Advertisement
48 ಉಪನ್ಯಾಸಕರು ಇದ್ದ ಕಾಲೇಜಿನಲ್ಲಿ ಐವರು ಖಾಯಂ ಉಪನ್ಯಾಸಕರ ವರ್ಗಾ ವಣೆ ಹಾಗೂ 42 ಮಂದಿ ಅತಿಥಿ ಉಪನ್ಯಾಸಕರ ರದ್ದತಿಯಿಂದ ಕಾಲೇಜಿನಲ್ಲಿ ಪ್ರಾಂಶುಪಾಲರೊಬ್ಬರನ್ನು ಹೊರತು ಪಡಿಸಿ ಉಳಿದೆಲ್ಲ ಹುದ್ದೆಗಳು ಖಾಲಿ ಆಗಿತ್ತು. ಉಪನ್ಯಾಸಕರು ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ಅಘೋಷಿತ ರಜೆ ದೊರೆತಿರುವ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು.
13 ಮಂಜೂರಾತಿ ಹುದ್ದೆಗಳಲ್ಲಿ 1 ಹುದ್ದೆ ಯಲ್ಲಿ ಮಾತ್ರ ಉಪನ್ಯಾಸಕರಿದ್ದು, ಉಳಿದ ಎಲ್ಲ ಹುದ್ದೆಗಳಲ್ಲಿ ಅತಿಥಿ ಉಪನ್ಯಾಸಕರು ಕರ್ತವ್ಯ ನಿಭಾಯಿಸಬೇಕಿದೆ. ಹಾಗಾಗಿ ಪೂರ್ಣ ಕಾಲಿಕ ಉಪನ್ಯಾಸಕರ ನೇಮಕಕ್ಕೆ ಆಗ್ರಹ ಕೇಳಿ ಬಂದಿದೆ. ಕಾಲೇಜಿಗೆ ವಾರದೊಳಗೆ ಪೂರ್ಣಕಾಲಿಕ ಉಪ ನ್ಯಾಸಕರು ಆಗಮಿಸುವ ಬಗ್ಗೆ ಮಾಹಿತಿ ದೊರೆತಿದೆ.