Advertisement

Bellary; ಪಾಕಿಸ್ತಾನ ಜೈಕಾರ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಿ: ಶ್ರೀರಾಮುಲು ಒತ್ತಾಯ

12:36 PM Feb 29, 2024 | Team Udayavani |

ಬಳ್ಳಾರಿ: ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿರುವ ಪ್ರಕರಣದಲ್ಲಿ ಎಫ್ಎಸ್ಎಲ್ ವರದಿ ಮೇಲೆ ನಮಗೆ ನಂಬಿಕೆ ಇಲ್ಲ. ಇದನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ಒತ್ತಾಯಿಸಿದ್ದಾರೆ.

Advertisement

ನಾಸೀರ್ ಹುಸೇನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಘಟನೆ ನಡೆದ ತಕ್ಷಣ ನಾಸೀರ್ ಕ್ಷಮೆ ಕೇಳಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದರೆ ಘಟನೆ ಅಲ್ಲಿಗೆ ಮುಗಿದು ಹೋಗುತ್ತಿತ್ತು. ನಾಸೀರ್ ಹುಸೇನ್ ಬಳ್ಳಾರಿಯಿಂದ ಎರಡನೇ ಬಾರಿಗೆ ಆಯ್ಕೆಯಾಗಿರುವುದಕ್ಕೆ ಗೌರವವಿದೆ. ಆದರೆ ಗೆದ್ದ ಮೇಲೆ ಅವರ ವರ್ತನೆ ಮಾತ್ರ ಖಂಡನೀಯ ಎಂದರು.

ಕಾಂಗ್ರೆಸ್ ತುಷ್ಟೀಕರಣದ ರಾಜಕೀಯವನ್ನು ಮಾಡುತ್ತಿದ್ದಾರೆ. ಭಯೋತ್ಪಾದಕರ ಪರ ಸರ್ಕಾರವಿದೆ ಎನ್ನುವ ಅನುಮಾನವಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ಸ್ನೇಹಿತರ ಜೊತೆ ನಡೆದುಕೊಂಡು ರೀತಿ ‌ಪ್ರಶ್ನೆ ಮಾಡಬೇಕು. ಹಿಂದೂ ವಿರೋಧಿ ಸರ್ಕಾರ ಎನ್ನುವದು ಪದೇ ಪದೇ ಸಾಬೀತು ಮಾಡುತ್ತಾರೆ. ಪಾಕಿಸ್ತಾನದ ಪರ ಘೋಷಣೆ ಕೂಗುವಾಗ ಓರ್ವ ವ್ಯಕ್ತಿ ಬಾಯಿ ಮುಚ್ಚುತ್ತಾರೆ. ಅದನ್ನು ಮರೆಮಾಚಲು ಸಿಎಂ ಅದನ್ನು ಕೂಗಿಲ್ಲವೆಂದು ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಇಂದು ಪಾಕಿಸ್ತಾನದ ಪರ ಜಯಘೋಷ ಹಾಕಿದವರು ನಾಳೆ ವಿಧಾನ ಸೌಧದಲ್ಲಿ ಬಾಂಬ್ ಇಡುತ್ತಾರೆ ಎಂದು ರಾಮುಲು ಕಿಡಿಕಾರಿದರು.

ಇಲ್ಲಿಯ ಬಿರಿಯಾನಿ ತಿಂದು ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರೆ. ಇವರಿಗೆ ಸರ್ಕಾರ ಬೆಂಬಲಿಸುತ್ತದೆ. ಭಾರತದಲ್ಲಿ ಇರಲು ಇಷ್ಟವಿಲ್ಲ ಎಂದರೆ ನಾನೆ ವಿಮಾನದ ಚಾರ್ಜ್ ಕೊಡುತ್ತೇನೆ. ಅವರು ಹೋಗಬಹುದು ಎಂದರು.

ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದ ರಾಮುಲು, ಎಲ್ಲರೂ ಸ್ಪೀಕರ್ ಗೌರವ ನೀಡಿದರೆ ಅದನ್ನು ವ್ಯಂಗ್ಯವಾದ ರೀತಿಯಲ್ಲಿ ಖಾದರ್ ಗೆ ಎಲ್ಲರೂ ನಮಸ್ಕಾರ ಮಾಡೋ ರೀತಿ ‌ಮಾಡಿದ್ದೇವೆ ಎನ್ನುತ್ತಾರೆ ಎಂದರು.

Advertisement

ಕೆಜಿ ಹಳ್ಳಿ ಡಿಜಿ ಹಳ್ಳಿ ಶಾಸಕರ ಮನೆಗೆ ಬೆಂಕಿ ಹಚ್ಚುತ್ತಾರೆ. ಡಿಕೆ ಶಿವಕುಮಾರ್ ಅವರು ಮಂಗಳೂರು ಕುಕ್ಕರ್ ಬಾಂಬ್ ದಾಳಿಕೋರರು ಅಮಾಯಕರು ಎನ್ನುತ್ತಾರೆ. ಎಫ್ಎಸ್ಎಲ್ ವರದಿ ಬರುವ ಮುನ್ನ ಕ್ಲೀನ್ ಚಿಟ್ ಯಾಕೆ ನೀಡಿದ್ರು? ಮುಖ್ಯಮಂತ್ರಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ತನಿಖಾ ಅಧಿಕಾರಿಗಳನ್ನು ತಮಗೆ ಬೇಕಾದವರನ್ನು ನೇಮಕ ಮಾಡ್ತಾರೆ. ವರದಿ ಅವರ ಪರವಾಗಿಯೇ‌ ಬರುತ್ತದೆ. ಹೀಗಾಗಿ ಎನ್ಐಎ ಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ ಅವರು,  ಪ್ರಧಾನಿ ಬಗ್ಗೆ ಮಾತನಾಡಿರುವುದು ಸರಿಯಲ್ಲ. ಹರಿಪ್ರಸಾದ್ ಗ್ರಾಮ ಪಂಚಾಯತಿ ಚುನಾವಣೆ ಗೆಲ್ಲಲೂ ಆಗುವುದಿಲ್ಲ. ಬ್ಯಾಕ್ ಡೋರ್ ರಾಜಕಾರಣಿ. ಹಿಂದೂ ಮುಸ್ಲಿಂ ಬೇದಭಾವ ಇಲ್ಲ. ಆದರೆ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದರೆ ಒಪ್ಪುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next