Advertisement

ಬಳ್ಳಾರಿ ಮೇಯರ್ –ಉಪಮೇಯರ್ ಆಯ್ಕೆ; ಕುತೂಹಲಕ್ಕೆ ತೆರೆಯೆಳೆದ ಕೈ ಮುಖಂಡರು

10:56 AM Mar 19, 2022 | Team Udayavani |

ಬಳ್ಳಾರಿ: ತೀವ್ರ ಕುತೂಹಲ ಕೆರಳಿಸಿದ್ದ ಬಳ್ಳಾರಿ ಮಹಾನಗರ ಪಾಲಿಕೆಗೆ ಅಂತಿಮವಾಗಿ ಮೇಯರ್ ಸ್ಥಾನಕ್ಕೆ 34 ನೇ ವಾರ್ಡ್ ರಾಜೇಶ್ವರಿ ಸುಬ್ಬರಾಯುಡು, ಉಪ ಮೇಯರ್ ಸ್ಥಾನಕ್ಕೆ 37 ನೇ ವಾರ್ಡ್ ಮಾಲನ್ ಬಿ ಅವರು ಆಯ್ಕೆಯಾಗಿದ್ದು, ನಾಮಪತ್ರ ಸಲ್ಲಿಸಿದ್ದಾರೆ.

Advertisement

ಆಪರೇಷನ್ ಕಮಲ ಭೀತಿಯಿಂದ ಬೆಂಗಳೂರಿಗೆ ತೆರಳಿದ್ದ ಕಾಂಗ್ರೆಸ್ ಸದಸ್ಯರು – ಶಾಸಕರಿಂದ ವೀಕ್ಷಕರು ಅಭಿಪ್ರಾಯ ಸಂಗ್ರಹಿಸಿ, ಮನವೊಲಿಸಲು ಪ್ರಯತ್ನಿಸಿದರೂ ಒಮ್ಮತ ಮೂಡಿರಲಿಲ್ಲ. ಇದರಿಂದ ಕೊನೆ ಕ್ಷಣದವರೆಗೂ ಮೇಯರ್ -ಉಪಮೇಯರ್ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಕೆರಳಿಸಿತ್ತು. ಕೊನೆಗೂ ಎರಡೂ ಗುಂಪುಗಳಲ್ಲಿ ಒಮ್ಮತ ಮೂಡಿಸುವಲ್ಲಿ ಯಶಸ್ವಿಯಾಗಿರುವ ಪಕ್ಷದ ವರಿಷ್ಠರು ಮೇಯರ್ ಸ್ಥಾನಕ್ಕೆ 34 ನೇ ವಾರ್ಡ್ ನ ರಾಜೇಶ್ವರಿ ಸುಬ್ಬರಾಯುಡು, ಉಪಮೇಯರ್ ಸ್ಥಾನಕ್ಕೆ 37ನೇ ವಾರ್ಡ್ ನ ಮಾಲನ್ ಬಿ ಅವರನ್ನು ಆಯ್ಕೆ ಮಾಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ:ಜ್ಞಾನ ಗಂಗೋತ್ರಿಯಲ್ಲಿ ಇಂದಿನಿಂದ ‘ಭಾಷಾ ಕೌಶಲ್ಯ ಕಮ್ಮಟ’

ಎರಡು ಗುಂಪುಗಳ ನಡುವೆ ಬಿಕ್ಕಟ್ಟು ಬಿಗಡಾಯಿಸಿದ ಹಿನ್ನೆಲೆಯಲ್ಲಿ 15 ಸದಸ್ಯರ ಗುಂಪೊಂದು, ಬಿಜೆಪಿಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕುರಿತು ಚಿಂತನೆ ನಡೆಸಿತ್ತಾದರೂ, ಅವರ ಕೈಗೆ ಅಧಿಕಾರ ಯಾಕೆ ನೀಡಬೇಕೆಂದು ನಾವೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಮೇಯರ್ ಸಿಗಲಿಲ್ಲ ಎಂದು ಒಂದಷ್ಟು ಬೇಸರವಿದ್ದರೂ, ಪಕ್ಷ ಕೈಗೊಂಡಿರುವ ನಿರ್ಣಯಕ್ಕೆ ನಾವೆಲ್ಲರು ಬದ್ಧವಾಗಿದ್ದೇವೆ ಎಂದು ಗುಂಪಿನ ಸದಸ್ಯರೊಬ್ಬರು ‘ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next