Advertisement

ವಿಮ್ಸ್ ಶವಾಗಾರಕ್ಕೆ ಹೊಸ ಫ್ರೀಜರ್‌

04:59 PM Jun 05, 2020 | Naveen |

ಬಳ್ಳಾರಿ: ಇಲ್ಲಿನ ವಿಮ್ಸ್‌ ಶವಾಗಾರಕ್ಕೆ ಕೊನೆಗೂ ಒಂದು ಫ್ರೀಜರ್‌ ಬಂದಿದೆ. ಕಳೆದ ಹಲವು ದಿನಗಳಿಂದ ಶವ ಇಡಲು ಸಾಧ್ಯವಾಗದೆ ಅವಾಂತರಕ್ಕೆ ಕಾರಣವಾಗಿದ್ದ ಶವಾಗಾರಕ್ಕೆ ನಾಲ್ಕು ಶವಗಳನ್ನು ಇಡಬಲ್ಲ ಒಂದು ಹೊಸ ಫ್ರೀಜರ್‌ನ್ನು ಗುರುವಾರ ತಂದಿಡಲಾಗಿದ್ದು, ಫ್ರೀಜರ್‌ ಸಮಸ್ಯೆಗೆ ತಾತ್ಕಾಲಿಕ ತೆರೆಬಿದ್ದಂತಾಗಿದೆ.

Advertisement

ಶವಾಗಾರದಲ್ಲಿದ್ದ ಫ್ರೀಜರ್‌ ಗಳು ಕಳೆದ ಹಲವು ದಿನಗಳಿಂದ ಕೆಟ್ಟಿದ್ದವು. ದುರಸ್ತಿಗಾಗ ಇವುಗಳನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು. ಹೀಗಾಗಿ ಮೂರು ಬಾಡಿಗೆ ಫ್ರೀಜರ್‌ಗಳನ್ನು ತರಲಾಗಿತ್ತು. ಆದರೂ ಮೃತರ ಸಂಖ್ಯೆ ಹೆಚ್ಚಿದ್ದರೆ ಶವಗಳನ್ನು ಅನಿವಾರ್ಯವಾಗಿ ನೆಲದ ಮೇಲೆ ಮಲಗಿಸುವ ಅನಿವಾರ್ಯತೆ ಉಂಟಾಗಿತ್ತು. ಇದರಿಂದ ಕೂಡಲೇ ಎಚ್ಚೆತ್ತ ವಿಮ್ಸ್‌ ನಿರ್ದೇಶಕರು ಈಗ ಹೊಸ ಫ್ರೀಜರ್‌ ತರಿಸಿದ್ದಾರೆ. ಇನ್ನೂ ಇಂತಹ ಎರಡು ಫ್ರೀಜರ್‌ ತರಿಸಲು ಟೆಂಡರ್‌ ಕರೆಯಲಾಗಿದೆ. ಇನ್ನೊಂದು ವಾರದಲ್ಲಿ ಹಳೆಯ ಎರಡು ಫ್ರೀಜರ್‌ ದುರಸ್ತಿಯಾಗಲಿವೆ ಎಂದು ನಿರ್ದೇಶಕ ಡಾ| ದೇವಾನಂದ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next