Advertisement
ಲಾಕ್‌ಡೌನ್ ನಿಮಿತ್ತ ಮೇ 1 ಕಾರ್ಮಿಕ ದಿನಾಚರಣೆಯನ್ನು ಮನೆ-ಮನೆಯಲ್ಲಿ ಆಚರಿಸುವಂತೆ ಎಐಯುಟಿಯುಸಿ ಸಂಘಟನೆಯು ದೇಶವ್ಯಾಪಿ ಕರೆ ನೀಡಿತ್ತು. ಇದಕ್ಕೆ ಸ್ಪಂದಿಸಿದ ಬಳ್ಳಾರಿ ಜಿಲ್ಲೆಯ ನೂರಾರು ಆಶಾ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು, ಬಿಸಿಯೂಟ ನೌಕರರು, ಸ್ಪಾಂಜ್ ಐರನ್ ಕಾರ್ಮಿಕರು, ಗಣಿ ಕಾರ್ಮಿಕರು, ವಿಮ್ಸ್ ಗುತ್ತಿಗೆ ಕಾರ್ಮಿಕರು, ಹಮಾಲಿಗಳು, ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರು ತಮ್ಮ ಮನೆಗಳಲ್ಲೇ ಕಾರ್ಮಿಕರ ಐಕ್ಯತೆ ಚಿರಾಯುವಾಲಿ, ದುಡಿಮೆ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಏರಿಸಿರುವುದನ್ನು ಒಪ್ಪುವುದಿಲ್ಲ, ಆರೋಗ್ಯ ಸಿಬ್ಬಂದಿಯನ್ನು ರಕ್ಷಿಸಿ, ವಲಸೆ ಕಾರ್ಮಿಕರನ್ನು ರಕ್ಷಿಸಿ, ಸಂಕಷ್ಟದಲ್ಲಿರುವ ಜನರಿಗೆ ಆಹಾರ, ವಸತಿ ಒದಗಿಸಿ ಸೇರಿದಂತೆ ಇನ್ನಿತರೆ ಬೇಡಿಕೆಗಳ ಘೋಷವಾಕ್ಯಗಳುಳ್ಳ ಫಲಕಗಳನ್ನು ಹಿಡಿದು ತೆಗೆಸಿಕೊಂಡಿರುವ ಫೋಟೋವನ್ನು ವಾಟ್ಸ್ ಆ್ಯಪ್‌ನಲ್ಲಿ ಕಾರ್ಮಿಕ ಮುಖಂಡರಿಗೆ ಕಳುಹಿಸಿಕೊಡುವ ಮೂಲಕ ಆನ್‌ಲೈನ್ ನಲ್ಲಿ ಕಾರ್ಮಿಕ ದಿನವನ್ನು ಸರಳವಾಗಿ ಆಚರಿಸಿದ್ದಾರೆ.
Advertisement
ಆನ್‌ಲೈನ್‌ನಲ್ಲಿ ಕಾರ್ಮಿಕ ದಿನ ಆಚರಣೆ
03:12 PM May 02, 2020 | Naveen |
Advertisement
Udayavani is now on Telegram. Click here to join our channel and stay updated with the latest news.