Advertisement

Bellary: ತಡರಾತ್ರಿ ಸರಣಿ ಕಳ್ಳತನ; ಎಂಟು ಮನೆಗಳಿಗೆ ನುಗ್ಗಿದ ಕಳ್ಳರು

12:17 PM Mar 21, 2024 | Team Udayavani |

ಬಳ್ಳಾರಿ: ಇಲ್ಲಿನ ಕುವೆಂಪು ನಗರದಲ್ಲಿ ತಡರಾತ್ರಿ ಸರಣಿ ಕಳ್ಳತನವಾಗಿದೆ. ಮನೆ ಬೀಗ ಮುರಿದು ಒಂದೇ ಏರಿಯಾದಲ್ಲಿ ಸರಣಿ ಕಳ್ಳತನವಾಗಿದೆ.

Advertisement

ಮೂರು ಮನೆಯಲ್ಲಿ ಕಳ್ಳತನಕ್ಕೆ ಯತ್ನವಾಗಿದ್ದು, ಐದು ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಬೆಳ್ಳಿ -ಬಂಗಾರ ಸೇರಿದಂತೆ ಹಣ ಕದ್ದು ಪರಾರಿಯಾಗಿದ್ದಾರೆ. ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಕಳ್ಳರು ಕೈಚಳಕ ತೋರಿದ್ದಾರೆ.

ಪ್ರಕಾಶ್ ಎಂಬುವವರು ಮನೆಯಲ್ಲಿ ಸುಮಾರು 2 ಲಕ್ಷ 50 ಸಾವಿರ ಹಣ ಹಾಗೂ ನಾಲ್ಕು ತೊಲೆ ಬಂಗಾರ ಕಳವಾಗಿದೆ. ಐದು ಮನೆಯಲ್ಲಿ ಒಟ್ಟು 10 ತೊಲೆ ಬಂಗಾರ 9 ಲಕ್ಷಕ್ಕೂ ಅಧಿಕ ಹಣ ಕದ್ದು ಪರಾರಿಯಾಗಿದ್ದಾರೆ.

ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next