Advertisement

ಸೋಂಕು ಪತ್ತೆಯಲ್ಲಿ ಬೆಂಗಳೂರು ಮೀರಿಸಿದ ಬಳ್ಳಾರಿ

03:36 PM May 19, 2021 | Team Udayavani |

ಬಳ್ಳಾರಿ: ಬಳ್ಳಾರಿ ಹಾಗೂ ವಿಜಯ ನಗರ ಜಿಲ್ಲೆಗಳಲ್ಲಿ ಪ್ರತಿದಿನ ಕೋವಿಡ್‌ಪರೀಕ್ಷೆಗೆ ಒಳಗಾಗುತ್ತಿರುವವರಲ್ಲಿ ಶೇ.46.92 ಜನರಲ್ಲಿ ಸೋಂಕು ಪತ್ತೆಯಾಗುತ್ತಿದ್ದು, ಉಭಯ ಜಿಲ್ಲೆಗಳು ರಾಜ್ಯದಲ್ಲೇಪ್ರಥಮ ಸ್ಥಾನದಲ್ಲಿವೆ.

Advertisement

ರಾಜ್ಯ ಸರ್ಕಾರ ಏ.18ರಿಂದ ಮೇ15ರವರೆಗೆ ಪ್ರತಿ ಏಳು ದಿನಗಳ ಶೇಕಡಾವಾರು ಮಾಹಿತಿ ಪ್ರತ್ಯೇಕವಾಗಿ ಸಂಗ್ರಹಿಸಿದ್ದು, ಈ ಪೈಕಿ ಮೇ9ರಿಂದ 15ವರೆಗಿನ ಏಳು ದಿನಗಳಲ್ಲಿ ರಾಜ್ಯಾದ್ಯಂತ ಕೋವಿಡ್‌ಪರೀಕ್ಷೆಗೊಳಗಾದವರಲ್ಲಿ ಸರಾಸರಿ ಶೇ.32.17ಜನರಲ್ಲಿ ಸೋಂಕು ಪತ್ತೆಯಾಗಿದ್ದರೆ,ಈ ಪೈಕಿ ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿಅತಿ ಹೆಚ್ಚು ಸೋಂಕು ಪತ್ತೆಯಾಗಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಪ್ರತಿದಿನ ಸಾವಿರಾರು ಸೋಂಕಿತರು ಪತ್ತೆಯಾಗುತ್ತಿರುವ ಬೆಂಗಳೂರು ನಗರವನ್ನೇ  ಹಿಂದಿಕ್ಕಿದೆ.

ಶೇಕಡಾವಾರು ಸೋಂಕಿತರು: ಬಳ್ಳಾರಿ-ವಿಜಯನಗರ ಜಿಲ್ಲೆಗಳು (ಶೇ.46.92) ಪ್ರಥಮ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಉತ್ತರ ಕನ್ನಡ(ಶೇ.46.40), ಮೂರನೇ ಸ್ಥಾನದಲ್ಲಿ ಶಿವಮೊಗ್ಗ (ಶೇ.42.44), ನಾಲ್ಕನೇ ಸ್ಥಾನದಲ್ಲಿ ಹಾಸನ(ಶೇ.40.94), ಮೈಸೂರು (ಶೇ.40.90), ಬೆಳಗಾವಿ(ಶೇ.39.35), ತುಮಕೂರು (ಶೇ.37.50), ಉಡುಪಿ(ಶೇ.36.16), ಧಾರವಾಡ (ಶೇ.34.56), ಚಾಮರಾಜನಗರ(ಶೇ.34.36), ಗದಗ (ಶೇ.34.17), ಬೆಂಗಳೂರು ಗ್ರಾಮೀಣ(ಶೇ.33.49),ಕೊಪ್ಪಳ (ಶೇ.33.29),ಕೋಲಾರ (ಶೇ.33.20),ಬೆಂಗಳೂರು ನಗರ (ಶೇ.31.91), ಚಿಕ್ಕಮಗಳೂರು(ಶೇ.31.70), ರಾಯಚೂರು (ಶೇ.31.24), ಕೊಡಗು(ಶೇ.29.30), ರಾಮನಗರ (ಶೇ.28.15), ಕಲಬುರ್ಗಿ(ಶೇ.26.80), ಚಿಕ್ಕಬಳ್ಳಾಪುರ (ಶೇ.26.71), ದಕ್ಷಿಣ ಕನ್ನಡ(ಶೇ.26.61), ವಿಜಯಪುರ (ಶೇ.26.49), ಬಾಗಲಕೋಟೆ(ಶೇ.26.41), ಮಂಡ್ಯ (ಶೇ.25.15), ದಾವಣಗೆರೆ(ಶೇ.22.24), ಯಾದಗಿರಿ (ಶೇ.21.44), ಚಿತ್ರದುರ್ಗ(ಶೇ.17.77),ಹಾವೇರಿ (ಶೇ.14.40),ಬೀದರ್‌(ಶೇ.12.49)ಜಿಲ್ಲೆಗಳು ಕೊನೆಯ ಸ್ಥಾನದಲ್ಲಿವೆ.

ನಿಯಂತ್ರಣಕ್ಕೆ ಬಾರದ ಗಣಿನಾಡು:ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿ ಏ.18ರಿಂದ ಮೇ15ವರೆಗೆ ನಾಲ್ಕು ವಾರಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಏ.18ರಿಂದ 24ರವರೆಗಿನಏಳು ದಿನಗಳಲ್ಲಿ ಜಿಲ್ಲೆಯಲ್ಲಿ ಕೋವಿಡ್‌ ಟೆಸ್ಟ್‌ ಮಾಡಿಸಿಕೊಂಡವರ ಪೈಕಿ ಶೇ.18.40 ಜನರಲ್ಲಿ ಸೋಂಕುಪತ್ತೆಯಾಗಿತ್ತು. ಅದು ಏ.25ರಿಂದ ಮೇ 1ರವರೆಗೆ ಏಳುದಿನಗಳಲ್ಲಿ ಶೇ.26.68ಕ್ಕೆ, 3ನೇ ವಾರ ಮೇ 2ರಿಂದ 8ರವರೆಗೆ ಶೇ.40.89, ನಾಲ್ಕನೇ ವಾರ ಮೇ9ರಿಂದ 15ರವರೆಗೆಶೇ.46.92 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಉಭಯಜಿಲ್ಲೆಗಳು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿವೆ ಎಂದುಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿರುವ ಅಂಕಿ-ಅಂಶಗಳು ಸ್ಪಷ್ಟಪಡಿಸಿವೆ.

5ಜಿಲ್ಲೆಗಳಲ್ಲಿ ಶೇ.64.14 ಸೋಂಕು ಪತ್ತೆರಾಜ್ಯಾದ್ಯಂತ ಕಳೆದ 28 ದಿನಗಳಲ್ಲಿ 10,42,397ಜನರಲ್ಲಿ ಸೋಂಕು ಪತ್ತೆಯಾಗಿದ್ದರೆ, ಇದರಲ್ಲಿಬೆಂಗಳೂರು ನಗರ ಶೇ.48.39 (5,04,423), ಮೈಸೂರು ಶೇ.4.83 (50376),ತುಮಕೂರು ಶೇ.4.81 (43057),ಬಳ್ಳಾರಿ-ವಿಜಯನಗರ ಶೇ.3.10 (32315), ಹಾಸನಶೇ.3.01 (31376) ಸೇರಿಈಐದು ಜಿಲ್ಲೆಗಳಲ್ಲಿ ಶೇ.64.14 ಜನರಲ್ಲಿ ಸೋಂಕು ಪತ್ತೆಯಾಗಿದೆ.ಇನ್ನುಳಿದ ಜಿಲ್ಲೆಗಳಲ್ಲಿ ಶೇ.35.86 (373764)ಜನರಲ್ಲಿ ಸೋಂಕು ಪತ್ತೆಯಾಗಿದೆ.

Advertisement

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next