ಶಾಖೋತ್ಪನ್ನ ವಿದ್ಯುತ್ ಕೇಂದ್ರದ (ಬಿಟಿಪಿಎಸ್) 700 ಮೆ.ವ್ಯಾ.ವಿದ್ಯುತ್ ಉತ್ಪಾದಿಸುವ 3ನೇ ಘಟಕ ಭಾನುವಾರದಿಂದ
ವಿದ್ಯುತ್ ಉತ್ಪಾದನೆ ಆರಂಭಿಸಿದೆ.
Advertisement
ಜಿಲ್ಲೆಯ ಕಂಪ್ಲಿ ಬಳಿಯ ತುಂಗಭದ್ರಾ ಬಲದಂಡೆ ಅಚ್ಚುಕಟ್ಟು ಪ್ರದೇಶದ ಕೆಳ ಮಟ್ಟದ ಕಾಲುವೆಯಲ್ಲಿ ಕುಡಿವ ನೀರಿಗಾಗಿ ನೀರು ಹರಿಸಲಾಗುತ್ತಿದ್ದು, ಇದರಲ್ಲಿ ಬಿಟಿಪಿಎಸ್ ತನ್ನ ಪಾಲಿನ 0.51 ಟಿಎಂಸಿ ಅಡಿ ನೀರಿನ ಸಂಗ್ರಹಣೆ ಆರಂಭಿಸಿದೆ. ನೀರು ದೊರೆಯುತ್ತಿರುವ ಹಿನ್ನೆಲೆಯಲ್ಲಿ 3ನೇ ಘಟಕಕ್ಕೆ ಚಾಲನೆ ದೊರೆತಿದೆ.
ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಮುಂದಿನ 2-3 ದಿನಗಳಲ್ಲಿ 3ನೇ ಘಟಕದ ಪೂರ್ಣ ಪ್ರಮಾಣದ 700 ಮೆಗಾ ವ್ಯಾಟ್
ವಿದ್ಯುತ್ ಉತ್ಪಾದಿಸಲಿದ್ದೇವೆ ಎಂದು ಬಿಟಿಪಿಎಸ್ ಇಡಿ ಎಸ್.ಮೃತ್ಯುಂಜಯ ತಿಳಿಸಿದ್ದಾರೆ.