Advertisement

ನಾನು ಕಾಂಗ್ರೆಸ್‌ ಬಿಡಲ್ಲ-ಕ್ಷೇತ್ರ ಬದಲಿಸಲ್ಲ: ಬಿ.ನಾಗೇಂದ್ರ

03:59 PM Jun 29, 2020 | Naveen |

ಬಳ್ಳಾರಿ: ಕಾಂಗ್ರೆಸ್‌ ಪಕ್ಷ ಬಿಡಲ್ಲ, ಗ್ರಾಮೀಣ ಕ್ಷೇತ್ರ ಬದಲಿಸಲ್ಲ, ಯಾರೇ ನನ್ನ ವಿರುದ್ಧ ಸ್ಪರ್ಧೆ ಮಾಡಿದರೂ ನಮ್ಮ ಕ್ಷೇತ್ರದ ಜನರ ಬೆಂಬಲ, ಕಾರ್ಯಕರ್ತರ ಶಕ್ತಿ ನನ್ನ ಬೆನ್ನಿಗಿದೆ ಎಂದು ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಹೇಳಿದರು.

Advertisement

ನಗರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಜುಲೈ 2ರ ಪದಗ್ರಹಣ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ವಿಶ್ವದಲ್ಲೇ ಕಾಂಗ್ರೆಸ್‌ ಪಕ್ಷಕ್ಕೆ ತನ್ನದೇ ಆದ ಸ್ಥಾನ ಇದೆ. 1996 ರಲ್ಲಿಯೇ ನಾನು ಯುವ ಕಾಂಗ್ರೆಸ್‌ನಲ್ಲಿದ್ದೆ. ನಂತರ ಹಲವು ಕಾಣಗಳಿಂದ ಬಿಜೆಪಿಗೆ ಹೋಗಿ ಬಂದೆ. ಆದರೆ ನನ್ನನ್ನು ಸಿದ್ದರಾಮಯ್ಯ ಮೊದಲಾದ ಮುಖಂಡರು ಮತ್ತೆ ಕಾಂಗ್ರೆಸ್‌ಗೆ ಕರೆತಂದು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧಿಸಲು ಒತ್ತಾಯ ಪೂರ್ವಕವಾಗಿ ಸೂಚಿಸಿದರು. ಅದನ್ನು ಪಾಲಿಸಿದೆ. ಜನತೆ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದು ಸ್ಮರಿಸಿದರು.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರು ಮತ್ತು ನನ್ನ ನಡುವೆ ಉತ್ತಮ ಸಂಬಂಧ ಇಲ್ಲ ಎಂದು ಸಹ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ, ನಾನು ಮತ್ತು ಅವರು ಎರಡು ತಾಸು ಫೋನ್‌ನಲ್ಲಿ ಮಾತನಾಡುತ್ತೇವೆ. ನಮ್ಮಲ್ಲಿ ಉತ್ತಮ ಸಂಬಂಧವಿದೆ. ಕಾರ್ಯಕರ್ತರು ಸುಳ್ಳು ಮಾತುಗಳಿಗೆ ಮಹತ್ವ ನೀಡಬೇಡಿ ಎಂದರು.

ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಕ್ಷೇತ್ರದ 19 ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೂರು ಕಡೆಗಳಲ್ಲಿ ಎಲ್‌ಇಡಿ ಪರದೆ ಮೂಲಕ ವೀಕ್ಷಣೆಗೆ ವ್ಯವಸ್ಥೆ ಮಾಡಲು ಸೂಚಿಸಿದರು. ಇನ್ನು ನಗರದ 9 ವಾರ್ಡುಗಳಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ವ್ಯವಸ್ಥೆ ಮಾಡಬೇಕು. ಆದರೆ ವೀಕ್ಷಣೆಗೆ ಬರುವ ಜನರಿಗೆ ಖಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಗತ್ಯವಾದ ಮಾಸ್ಕ್ ಗಳನ್ನು ನೀಡುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಗೌತಮ್‌, ನಗರ ಜಿಲ್ಲಾಧ್ಯಕ್ಷ ಮಹಮ್ಮದ್‌ ರಫೀಕ್‌, ಹುಮಾಯೂನ್‌ ಖಾನ್‌, ಉಮೇಶ್‌, ಹೊನ್ನೂರಪ್ಪ, ಎಲ್‌,ಮಾರೆಣ್ಣ, ಎ.ಮಾನಯ್ಯ, ಅಸುಂಡಿ ನಾಗರಾಜ್‌ಗೌಡ, ಬಸವರಾಜ್‌, ರವಿಕುಮಾರ್‌, ನಾಗರಾಜ್‌, ಜಗನ್‌ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next