Advertisement

ಜಿಲ್ಲಾದ್ಯಂತ ಮಡಿವಾಳ ಮಾಚಿದೇವ ಜಯಂತಿ

03:02 PM Feb 02, 2020 | Naveen |

ಬಳ್ಳಾರಿ: 12ನೇ ಶತಮಾನದ ಅವತಾರ ಪುರುಷನಾದ ಮಡಿವಾಳ ಮಾಚಿದೇವರು ಜನರ ಮನಸ್ಸಿನಲ್ಲಿದ್ದ ಜಾತಿ ಎಂಬ ಕೊಳೆಯನ್ನು ತೆಗೆಯುವ ಮೂಲಕ ಜಾತಿ ವ್ಯವಸ್ಥೆಯ ಬಗ್ಗೆ ಜಾಗೃತಿಯನ್ನು ಮೂಡಿಸಿದ ಮಹಾನ್‌ ವ್ಯಕ್ತಿಯಾಗಿದ್ದರು ಎಂದು ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಹೇಳಿದರು.

Advertisement

ನಗರದ ಬಿಡಿಎ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಶನಿವಾರದಂದು ಮಡಿವಾಳ ಮಾಚಿದೇವ ಜಯಂತಿ ನಿಮಿತ್ತ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಡಿವಾಳ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ವಿಶೇಷ ಗಮನಹರಿಸಬೇಕು ಎಂದು ಅವರು, ತಮ್ಮ ಸಮುದಾಯದವರು ಈಗಾಗಲೇ ಉನ್ನತ ಹುದ್ದೆಗಳಲಿದ್ದು, ಇನ್ನೂ ಹೆಚ್ಚಿನ ಉನ್ನತ ಹುದ್ದೆಗಳಲ್ಲಿ ಅಲಂಕರಿಸಲಿ ಎಂದರು. ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಕೆ.ಬಿ ಸಿದ್ದಲಿಂಗಪ್ಪ ವಿಶೇಷ ಉಪನ್ಯಾಸ ನೀಡಿದರು.

ಬಳ್ಳಾರಿಯ ಕೆ.ಆರ್‌.ಎರ್ರೇಗೌಡ ವಚನ ಗಾಯನ ಪ್ರಸ್ತುತಪಡಿಸಿದರು. ಮಡಿವಾಳ ಸಮಾಜದ ವತಿಯಿಂದ ಇದೇ ಸಂದರ್ಭದಲ್ಲಿ ಮಡಿವಾಳ ಸಮಾಜದಲ್ಲಿ ಸೇವೆ ಸಲ್ಲಿಸಿದ ಚೇತನ್‌, ಕೆಎಂಎಫ್‌ ನಿರ್ದೇಶಕ ವೀರಶೇಖರ ರೆಡ್ಡಿ, ಹಾಗೂ ಕೃಷ್ಣ ಅವರಿಗೆ ಮಡಿವಾಳ ಮಾಚಿದೇವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ.ಕೆ. ರಂಗಣ್ಣವರ, ಬಳ್ಳಾರಿ ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಎನ್‌. ಧನುಂಜಯ ಹಮಾಲ್‌, ಕೆಎಂಎಫ್‌ ನಿರ್ದೇಶಕ ವೀರಶೇಖರ ರೆಡ್ಡಿ, ಕೆಇಬಿ ಉದ್ಯೋಗಿ ಹೊನ್ನೂರಪ್ಪ ಮಡಿವಾಳ ಸಮಾಜದ ಮುಖಂಡರಾದ ದಾನಪ್ಪ, ಲೆಕ್ಕ ಪರಿಶೋಧಕ ರಾಜ, ಉಪಾಧ್ಯಕ್ಷ ಬಿ.ನಾಗರಾಜ, ಪ್ರಧಾನ ಕಾರ್ಯದರ್ಶಿ ರಾಮಾಂಜಿನಿ, ಮಡಿವಾಳ ಸಮಾಜದ ಮುಖಂಡರು ಹಾಗೂ ಗಣ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next