Advertisement

ಕುಸಿದು ಬಿದ್ದ ಕೊಟ್ಟೂರೇಶ್ವರ ರಥ; ತಪ್ಪಿದ ಅನಾಹುತ, ರಕ್ಷಣಾ ಕಾರ್ಯ

07:12 PM Feb 21, 2017 | Sharanya Alva |

ಬಳ್ಳಾರಿ: ಇಲ್ಲಿನ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವದ ವೇಳೆ ಚಕ್ರದ ಅಚ್ಚು ಮುಡಿದ ಪರಿಣಾಮ 60 ಅಡಿ ಎತ್ತರದ ರಥ ಕುಸಿದು ಬಿದ್ದಿರುವ ಘಟನೆ ಕೂಡ್ಲಗಿಯ ಕೊಟ್ಟೂರಿನಲ್ಲಿ ಮಂಗಳವಾರ ಸಂಭವಿಸಿದೆ, ರಥದ ಕೆಳಗೆ ಹಲವು ಭಕ್ತರು ಸಿಲುಕಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಖಾಸಗಿ ಟಿವಿ ಚಾನೆಲ್ ಗಳಿಗೆ ತಿಳಿಸಿದ್ದಾರೆ.

Advertisement

ಕೊಟ್ಟೂರಿನ ಗುರುಬಸವೇಶ್ವರ ರಥೋತ್ಸವದ ವೇಳೆ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಚಕ್ರದ ಅಚ್ಚು ಮುರಿದ ಪರಿಣಾಮ 60 ಅಡಿ ಎತ್ತರದ ರಥ ಕುಸಿದುಬಿದ್ದಿದೆ. ರಥದ ಕೆಳಗೆ ಸಿಲುಕಿರುವ ಭಕ್ತರನ್ನು ಸ್ಥಳೀಯರು ಹಾಗೂ ಪೊಲೀಸರು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ವರದಿ ವಿವರಿಸಿದೆ.

ರಥೋತ್ಸವದ ವೇಳೆ ಲಕ್ಷಾಂತರ ಭಕ್ತರು ಭಾಗವಹಿಸಿದ್ದರು. 30ಕ್ಕೂ ಹೆಚ್ಚು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next