Advertisement

ಭತ್ತ-ರಾಗಿ-ಜೋಳ ಖರೀದಿ ಅವಧಿ ವಿಸ್ತರಣೆ

06:34 PM Jun 14, 2020 | Naveen |

ಬಳ್ಳಾರಿ: 2019-20 ಮತ್ತು 2020-21ನೇ ಸಾಲಿನ ಹಿಂಗಾರು ಋತುವಿನಲ್ಲಿ ರೈತರು ಬೆಳೆದ ಭತ್ತ, ರಾಗಿ, ಜೋಳವನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಲು ರೈತರಿಗೆ ಅನುಕೂಲವಾಗುವಂತೆ ರೈತರ ನೋಂದಣಿ ಕಾರ್ಯವನ್ನು ಜೂ.30 ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷ, ಡಿಸಿ ಎಸ್‌.ಎಸ್‌. ನಕುಲ್‌ ತಿಳಿಸಿದ್ದಾರೆ.

Advertisement

2020-21ನೇ ಸಾಲಿನ ಹಿಂಗಾರು (ರಬಿ) ಋತುವಿನಲ್ಲಿ ಬೆಳೆದ ಭತ್ತ, ರಾಗಿ, ಜೋಳವನ್ನು ನೋಂದಾಯಿಸಿಕೊಂಡು ಖರೀದಿಸಬೇಕು. ಮುಂಗಾರು ಮತ್ತು ಹಿಂಗಾರು ಋತುವಿನ ಖರೀದಿಯ ಲೆಕ್ಕಪತ್ರಗಳನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ಖರೀದಿಯು ಈಗಾಗಲೇ ತಿಳಿಸಿರುವಂತೆ ಫ್ರೂಟ್ಸ್‌ ತಂತ್ರಾಂಶದಲ್ಲಿ ರೈತರು ಮಾಡಿರುವ ನೋಂದಣಿ ಆಧಾರದಲ್ಲಿ ನಡೆಯಬೇಕು. ಮುಂಗಾರು ಋತುವಿನಲ್ಲಿ ಬೆಳೆದ ಬೆಳೆ ಬಗ್ಗೆ ಈಗಾಗಲೇ ನೋಂದಾಯಿಸಿದ್ದರೆ ಪುನಃ ನೋಂದಾಯಿಸುವ ಅವಶ್ಯಕತೆ ಇರುವುದಿಲ್ಲ. ಸಾಮಾನ್ಯ ಭತ್ತ ಪ್ರತಿ ಕ್ವಿಂಟಲ್‌ ಗೆ 1815 ರೂ., ಗ್ರೇಡ್‌ “ಎ’ ಭತ್ತ ಪ್ರತಿ ಕ್ವಿಂಟಲ್‌ಗೆ 1835 ರೂ. ನಿಗದಿಪಡಿಸಲಾಗಿದೆ. ರಾಗಿ ಉತ್ಪನ್ನಕ್ಕೆ 3150 ರೂ., ಹೈಬ್ರಿಡ್‌ ಜೋಳಕ್ಕೆ 2550 ರೂ., ಮತ್ತು ಮಾಲ್ದಂಡಿ ಜೋಳಕ್ಕೆ 2570 ರೂ.ಗಳ ಕನಿಷ್ಠ ಬೆಂಬಲ ಬೆಲೆ ನಿಗಧಿ ಪಡಿಸಲಾಗಿದೆ.

ಬೆಂಬಲ ಬೆಲೆ ಯೋಜನೆಯ ಮೂಲಕ ಜಿಲ್ಲೆಯ ಬಳ್ಳಾರಿ, ಕುರುಗೋಡು, ಸಿರುಗುಪ್ಪ ತಾಲೂಕುಗಳಲ್ಲಿ ಬಿಳಿಜೋಳ ಮತ್ತು ಭತ್ತ ಖರೀದಿಸಲಾಗುತ್ತದೆ. ಉಳಿದ ಸಂಡೂರು, ಕೂಡ್ಲಿಗಿ, ಕೊಟ್ಟೂರು, ಹೊಸಪೇಟೆ, ಕಂಪ್ಲಿ, ಎಚ್‌.ಬಿ.ಹಳ್ಳಿ, ಹಡಗಲಿ, ಹರಪನಹಳ್ಳಿ ತಾಲೂಕುಗಳ ಆಯಾ ಎ.ಪಿ.ಎಂ.ಸಿ. ಯಾರ್ಡ್‌ಗಳಲ್ಲಿ ಭತ್ತ, ರಾಗಿ ಮತ್ತು ಬಿಳಿಜೋಳ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಕನಿಷ್ಠ ಬೆಂಬಲೆ ಯೋಜನೆಯಡಿ ಸಂಗ್ರಾಹಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗೆ ಪಾಸ್‌ ಹಾಗೂ ಮಾಸ್ಕ್ಗಳನ್ನು ಕೆಎಫ್‌ಸಿಎಸ್‌ ಸಿಯ ಜಿಲ್ಲಾ ವ್ಯವಸ್ಥಾಪಕರ ಬಳಿ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next