Advertisement
ಹೊರಜಿಲ್ಲೆಗಳಿಂದ ಬರುವ ಬಹುತೇಕ ವಾಹನಗಳನ್ನು ಗಡಿ ದಾಟದಂತೆ ಪೊಲೀಸರು ನೋಡಿಕೊಳ್ಳುತ್ತಿದ್ದು, ಜಿಲ್ಲೆಯ ಒಳ ಪ್ರವೇಶಿಸದಂತೆ ವಾಹನಗಳ ತಪಾಸಣೆ ನಡೆಸಿ ಹಿಂದೆ ಕಳುಹಿಸಲಾಗುತ್ತಿದೆ. ಅನಾರೋಗ್ಯ ಹಾಗೂ ತುರ್ತು ಸಂದರ್ಭದಲ್ಲಿ ಮಾತ್ರ ವಾಹನಗಳಿಗೆ ಹೋಗಲು ಅವಕಾಶ ಮಾಡಲಾಗುತ್ತದೆ.
ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ವಾಹನಗಳ ಪ್ರಯಾಣಿಕರನ್ನು ಆರೋಗ್ಯ ಇಲಾಖೆಯ ಸಿಬಂದಿ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಬುಧವಾರ ಮಂಗಳೂರಿನ ಕೊಡಿಯಾಲ್‌ನಿಂದ ಬಂದ ಟ್ಯಾಂಕರ್ ಒಂದರಲ್ಲಿ 6 ಮಂದಿ ಬಿಜಾಪುರಕ್ಕೆ ತೆರಳುವ ಯತ್ನ ನಡೆಸಿದ್ದು, ಬೆಳ್ಮಣ್ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸಿ ಟ್ಯಾಂಕರನ್ನು ಮತ್ತೆ ಮಂಗಳೂರಿಗೆ ಕಳುಹಿಸಲಾಗಿದೆ. ಗಡಿ ದಾಟಿದರೆ ಕ್ವಾರಂಟೈನ್
ಹೊರ ರಾಜ್ಯಗಳಿಂದ ಬರುವ ವಾಹನ ಸವಾರರು ನಿಯಮ ಮೀರಿ ಉಡುಪಿ ಜಿಲ್ಲೆಯ ಗಡಿ ದಾಟಿದರೆ ಅಂಥವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಇತ್ತೀಚೆಗೆ ಇಲ್ಲಿನ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ಜಮ್ಮುವಿನಿಂದ ಬಂದ ವ್ಯಕ್ತಿಯನ್ನು ಇದೀಗ ಕಾರ್ಕಳದ ಭುವನೇಂದ್ರದಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
Related Articles
ಈಗಾಗಲೇ ಉಡುಪಿ ಜಿಲ್ಲೆ ಕೋವಿಡ್ 19 ನಿಯಂತ್ರಣಕ್ಕೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಪ್ರಯತ್ನದ ಹಿಂದೆ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಬಹುಪಾಲು ಕೀರ್ತಿ ಇದ್ದು ಕಡಂದಲೆ, ಕಾಂತಾವರ, ಜಾರಿಗೆಕಟ್ಟೆ, ಸಂಕಲಕರಿಯ ಗಡಿ ಭಾಗಗಳಲ್ಲಿಯೂ ಪೊಲೀಸ್ ಸರ್ಪಗಾವಲು ಇದ್ದು ಹೊರ ಜಿಲ್ಲೆಗಳಿಂದ ಬರುವ ವಾಹನಗಳು ಹಾಗೂ ಜನರ ತಪಾಸಣೆ ನಡೆಯುತ್ತಿದೆ.
Advertisement
ಕಾರ್ಕಳ: ಲಾಕ್‌ಡೌನ್ ಕಟ್ಟುನಿಟ್ಟುಕಾರ್ಕಳ: ಕಾರ್ಕಳ ನಗರದಲ್ಲಿ ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.ಗುರುವಾರ ಜನಸಂಖ್ಯೆ ಕ್ಷೀಣ ವಾಗಿತ್ತು. ಪೊಲೀಸರು ಬ್ಯಾಂಕ್ ಕಚೇರಿ, ದಿನಸಿ ಅಂಗಡಿ, ಮೆಡಿಕಲ್ ಶಾಪ್‌ಗ್ಳಲ್ಲಿ ಕಣ್ಗಾವಲು ಇರಿಸಿದ್ದರಿಂದ ಎಲ್ಲೆಡೆ ಜನತೆ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ವಾಹನ ಓಡಾಟಗಳ ಮೇಲೆಯೂ ವಿಶೇಷ ನಿಗಾ ವಹಿಸಿರುವುದರಿಂದ ಅನಗತ್ಯ ವಾಹನಗಳ ಓಡಾಟ ವಿರ ಲಿಲ್ಲ. ಬೆಳಗ್ಗೆ 7ರಿಂದ 11ರವರೆಗೆ ಎಂದಿ ನಂತೆ ದಿನಸಿ ಅಂಗಡಿ ತೆರೆದಿತ್ತು. ಶಿರ್ವ: ವಾಹನ ತಪಾಸಣೆ, ವಶ
ಶಿರ್ವ: ಲಾಕ್‌ಡೌನ್ ಸಮಯ ದಲ್ಲಿ ಅನಗತ್ಯವಾಗಿ ಸಂಚರಿಸುವ ವಾಹನ ಗಳನ್ನು ಶಿರ್ವ ಠಾಣಾಧಿಕಾರಿ ಶ್ರೀಶೈಲ ಮುರಗೋಡ ನೇತೃತ್ವದಲ್ಲಿ ಪೊಲೀಸರು ತಪಾಸಣೆ ನಡೆಸಿ ಕೇಸು ದಾಖಲಿಸುವ ಮೂಲಕ ಬಿಸಿ ಮುಟ್ಟಿಸುತ್ತಿದ್ದಾರೆ. ಬುಧವಾರ ಸಂಜೆ ಕರ್ತವ್ಯನಿರತರಾಗಿದ್ದ ಪೊಲೀಸರು ಸುಮಾರು 15ಕ್ಕೂ ಹೆಚ್ಚು ಅಧಿಕೃತ ದಾಖಲೆಗಳಿಲ್ಲದ, ಹೆಲ್ಮೆಟ್ ಧರಿಸದ ವಾಹನ ಸವಾರರಿಗೆ ನೋಟಿಸ್ ನೀಡಿದ್ದು, ಸುಮಾರು 4,000 ರೂ.ಗೂ ಅಧಿಕ ದಂಡ ವಸೂಲಿ ಮಾಡಿದ್ದಾರೆ. ಅಧಿಕೃತ ದಾಖಲೆ ಪತ್ರಗಳಿಲ್ಲದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಅನಗತ್ಯವಾಗಿ ಸಂಚರಿಸುವವರಿಂದಾಗಿ ತುರ್ತು ಸೇವೆಗೆ ತೆರಳುತ್ತಿರುವವರು ಕೂಡ ಕಿರಿಕಿರಿ ಅನುಭವಿಸುವಂತಾಗಿದೆ. ಕೋವಿಡ್ 19 ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮನೆ ಯಲ್ಲಿಯೇ ಇರುವುದು ಅತ್ಯವಶ್ಯ. ಆದರೆ ಕೆಲವರು ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸುತ್ತಿದ್ದು, ಅಂಥವರ ವಿರುದ್ಧ ಪ್ರಕ ರಣ ದಾಖಲಿಸಿಕೊಳ್ಳಲಾಗುವುದು ಎಂದು ಶಿರ್ವ ಎಸ್‌ಐ ಶ್ರೀಶೈಲ ಹೇಳಿದ್ದಾರೆ.