Advertisement

ಜನವಸತಿಯಿಲ್ಲದ ಕಡೆ ಜಿಂದಾಲ್‌ ಕಾರ್ಖಾನೆ ಸ್ಥಳಾಂತರಿಸಿ

03:47 PM Jun 01, 2020 | Naveen |

ಬಳ್ಳಾರಿ: ಜಿಂದಾಲ್‌ ಕಾರ್ಖಾನೆಯಲ್ಲಿ ಉಕ್ಕು ಉತ್ಪಾದನೆಯಿಂದ ಉತ್ಪತ್ತಿಯಾಗುವ ವಿಷಾನಿಲ ಮಾನವನ ಜೀವಕ್ಕೆ ಕುತ್ತು ತರಲಿದೆ. ಆದ್ದರಿಂದ ಈ ಘಟಕಗಳನ್ನು ಜನವಸತಿ ಇಲ್ಲದ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ಕುಡಿತಿನಿ ಶ್ರೀನಿವಾಸ್‌ ಆಗ್ರಹಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್‌ ಕಾರ್ಖಾನೆಯಲ್ಲಿ ಉಕ್ಕು ಉತ್ಪಾದಿಸುವ ಘಟಕಗಳಲ್ಲಿ ಕೊರೆಕ್ಸ್‌ ಅನಿಲ, ಬ್ಲಾಸ್ಟ್‌ ಫರ್‌ನಿಸ್‌, ಕೊಕೊವನ್‌ ಸೇರಿ ವಿಷಾನಿಲಗಳು ಉತ್ಪತ್ತಿಯಾಗುತ್ತವೆ. ಈ ವಿಷಾನಿಲಗಳು ಸೋರಿಕೆಯಾದಲ್ಲಿ ಮಾನವನ ಜೀವಕ್ಕೆ ಕುತ್ತುಂಟು ಮಾಡಲಿವೆ. ಆದ್ದರಿಂದ ಜಿಂದಾಲ್‌ ಕಾರ್ಖಾನೆಯಲ್ಲಿರುವ ವಿಷಾನಿಲ ಉತ್ಪತ್ತಿಯಾಗುವ ಘಟಕಗಳನ್ನು ಸ್ಥಳಾಂತರಿಸಬೇಕು ಎಂದು ಅವರು ಒತ್ತಾಯಿಸಿದರು.

ಜಿಂದಾಲ್‌ ಕಾರ್ಖಾನೆಯಲ್ಲಿ ಉಕ್ಕು ಉತ್ಪಾದನೆಯಿಂದ ಉತ್ಪತ್ತಿಯಾಗುವ ವಿಷಾನಿಲಕ್ಕೆ ಸಂಸ್ಥೆಯಿಂದ ಯಾವುದೇ ಸುರಕ್ಷಾ ಕ್ರಮ ಕೈಗೊಂಡಿಲ್ಲ. ನಿರ್ಲಕ್ಷ್ಯತನದಿಂದ ವಿಷಾನೀಲ ಸೋರಿಕೆಯಾಗುತ್ತದೆ. ಆದ್ದರಿಂದ ಜನ ವಾಸವಿಲ್ಲದ ಪ್ರದೇಶಗಳಲ್ಲಿ ಈ ಕಾರ್ಖಾನೆ ತೆರೆಯಬೇಕು. ಇದರಿಂದ ಪ್ರಾಣಿ, ಪಕ್ಷಿ, ಪರಿಸರ ಸಂಪತ್ತು ನಾಶವಾಗುತ್ತದೆ. ಈಚೆಗೆ ವಿಶಾಖಪಟ್ಟಣಂನಲ್ಲಿ ನಡೆದ ಅನಿಲ ಸೋರಿಕೆ ದುರಂತದಿಂದ ಸಾವಿರಾರು ಮಂದಿ ಆಸ್ಪತ್ರೆಯಲ್ಲಿದ್ದಾರೆ. ಅವರು ಚೇತರಿಕೆಗೆ ವರ್ಷವಾದರೂ ಬೇಕೆಂದು ವೈದ್ಯರೇ ಹೇಳಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದರು. ಸರ್ಕಾರ ಸುರಕ್ಷತೆ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಈ ಕುರಿತು ಡಿಸಿಗೆ ಮನವಿ ಸಲ್ಲಿಸಲಾಗುವುದು. ಬಳಿಕ ನ್ಯಾಯಾಂಗ ಹೋರಾಟ ಕೈಗೊಳ್ಳುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next