Advertisement

ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯ ಈದ್‌ಮಿಲಾದ್‌

02:59 PM Nov 11, 2019 | Naveen |

ಬಳ್ಳಾರಿ: ಇಸ್ಲಾಂ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್‌ ಮಿಲಾದ್‌ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸಲ್ಮಾನರು ಸಡಗರ, ಸಂಭ್ರಮದಿಂದ ಭಾನುವಾರ ಆಚರಿಸಿದರು.

Advertisement

ಪ್ರವಾದಿ ಮಹಮ್ಮದ್‌ ಪೈಗಂಬರ್‌ ಜನ್ಮದಿನಾಚರಣೆ ನಿಮಿತ್ತ ಭಾನುವಾರ ಬೆಳಗ್ಗೆ ಮಂದಿರಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸಲ್ಮಾನರು ಬಳಿಕ ಸಿಹಿ ಪಾಯಸ, ಬ್ರೆಡ್‌, ಬಿಸ್ಕತ್‌ಗಳನ್ನು ದಾನ ಮಾಡಿದರು.

ನಗರದ ಬಹುತೇಕ ಕಡೆ ರಸ್ತೆಬದಿಗಳಲ್ಲಿ ಪಾಯಸದೊಂದಿಗೆ ಬ್ರೆಡ್‌, ಬಿಸ್ಕತ್‌ಗಳನ್ನು ಸ್ಥಳೀಯರಿಗೆ ವಿತರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜತೆಗೆ ಹಬ್ಬದ ಮುನ್ನಾದಿನವಾದ ಶನಿವಾರ ರಾತ್ರಿ ಪ್ರವಾದಿ ಮಹಮ್ಮದ್‌ ಪೈಗಂಬರ್‌ ಅವರ ಬಗ್ಗೆ ಪ್ರವಚನಗಳು ನಡೆದವು.

ಬಳಿಕ ಮುಸಲ್ಮಾನ ಸಮುದಾಯದಿಂದ ನಗರದ ಮಿಲ್ಲರ್‌ ಪೇಟೆ, ಕೌಲ್‌ಬಜಾರ್‌, ಸಂಗಮ್‌ ವೃತ್ತ, ಬೆಳಗಲ್‌ ಕ್ರಾಸ್‌, ಬ್ರೂಸ್‌ಪೇಟೆ, ವಡ್ಡರಬಂಡೆ, ಹುಸೇನ್‌ನಗರ, ಕೊಲಿಮಿಬಜಾರ್‌, ದೊಡ್ಡ ಮಾರುಕಟ್ಟೆ ಬೆಂಗಳೂರು ರಸ್ತೆಗಳಲ್ಲಿ ಮೆಕ್ಕಾ, ಮದೀನಾದ ಪ್ರತಿಕೃತಿಗಳನ್ನು ಬೃಹತ್‌ ಮೆರವಣಿಗೆ ಮಾಡುವ ಮೂಲಕ ಗಮನ ಸೆಳೆದರು. ಮೆರವಣಿಗೆಯಲ್ಲಿ ಬೃಹತ್‌ಮಟ್ಟದ ಧ್ವನಿವರ್ಧಕಗಳನ್ನು ಬಳಸಿಕೊಳ್ಳುವ ಮೂಲಕ ಮುಸಲ್ಮಾನರು ಈದ್‌ಮಿಲಾದ್‌ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಪೊಲೀಸರು ಸ್ತಬ್ಧಚಿತ್ರ ಮೆರವಣಿಗೆ ವೇಳೆ ಸೂಕ್ತ ಬಂದೋಬಸ್ತ್ ಒದಗಿಸಿದರು. ಮೆರವಣಿಗೆ ನಡೆಯುತ್ತಿದ್ದ ಬಹುತೇಕ ರಸ್ತೆಗಳಲ್ಲಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.

Advertisement

ಭೋಜನಕೂಟ: ಹಬ್ಬದ ಅಂಗವಾಗಿ ಮುಸ್ಲಿಮರ ಮನೆಗಳಲ್ಲಿ ಭೋಜನ ಕೂಟಗಳು ಏರ್ಪಾಡಾಗಿದ್ದವು. ಸ್ನೇಹಿತರು, ಬಂಧುಗಳನ್ನು ಆಹ್ವಾನಿಸಿ ಭೋಜನ ಸವಿದರು.

Advertisement

Udayavani is now on Telegram. Click here to join our channel and stay updated with the latest news.

Next