Advertisement

ಉಪಕಾರ ಮಾಡದಿದ್ದರೂ, ಅಪಕಾರ ಮಾಡಬೇಡಿ

05:08 PM May 02, 2019 | Naveen |

ಬಳ್ಳಾರಿ: ದೇಹ ದಂಡಿಸಿ, ದುಡಿದು ಜೀವನ ಮಾಡುವುದೇ ನಿಜವಾದ ಕಾಯಕ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಕಲ್ಲುಕಂಡ ಪಂಪಾಪತಿ ಹೇಳಿದರು.

Advertisement

ನಗರದ ಮುಂಡ್ಲೂರು ರಾಮಪ್ಪ ಸ್ನೇಹಸಂಪುಟ ಸಭಾಂಗಣದಲ್ಲಿ ಅಮ್ಮ ಆಟೋ ಚಾಲಕರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಯಕ ಎಂದರೆ ದೇಹ ದಂಡಿಸಿ, ನಮಗೆ ಬೇಕಾದದ್ದನ್ನು ಖುದ್ದು ಗಳಿಸುವುದು ಆಗಿದೆ. 12ನೇ ಶತಮಾನದಲ್ಲಿ ಬಸವಣ್ಣನವರು ಇದನ್ನು ಸ್ಪಷ್ಟವಾಗಿ ಹೇಳಿದರು. ನಾವು ಮಾಡುವ ಕೆಲಸವನ್ನು ಕಾಯಕಕ್ಕೆ ಹೋಲಿಸಿದರು. ಕಾಯಕ ಎಂದರೆ ದೇಹದ ದಂಡಿಸುವುದು. ಬಸವಣ್ಣ ಹೇಳಿದಂತೆ ನಾವೆಲ್ಲಾ ಕಾಯಕದಲ್ಲಿಯೇ ಕೈಲಾಸ ಕಾಣಬೇಕು ಎಂದು ಸಲಹೆ ನೀಡಿದರು.

ನೀವೆಲ್ಲಾ ಸಾರ್ವಜನಿಕರ ಒಳಿತಿಗಾಗಿ ದುಡಿಯುವವರು. ಎಂದಿಗೂ ಇತರರಿಗೆ ಕೆಡುಕ ಬಯಸಬಾರದು. ಇನ್ನೊಬ್ಬರಿಗೆ ಉಪಕಾರ ಮಾಡುವುದು ಸಾಧ್ಯವಿಲ್ಲದಿದ್ದರೂ ಸರಿ ಅಪಕಾರ ಮಾತ್ರ ಮಾಡಬಾರದು. ಇನ್ನೊಬ್ಬರಿಗೆ ಕೆಡುಕು ಬಯಸದೆ ನಮ್ಮ ಬದುಕು ಸಾಗಿಸುವವನೇ ನಿಜವಾದ ದೇವರು ಎಂದು ಅವರು ಕಾರ್ಮಿಕರ ಬಗ್ಗೆ ಗುಣಗಾನ ಮಾಡಿದರು.

ಭೂಮಿ ಮೇಲೆ ಹುಟ್ಟಿದ ಯಾವುದೇ ವ್ಯಕ್ತಿ, ಜೀವಿ ಪರಿಪೂರ್ಣ ಅಲ್ಲ. ಒಂದಿಲ್ಲೊಂದು ಕೆಟ್ಟ ಗುಣ ಇದ್ದೇ ಇರುತ್ತವೆ. ಇದನ್ನೇ ತತ್ವಜ್ಞಾನಿ ಅರಿಸ್ಟಾಟಲ್ ಹೇಳಿದ್ದಾರೆ. ನಾವುಗಳು ಸಾಮಾನ್ಯರು. ನಮ್ಮ ಜೀವನ ರೂಪಿಸಿಕೊಳ್ಳುವಾಗ ಇತರರನ್ನು ನೋಡಿ ಕಲಿಯಬೇಕು. ಆ ಮೂಲಕ ಉತ್ತಮ ಜೀವನ ಕಟ್ಟಿಕೊಳ್ಳಲು ಮುಂದಾಗಬೇಕು ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಾನಾಳ್‌ ಶೇಖರ್‌ ಮಾತನಾಡಿ, ಆಟೋ ಚಾಲಕರು ನಿತ್ಯ ಜನರ ಒಳಿತಿಗಾಗಿ ದುಡಿಯುತ್ತಾರೆ. ಅವರ ಸೇವೆ ಮಾಡುವುದು ಒಳ್ಳೆಯದು. ನಾವು ನಮ್ಮ ಸಂಘಟನೆಯಿಂದ ಆಟೋ ಚಾಲಕರ ಸೇವೆ ಮಾಡಲು ಸಿದ್ಧರಿದ್ದೇವೆ. ಮುಂದಿನ ದಿನಗಳಲ್ಲಿ ಆಟೋ ಚಾಲಕರಿಗೆ ಉಚಿತ ಸಮವಸ್ತ್ರ ವಿತರಣೆ ನೀಡಲಾಗುವುದು ಎಂದರು.

Advertisement

ಅಮ್ಮ ಆಟೋ ಚಾಲಕರ ಸಂಘದ ಅಧ್ಯಕ್ಷ ಜಾನ್‌ ಬಾಸ್ಕೊ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಪುರುಷೋತ್ತಮ ಹಂದ್ಯಾಳ್‌, ಲೋಕೇಶ, ತಿಪ್ಪಾರೆಡ್ಡಿ ಇತರರು ವೇದಿಕೆಯಲ್ಲಿದ್ದರು

Advertisement

Udayavani is now on Telegram. Click here to join our channel and stay updated with the latest news.

Next