Advertisement

ಕೋವಿಡ್ ಔಷಧ ಕಡಿಮೆ ಬೆಲೆಗೆ ಆಗುವಂತೆ ಕ್ರಮಕ್ಕೆ ಮನವಿ

05:58 PM Jul 09, 2020 | Naveen |

ಬಳ್ಳಾರಿ: ಕೋವಿಡ್‌ ನಿರೋಧಕ-19 ರೆಮ್ಟಿಸಿವರ್‌ ಔಷಧವನ್ನು ಭಾರತದಲ್ಲಿ ಜನರಿಕ್‌ ಔಷಧವನ್ನಾಗಿ ಉತ್ಪಾದಿಸಬೇಕೆಂದು ಆಗ್ರಹಿಸಿ ಸಿಪಿಐಎಂ ಕಾರ್ಯಕರ್ತರು ನಗರದ ಡಿಸಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

Advertisement

ಕೇವಲ 100 ರೂಗೆ ಉತ್ಪಾದಿಸಬಹುದಾದ ಈ ಔಷಧವನ್ನು ಔಷಧ ತಯಾರಿಕಾ ಕಂಪನಿಗಳು ಧನದಾಹಕ್ಕೆ ಬಿದ್ದು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದರಲ್ಲಿ ನಿರತವಾಗಿವೆ. ಮೂಲಗಳ ಪ್ರಕಾರ ಅಮೆರಿಕಾದಲ್ಲಿ ಈ ಔಷಧ ಈಗಾಗಲೇ 2.25 ಲಕ್ಷ ರೂ.ಗೆ ಮಾರಾಟ ಮಾಡಲು ನಿಗದಿ ಮಾಡಲಾಗುತ್ತಿದೆ ಎನ್ನಲಾಗಿದೆ. ಭಾರತದಲ್ಲೂ ಸಹ ಅನೇಕ ಕಂಪನಿಗಳು ಪೇಟೆಂಟ್‌ ಪಡೆದು ಉತ್ಪಾದನೆ ಶುರುಮಾಡುವ ತವಕದಲ್ಲಿವೆ. ಭಾರತದಲ್ಲಿ ಉತ್ಪಾದಿಸುವ ಔಷಧಕ್ಕೆ ಕನಿಷ್ಠ 30-35 ಸಾವಿರ ರೂ. ಆಗಬಹುದು ಎಂಬ ಮಾತುಗಳು ಕೇಳಿಬಂದಿವೆ. ಇದರಿಂದ ಈ ಔಷಧ ಜನರಿಗೆ ತಲುಪುವುದು ಅಸಾಧ್ಯ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಕ್ಷಣ ಕ್ರಮ ವಹಿಸಬೇಕು. ಅತಿ ಕಡಿಮೆ ಬೆಲೆಗೆ ಜನರಿಗೆ ಸಿಗುವಂತೆ ಕೊರೊನಾ ಔಷಧ ಮಾರಾಟ ಮಾಡಲು ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ರವಾನಿಸಿದರು. ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ, ನಗರ ಕಾರ್ಯದರ್ಶಿ ಜೆ.ಚಂದ್ರಕುಮಾರಿ, ಸದಸ್ಯ ಪಿ.ಆರ್‌. ವೆಂಕಟೇಶ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ. ಸತ್ಯಬಾಬು, ರಂಗನಾಥ, ಜೆ.ಎಸ್‌. ಮೂರ್ತಿ ಮೆರವಣಿಗೆ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next