Advertisement

ಮೆಕ್ಕೆ ಜೋಳ ಬೆಳೆಗಾರರಿಗೆ ಅನ್ಯಾಯ

06:37 PM May 17, 2020 | Naveen |

ಬಳ್ಳಾರಿ: ಇಲ್ಲಿನ ರಾಬಕೊ ಹಾಲು ಉತ್ಪಾದಕರ ಒಕ್ಕೂಟದಿಂದ ಹೆಚ್ಚುವರಿಯಾಗಿ ಮೆಕ್ಕೆಜೋಳ ಖರೀದಿಸಬೇಕು ಎಂದು ಒತ್ತಾಯಿಸಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬುಕ್ಕಾ ಮಲ್ಲಿಕಾರ್ಜುನಗೆ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಮನವಿ ಸಲ್ಲಿಸಿದರು.

Advertisement

ರಾಜ್ಯದ ಹಾಲು ಉತ್ಪಾದಕರ ಸಹಕಾರ ಸಂಘದ ರಾಜ್ಯಾಧ್ಯಕ್ಷ ಬಾಲಚಂದ್ರ ಜಾರಕಿ ಹೊಳಿಯವರು ರಾಜ್ಯದಲ್ಲಿ ರೈತರು ಬೆಳೆದಿರುವ ಮೆಕ್ಕೆಜೋಳವನ್ನು ಸರ್ಕಾರದ ಬೆಂಬಲ ಬೆಲೆ 1760 ರೂಳಿಗೆ ಖರೀದಿಸುತ್ತೇವೆ ಎಂದು ಈಗಾಗಲೇ ಹೇಳಿಕೆ ನೀಡಿದ್ದಾರೆ. ಆದರೆ, ಬಳ್ಳಾರಿ ಜಿಲ್ಲೆಯಲ್ಲಿ ಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ತಾಲೂಕುಗಳಿಗೆ ಸೇರಿದ ಕೇವಲ 89 ರೈತರು ಬೆಳೆದಿದ್ದ 4024 ಕ್ವಿಂಟಾಲ್‌ ಮೆಕ್ಕೆಜೋಳವನ್ನು ಮಾತ್ರ ನೋಂದಾಯಿಸಿಕೊಳ್ಳಲಾಗಿದೆ. ಆದರೆ, ಜಿಲ್ಲೆಯ ಸಿರುಗುಪ್ಪ, ಬಳ್ಳಾರಿ ಗ್ರಾಮಾಂತರ, ಕುರುಗೋಡು, ಕಂಪ್ಲಿ, ಹೊಸಪೇಟೆ, ಸಂಡೂರು ಭಾಗದಲ್ಲಿ ಮೆಕ್ಕೆಜೋಳ ಬೆಳೆದಿರುವ ರೈತರ ನೋಂದಣಿ ಆಗಿಲ್ಲ. ಈ ಕುರಿತು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬುಕ್ಕಾ ಮಲ್ಲಿಕಾರ್ಜುನ ಅವರನ್ನು ಕೇಳಿದರೆ, ಧಾರವಾಡಕ್ಕೆ ಮೆಕ್ಕೆಜೋಳ ಸಾಕು ಎಂದು ತಿಳಿಸಿದ್ದಾರೆ.

ಇದು ಸರಿಯಲ್ಲ. ರಾಜ್ಯ ಸರ್ಕಾರ ರೈತರಿಂದ ಮೆಕ್ಕಜೋಳ ಖರೀದಿಸುವುದಾಗಿ ತಿಳಿಸಿ ಇದೀಗ ಕೇವಲ ಉತ್ತರ ಕರ್ನಾಟಕದಿಂದ 75000 ಕ್ವಿಂಟಲ್‌ ಸಾಕು ಎಂದು ತಿಳಿಸಿದರೆ ಹೇಗೆ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ರೈತರಿಗೆ ಸಂಪೂರ್ಣ ಅನ್ಯಾಯವಾಗಲಿದೆ. ಈ ಕುರಿತು ಆರೋಗ್ಯ ಸಚಿವ ಬಿ.ಶ್ರೀರಾಮುಲುಗೆ ದೂರವಾಣಿ ಕರೆ ಮಾಡಿ ಈ ಅನ್ಯಾಯದ ಕುರಿತು ಪರಿಶೀಲಿಸಿ ಹೆಚ್ಚುವರಿ ಖರೀದಿಸಬೇಕಾಗಿ ವಿನಂತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next