Advertisement

ಹೋಂ ಕ್ವಾರಂಟೈನ್‌ ಮೇಲೆ ನಿಗಾ ವಹಿಸಿ

01:03 PM May 28, 2020 | Naveen |

ಬಳ್ಳಾರಿ: ಹೋಂ ಕ್ವಾರಂಟೈನ್‌ ನಲ್ಲಿರುವವರ ಮೇಲೆ ಜಿಲ್ಲಾಡಳಿತವು ತೀವ್ರ ನಿಗಾವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಂ.ಎಸ್‌. ಶ್ರೀಕರ್‌ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕೋವಿಡ್ ಸ್ಥಿತಿಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೋಂ ಕ್ವಾರಂಟೈನ್‌ನಲ್ಲಿರುವವರ ಚಲನವಲನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಂಟ್ರೋಲ್‌ ರೂಂ ಮೂಲಕ ಪ್ರತಿನಿತ್ಯ ಫಾಲೋಅಫ್‌ ಮಾಡುತ್ತಿರಬೇಕು. ಆರ್‌ಆರ್‌ಟಿ ತಂಡಗಳು ಸದಾ ನಿಗಾವಹಿಸಬೇಕು ಹಾಗೂ ಹೋಂ ಕ್ವಾರಂಟೈನ್‌ ನಲ್ಲಿರುವವರ ಪರಿಶೀಲನೆಗಾಗಿಯೇ ರೂಪಿಸಲಾಗಿರುವ ಆ್ಯಪ್‌ ಮೂಲಕವು ಅವರನ್ನು ಗಮನಿಸುತ್ತಿರಬೇಕು. ಕಡ್ಡಾಯವಾಗಿ ಅವರು ಹೋಂ ಕ್ವಾರಂಟೈನ್ ನಲ್ಲಿರುವಂತೆ ನೋಡಿಕೊಳ್ಳಬೇಕು ಎಂದರು.

ಕೋವಿಡ್‌-19 ಆಸ್ಪತ್ರೆಗಳಲ್ಲಿ 320 ಬೆಡ್‌ ವ್ಯವಸ್ಥೆ: ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆಯನ್ನು ಕೋವಿಡ್‌-19 ಆಸ್ಪತ್ರೆಯನ್ನಾಗಿಸಿ ಕಾರ್ಯನಿರ್ವಹಿಸಲಾಗುತ್ತಿದ್ದು, 180 ಆಕ್ಸಿಜನ್‌ ಬೆಡ್‌, 30 ಐಎಸಿಯು ಬೆಡ್‌ ಸೇರಿದಂತೆ 210 ಬೆಡ್‌ ಸಾಮರ್ಥ್ಯ ಹೊಂದಿದೆ ಹಾಗೂ ತೋರಣಗಲ್ಲುವಿನಲ್ಲಿರುವ ಸಂಜೀವಿನಿ ಆಸ್ಪತ್ರೆಯನ್ನು ಕೋವಿಡ್‌-19 ಆಸ್ಪತ್ರೆಯನ್ನಾಗಿ ಕಾಯ್ದರಿಸಿಲಾಗಿದ್ದು 94 ನಾರ್ಮಲ್‌ ಬೆಡ್‌ ಹಾಗೂ 16 ಐಸಿಯು ಬೆಡ್‌ ವ್ಯವಸ್ಥೆ ಸೇರಿದಂತೆ 110 ಬೆಡ್‌ ಸಾಮರ್ಥ್ಯ ಹೊಂದಿದೆ ಎಂದು ಜಿಲ್ಲಾಧಿಕಾರಿ ನಕುಲ್‌ ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಗಮನಕ್ಕೆ ತಂದರು.

ಜಿಲ್ಲೆಯಲ್ಲಿ ಬಳ್ಳಾರಿಯ ಟಿಬಿ ಸ್ಯಾನಿಟೋರಿಯಂ, ಡೆಂಟಲ್‌ ಕಾಲೇಜು, ಹಳೆ ವಿಮ್ಸ್‌ ನಿರ್ದೇಶಕರ ಕಚೇರಿ, ತೋರಣಗಲ್ಲುವಿನ ಒಪಿಜೆ ಜಿಂದಾಲ್‌ ಕೇಂದ್ರ ಸೇರಿದಂತೆ 4 ಕೋವಿಡ್‌ ಆರೋಗ್ಯ ಕೇಂದ್ರಗಳನ್ನು ಕಾಯ್ದರಿಸಿಲಾಗಿದ್ದು 457 ಬೆಡ್‌ಗಳ ವ್ಯವಸ್ಥೆ ಇದೆ ಎಂದು ವಿವರಿಸಿದ ಅವರು ಎನ್‌ಎಂಡಿಸಿ ನೀಡಲಾದ 75 ಲಕ್ಷ ರೂ. ಹಾಗೂ ಜಿಲ್ಲಾ ಖನಿಜ ನಿಧಿಯಿಂದ ಕೆಲವೊಂದಿಷ್ಟು ಹಣವನ್ನು ಜಿಲ್ಲಾಸ್ಪತ್ರೆ ಹಾಗೂ ವಿಮ್ಸ್‌ನಲ್ಲಿ ಕೋವಿಡ್‌ ಸಂಬಂಧಿತ ವೈದ್ಯಕೀಯ ಉಪಕರಣಗಳಿಗೆ ಖರ್ಚು ಮಾಡಲಾಗಿದೆ ಎಂದರು.

7198 ವಲಸೆ ಕಾರ್ಮಿಕರು ತವರೂರಿಗೆ: ಬಳ್ಳಾರಿ ಜಿಲ್ಲೆಯಿಂದ ವಿವಿಧ ರಾಜ್ಯಗಳಿಗೆ 7198 ವಲಸೆ ಕಾರ್ಮಿಕರು/ಇತರೆ ವ್ಯಕ್ತಿಗಳು ಶ್ರಮಿಕ ರೈಲಿನ ಮೂಲಕ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅವರು ವಿವರಿಸಿದರು. ಬಿಹಾರ, ಉತ್ತರಪ್ರದೇಶ, ಜಾರ್ಖಂಡ್‌, ಛತ್ತಿಸಗಡ್‌, ಮಧ್ಯಪ್ರದೇಶದ ವಲಸೆ ಕಾರ್ಮಿಕರನ್ನು ಜಿಲ್ಲೆಯ ಹೊಸಪೇಟೆ, ಬಳ್ಳಾರಿ ರೈಲು ನಿಲ್ದಾಣದ ಮೂಲಕ ಹಾಗೂ ಬಳ್ಳಾರಿಯಿಂದ ಬಸ್‌ ಮೂಲಕ ಕರೆದೊಯ್ದು ಬೆಂಗಳೂರು, ಕಲಬುರ್ಗಿ, ಹುಬ್ಬಳ್ಳಿ ರೈಲು ನಿಲ್ದಾಣದ ಮೂಲಕವೂ ಕಳುಹಿಸಿಕೊಡಲಾಗಿದೆ. ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರು ನಮ್ಮ ರಾಜ್ಯದಲ್ಲಿದ್ದು, ಅವರನ್ನು ಕಳುಹಿಸಿಕೊಡಲಾಗುವುದು. ಅದಕ್ಕೂ ಮುನ್ನ ಅವರ ಆರೋಗ್ಯ ತಪಾಸಣೆ ಮಾಡಿ ಅತ್ಯಂತ ಸುರಕ್ಷಿತವಾಗಿ ಕಳುಹಿಸಿಕೊಡಲಾಗಿದೆ ಎಂದರು.

Advertisement

ವಿಮ್ಸ್‌ ವೈದ್ಯಕೀಯ ಲ್ಯಾಬ್‌ನಲ್ಲಿ ಸ್ವಾಬ್‌ ತಪಾಸಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುದಿàಘ ಚರ್ಚೆಗಳು ನಡೆದವು. ಸಭೆಯಲ್ಲಿ ಎಸ್ಪಿ ಸಿ.ಕೆ.ಬಾಬಾ, ಜಿಪಂ ಸಿಇಒ ಕೆ.ನಿತೀಶ್‌, ಪ್ರೊಬೇಷನರಿ ಐಎಎಸ್‌ ಈಶ್ವರ್‌ ಕಾಂಡೂ, ವಿಮ್ಸ್‌ ನಿರ್ದೇಶಕ ಡಾ| ದೇವಾನಂದ, ಡಿಎಚ್‌ಒ ಡಾ| ಜನಾರ್ಧನ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಎನ್‌.ಬಸರೆಡ್ಡಿ, ವಿಮ್ಸ್‌ ಅಧಿಧೀಕ್ಷಕ ಮರಿರಾಜ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ಸೇರಿದಂತೆ ಇನ್ನಿತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next