳ್ಮಣ್: ಮುಂದಿನ ದಿನಗಳಲ್ಲಿ ಎಲ್ಲ ಸಂಘ ಸಂಸ್ಥೆಗಳು ಪ್ರತೀ ಮನೆ ಮನೆಗಳಲ್ಲಿ ಅಂತರ್ಜಲ ಹೆಚ್ಚಿಸುವ ಬಗ್ಗೆ ಮಾಹಿತಿ, ಕ್ರಮ ಕೈಗೊಳ್ಳುವ ವ್ಯವಸ್ಥೆ ನಡೆಸಬೇಕು ಎಂದು ಜಿ.ಪಂ. ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಹೇಳಿದರು.
ಅವರು ಗುರುವಾರ ಬೆಳ್ಮಣ್ ರಮಾನಾಥ ಶೆಣೈಯವರ ನಿವಾಸದಲ್ಲಿ ನಡೆದ ಅಂತರ್ಜಲ ಅಭಿವೃದ್ಧಿ ಯೋಜನೆ ಉದ್ಘಾಟಿಸಿ ಮಾತನಾಡಿದರು.
ಶೆಣೈಯವರು ತಮ್ಮ ಮನೆಯ ಮಾಡಿನ ನೀರನ್ನು ಮನೆಯ ಬಾವಿಗೆ ಇಂಗಿಸುವ ವ್ಯವಸ್ಥೆ ನಡೆಸಿದ್ದು ಅವರ ಈ ಜಲಸಂರಕ್ಷಣೆಯ ಯೋಜನೆ ಭಾರೀ ಶ್ಲಾಘನೆಗೆ ಪಾತ್ರವಾಯಿತು.
ಅಂತರ್ಜಲ ಅಭಿಯಾನ ಬೆಳ್ಮಣ್ ವಲಯ ಪತ್ರಕರ್ತರ ಬಳಗ, ಜೇಸಿಐನ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು ಗುರುವಾರ ಬೆಳ್ಮಣ್ ಪಂಚಾಯತ್ ಅಧ್ಯಕ್ಷೆ ವಾರಿಜಾ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ರಮಾನಾಥ ಶೆಣೈ, ಜೇಸಿಐ ಅಧ್ಯಕ್ಷೆ ಶ್ವೇತಾ ಸುಭಾಶ್, ಅರಣ್ಯ ಇಲಾಖೆಯ ಪ್ರಕಾಶ್ಚಂದ್ರ, ಲಯನ್ ಅಧ್ಯಕ್ಷ ಸದಾನಂದ ಶೆಟ್ಟಿಗಾರ್, ಕಾರ್ಯದರ್ಶಿ ವಿಶ್ವನಾಥ ಪಾಟ್ಕರ್, ಪಂಚಾಯತ್ ಸದಸ್ಯೆ ಅನಿತಾ ಡಿ’ಸೋಜಾ, ಸರ್ವಜ್ಞ ತಂತ್ರಿ, ಟೋನಿ ಡಿಕ್ರೂಸ್, ಸಂದೀಪ್ ವಿ. ಪೂಜಾರಿ, ಸತ್ಯನಾರಾಯಣ ಭಟ್, ಹ್ಯುಮಾನಿಟಿಯ ರೋಶನ್ ಮತ್ತಿತರರು ಉಪಸ್ಥಿತರಿದ್ದರು. ಅಂತರ್ಜಲ ಆಭಿವೃದ್ಧಿ ಅಭಿಯಾನದ ನಿರ್ವಾಹಕ ಕಾಂಜರಕಟ್ಟೆ ದೀಪಕ್ ಕಾಮತ್ ನಿರೂಪಿಸಿದರು.