Advertisement

ಇ-ಸ್ಪಂದನ ಕೇಂದ್ರಕ್ಕೆ ಚಾಲನೆ

04:06 PM Jan 29, 2020 | Naveen |

ಬಳ್ಳಾರಿ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಆರಂಭಿಸಲಾಗಿರುವ ಇ-ಸ್ಪಂದನೆ ಕೇಂದ್ರವನ್ನು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಚಾಲನೆ ನೀಡಿದರು.

Advertisement

ಸಾರ್ವಜನಿಕರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸುವ ಉದ್ದೇಶದಿಂದ ಈ ಕಂಟ್ರೋಲ್‌ ರೂಂ ಆರಂಭಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಸಾರ್ವಜನಿಕ ಕುಂದು ಕೊರತೆಗಳನ್ನು ವಿದ್ಯುನ್ಮಾನ ವ್ಯವಸ್ಥೆಯ ಮುಖಾಂತರ ಶೀಘ್ರ ಪರಿಹರಿಸಲಾಗುತ್ತದೆ.

ಇದಕ್ಕೆ ಒಂದು ವಾಟ್ಸ್‌ಆ್ಯಪ್‌ ನಂ:8277888866 ಮೊಬೈಲ್‌ ನಂಬರ್‌ ಫಿಕ್ಸ್‌ ಮಾಡಲಾಗುತ್ತಿದ್ದು, ಅದಕ್ಕೆ ಸಾರ್ವಜನಿಕರು ಯಾವುದೇ ಇಲಾಖೆಗೆ ಸಂಬಂಧಿಸಿದ ದೂರು / ಸಮಸ್ಯೆ / ಕುಂದುಕೊರತೆಗಳಿದ್ದಲ್ಲಿ ಈ ನಂಬರ್‌ಗೆ ಸಂಬಂಧಿಸಿದ ಫೋಟೊ/ ವಿಡಿಯೋ / ಸಂದೇಶಗಳನ್ನು (ವಿವರಗಳೊಂದಿಗೆ) ಸಲ್ಲಿಸಬಹುದಾಗಿದೆ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸಬಹುದಾಗಿದೆ. ತಮ್ಮ ದೂರು/ಸಮಸ್ಯೆ/ಕುಂದುಕೊರತೆಗಳ ಪರಿಹಾರಕ್ಕಾಗಿ ಆ ಸಂದೇಶಗಳನ್ನು ಸಂಬಂಧಪಟ್ಟ ಇಲಾಖೆಗೆ ಶೀಘ್ರ ರವಾನಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅದೇ ರೀತಿ 1077 ಸಂಖ್ಯೆಗೆ ಉಚಿತವಾಗಿ ಕರೆ ಮಾಡಬಹುದು.

08392-277100 ಸಂಖ್ಯೆಗೆ ಕರೆ ಮಾಡಿ ಸಹ ಅಹವಾಲುಗಳ ಮೂಲಕ ದೂರು ದಾಖಲಿಸಬಹುದು. ಡಿಸಿ ಕಚೇರಿಯಲ್ಲಿ ಆರಂಭಿಸಲಾಗಿರುವ ಇ-ಸ್ಪಂದನೆ ಕೋಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ದೂರುದಾರರ ಹೆಸರು, ದೂರಿನ ವಿವರ ಹಾಗೂ ವಿಳಾಸ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆ ಪಡೆದುಕೊಂಡು ಯಾವ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಇರುತ್ತದೆಯೋ ಅದಕ್ಕೆ ಸಂಬಂಧಿಸಿದ ಜಿಲ್ಲಾಮಟ್ಟದ ಅಥವಾ ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಸ್‌ಎಂಎಸ್‌ ಮೂಲಕ ರವಾನಿಸಲಿದ್ದಾರೆ. ಬರಲಿರುವ ಎಸ್‌ಎಂಎಸ್‌ ಲಿಂಕ್‌
ನ್ನು ಒತ್ತುವುದರ ಮೂಲಕ ಅವರು ನೋಡಿಕೊಂಡು ಅದಕ್ಕೆ ಸಂಬಂಧಿಸಿದ ನಿರ್ದಿಷ್ಟ ಉತ್ತರವನ್ನು ಹಾಗೂ ಅದಕ್ಕೆ ಸಂಬಂಧಿ ಸಿದ ದಾಖಲೆಗಳನ್ನು ಕಳುಹಿಸಲಿದ್ದಾರೆ. ಅವರು ಕಳುಹಿಸಿರುವುದಕ್ಕೆ ಸ್ವೀಕೃತಿ ಮತ್ತು ದೂರುದಾರರಿಗೂ ಕೂಡ ತಮ್ಮ ದೂರಿನ ಪ್ರಗತಿಯನ್ನು ಅವರಿಗೆ ಬರಲಿರುವ ಎಸ್‌ಎಂಎಸ್‌ ಲಿಂಕ್‌ ಮೂಲಕವೇ ವೀಕ್ಷಿಸಬಹುದಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಇ-ಸ್ಪಂದನ ಕೋಶಕ್ಕೆ ಮಾತ್ರ ಲಾಗಿನ್‌ ವ್ಯವಸ್ಥೆ ಇರುತ್ತದೆ.

ಅಧಿಕಾರಿಗಳಿಗೆ ಯಾವುದೇ ರೀತಿಯ ಲಾಗಿನ್‌ ಇರುವುದಿಲ್ಲ. ಎಸ್‌ಎಂಎಸ್‌ನಲ್ಲಿ ಬಂದಿರುವ ವೆಬ್‌ಲಿಂಕ್‌ನ್ನು ಕ್ಲಿಕ್ಕಿಸಿ, ಸದರಿ ಕುಂದುಕೊರತೆಯ ಬಗ್ಗೆ ತಮ್ಮ ಕ್ರಮವನ್ನು ನಮೂದಿಸಲಿದ್ದಾರೆ. ಅಧಿಕಾರಿಗಳು ತಮ್ಮ ಹಂತದಲ್ಲಿ ಕ್ರಮವಹಿಸದೆ ಬಾಕಿ ಇರುವ ಪ್ರಕರಣಗಳನ್ನು ಪರಿಶೀಲಿಸಬಹುದಾಗಿದೆ ಎಂದರು.

Advertisement

ಜಿಲ್ಲಾಮಟ್ಟದ ಅಧಿ ಕಾರಿಗಳು ತಮಗೆ ಬಂದ ಕೆಳಹಂತದ ಅಧಿ ಕಾರಿಗಳಿಗೆ ಎಸ್‌ಎಂಎಸ್‌ ಫಾರ್ವರ್ಡ್‌ ಮಾಡಿ ಅವರಿಂದ ತಮ್ಮ ಕ್ರಮ ನಮೂದಿಸಬಹುದು. ಸಾಮಾನ್ಯವಾಗಿ ಒಂದು ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳಿಗೆ 30 ದಿನಗಳ ಕಾಲಾವಶಕಾಶ ನೀಡಲಾಗಿದ್ದು, ಅಷ್ಟರೊಳಗೆ ನಿರ್ಧೀಷ್ಟ ಉತ್ತರ ಹಾಗೂ ಸಂಬಂಧಿಸಿದ ದಾಖಲಾತಿಗಳನ್ನು ಲಗತ್ತಿಸಿ ಕಳುಹಿಸಲು ಅವಧಿ ನಿಗದಿಪಡಿಸಲಾಗಿದೆ. ಕುಂದುಕೊರತೆ ವರ್ಗಿಕರಿಸಲು ಆಯಾ ವರ್ಗದ ಕುಂದುಕೊರತೆಗಳಿಗೆ ಅಧಿ ಕಾರಿಗಳು ಕ್ರಮವಹಿಸಲು ನಿರ್ದಿಷ್ಟ ದಿನಗಳನ್ನು ನಿಗದಿಪಡಿಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ವಿವರಿಸಿದರು.

ಇ-ಸ್ಪಂದನೆ ವೆಬ್‌ಸೈಟ್‌ನ್ನು ಬಳ್ಳಾರಿಯ ಎನ್‌ ಐಸಿ ತಂಡದ ಅಧಿ ಕಾರಿಗಳಾದ ಶಿವಪ್ರಕಾಶ ವಸ್ತ್ರದ ಮತ್ತು ವೆಂಕಟರಮಣ ನೇತೃತ್ವದ ತಂಡ ಅಭಿವೃದ್ಧಿಪಡಿಸಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಎನ್‌ಐಸಿ ಅ ಧಿಕಾರಿಗಳಾದ ಶಿವಪ್ರಕಾಶ ವಸ್ತ್ರದ್‌, ವೆಂಕಟರಮಣ, ತಹಶೀಲ್ದಾರ್‌ ವಿಶ್ವಜಿತ್‌ ಮೆಹತಾ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next