Advertisement

ಮಂಗಳೂರು ಆಟೋ ಬ್ಲಾಸ್ಟ್ ಗೆ ಬಳ್ಳಾರಿಯ ನಂಟು? ಅಧಿಕಾರಿಗಳು ತನಿಖೆ ಮಾಡಿದ್ದು ಯಾರನ್ನು?

02:07 PM Nov 22, 2022 | Team Udayavani |

ಬಳ್ಳಾರಿ: ಮಂಗಳೂರು ಆಟೋ ಬ್ಲಾಸ್ಟ್ ಗೆ ಬಳ್ಳಾರಿಯ ನಂಟು!? ಆಶ್ಚರ್ಯ‌ ಆಗಬೇಡಿ, ಆರೋಪಿ ಬಳಸಿದ ಸಿಮ್ ಕಾರ್ಡ್ ಗೆ ಸಂಡೂರು ವಿಳಾಸ ಹೊಂದಿರುವುದು ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿತ್ತು. ಅಧಿಕಾರಿಗಳ ವಿಚಾರಣೆಯಲ್ಲಿ ಒಂದುವರೆ ವರ್ಷದ ಹಿಂದೆ ಕಳೆದ ಹೋದ ಟೆಕ್ಕಿಯ ದಾಖಲೆ ಆರೋಪಿಗಳಿಗೆ ಸಿಕ್ಕಿರುವುದೇ ಇಂತಹ ಅನುಮಾನಕ್ಕೆ ಕಾರಣವಾಗಿತ್ತು.

Advertisement

ಸಿಮ್ ನ ಮಾಹಿತಿ ಬೆನ್ನತ್ತಿ ಬಂದ ಐಬಿ ಅಧಿಕಾರಿಗಳಿಗೆ‌ ವಿಚಾರಣೆ ಸಂದರ್ಭದಲ್ಲಿ ಆಶ್ಚರ್ಯ ಕಾದಿತ್ತು. ಅರುಣ್ ಕುಮಾರ್ ಗೆ ಅಧಿಕಾರಿಗಳು ತಮ್ಮನ್ನು ಏಕೆ ವಿಚಾರಣೆ ಮಾಡುತ್ತಿದ್ದಾರೆ ಎಂಬುದು ತಿಳಿದಿರಲಿಲ್ಲ, ಅವರು ಕೇಳಿದ ಪ್ರಶ್ನೆಗಳ ಆಧಾರದ ಮೇಲೆ ಮಂಗಳೂರು ಆಟೋ‌ ಬ್ಲಾಸ್ಟ್ ಪ್ರಕರಣದ ಬಗ್ಗೆ ಎಂದು ತಿಳಿಯಿತು.

ಒಂದೂವರೆ ವರ್ಷದ ಹಿಂದೆ ಕಳೆದ ದಾಖಲೆ: ತನ್ನ ದಾಖಲೆ ಬಳಸಿ ಸಿಮ್ ಕಾರ್ಡ್ ಪಡೆದಿರುವ ಬಗ್ಗೆ ಹೇಳಿದಾಗ ಆಶ್ಚರ್ಯಚಕಿತನಾಗಿ ತನ್ಮ ದಾಖಲೆ ಒಂದುವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಕಳೆದಿರುವ ಬಗ್ಗೆ ಮಾಹಿತಿ ನೀಡಿದ್ದಾನೆ, ಆಗ ಅಧಿಕಾರಿಗಳಿಗೆ ಬ್ಲಾಸ್ಟ್ ಪ್ರಕರಣಕ್ಕೂ ಹಾಗೂ ಅರುಣ್ ಕುಮಾರನಿಗೂ ಯಾವುದೇ ಸಂಬಂಧವಿಲ್ಲವೆಂಬ ಸತ್ಯ ಮನವರಿಕೆಯಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಗೌಳಿ‌ ಎಂಬಿಎ, ಎಂಜಿನೀಯರ್ ಪದವೀಧರ: 31 ವರ್ಷದ ಅರುಣ್ ಕುಮಾರ್ ಗೌಳಿ ಎಂಬಿಎ ಮತ್ತು ಎಂಜಿನೀಯರಿಂಗ್ ಪದವೀಧರ, ಹುಬ್ಬಳ್ಳಿಯಲ್ಲಿ ವ್ಯಾಸಂಗ ಮಾಡಿದ್ದಾನೆ, ಹಾವೇರಿಯಲ್ಲಿ ವಿವಾಹವಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ, ಈತನ ಕುಟುಂಬದವರು ಸಂಡೂರಿನಲ್ಲಿ ವಾಸ ಮಾಡುತ್ತಿದ್ದಾರೆ.

ಇದನ್ನೂ ಓದಿ:ಶಾರೀಕ್ ಜತೆ ಮಂಗಳೂರಿಗೆ ಮತ್ತೊಬ್ಬ ಬಂದಿದ್ದನಾ..? ವೈರಲ್ ಆಗುತ್ತಿದೆ ಸಿಸಿಟಿವಿ ಫುಟೇಜ್

Advertisement

ಇಂತಹ ವಿಚಾರ ಟೆಕ್ಕಿ ಕುಟುಂಬದ ಆತಂಕಕ್ಕೆ ಕಾರಣವಾಗಿತ್ತು, ಆದರೆ ಪ್ರಕರಣ ಕುರಿತಾಗಿ‌ ಸತ್ಯಾಂಶದ ವಿಚಾರ ಅಧಿಕಾರಿಗಳಿಗೆ ಮನವರಿಕೆಯಾಗಿದ್ದರಿಂದ ಅರುಣ್ ಕುಮಾರ್ ಮತ್ತು ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ‌ ಅಧಿಕಾರಿಗಳು ಬೇರೆ ಬೇರೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next