Advertisement

Bellary; ತೆರಿಗೆ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬನ್ನಿ..: ರವಿ ಕುಮಾರ್ ಸವಾಲು

02:12 PM Mar 05, 2024 | Team Udayavani |

ಬಳ್ಳಾರಿ: ಕೇಂದ್ರ ಸರ್ಕಾರದ ಬರಬೇಕಾದ ತೆರೆಗೆ ಪಾಲಿನ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಯಾವ ಸರ್ಕಾರದಲ್ಲಿ ಹೆಚ್ಚಿನ ಅನುದಾನ ಬಂದಿದೆ ಎನ್ನುವ ವಿಚಾರದಲ್ಲಿ ಚರ್ಚೆಗೆ ಬನ್ನಿ. ಬಹಿರಂಗ ಚರ್ಚೆಗೆ ಸಿದ್ಧ ಎಂದ ಪರಿಷತ್ತು ಸದಸ್ಯ ರವಿ ಕುಮಾರ್ ಸವಾಲೆಸೆದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರದಲ್ಲಿ ಹತ್ತು ವರ್ಷಕ್ಕೆ ಬಂದಿರುವುದು 81,795 ಕೋಟಿ ಹಣ. ಎನ್ ಡಿಎ ಮೈತ್ರಿಕೂಟದಲ್ಲಿ 2,85,452 ಕೋಟಿ ಹಣ ತೆರಿಗೆ ರೂಪದಲ್ಲಿ ಬಂದಿದೆ ಎಂದರು.

ಸಿದ್ದರಾಮಯ್ಯ ಹೇಳಿರುವುದೆಲ್ಲ ಸುಳ್ಳು. ಬಹಿರಂಗ ಚರ್ಚೆಗೆ ಬನ್ನಿ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಹೇಳುವ ಸಿದ್ದರಾಮಯ್ಯಗೆ ಟೀಕೆ ಮಾಡೋದು ಬಿಟ್ಟರೆ ಬೇರೇನು ಗೊತ್ತಿಲ್ಲ. ಅನುದಾನದ ವಿಚಾರದಲ್ಲಿ ಸರ್ಕಾರದ ವಿರುದ್ಧ ಶಾಸಕರು ಅಸಮಾಧಾನಗೊಂಡಿದ್ದಾರೆ. ಸರ್ಕಾರ ಹಳೇ ಕಲ್ಲು ಹೊಸ ಬಿಲ್ ಹೊಸ ಘೋಷ ವಾಕ್ಯ ಪ್ರಾರಂಭ ಮಾಡಿದ್ದಾರೆ ಎಂದರು.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಹೇಳುತ್ತಾರೆಂದರೆ ಕಾನೂನು ಸುವ್ಯವಸ್ಥೆ ಏನಾಗಿದೆ? ಮೂರು ಜನರನ್ನು ಬಂಧಿಸಿದ್ದಾರೆ. ಇನ್ನುಳಿದವರನ್ನು ಯಾಕೆ ಬಂಧಿಸಿಲ್ಲ? ಪಾಸ್ ನೀಡಿದ್ದು 25 ಜನರಿಗೆ ಎಲ್ಲರನ್ನೂ ಬಂಧಿಸಿ. ಖಡ್ಗದ ಮೆರವಣಿಗೆ, ಬಾಂಬ್ ಬ್ಲಾಸ್ಟ್  ರಾಜ್ಯದಲ್ಲಿ ಏನೆಲ್ಲಾ ಅನಾಹುತ ನಡೆಯುತ್ತಿದ್ದರೂ ಕಾನೂನು ಸುವ್ಯವಸ್ಥಿತ ಎಲ್ಲಿದೆ? ಸರ್ಕಾರ ಎಲ್ಲದರಲ್ಲೂ ವಿಫಲವಾಗಿದೆ. ಪಾಕಿಸ್ತಾನ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸೀರ್ ಹುಸೇನ್ ಅವರನ್ನು ಮೊದಲು ಎ.1 ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next