Advertisement

ಬಳ್ಳಾರಿ ನಗರ: ಫಲಿತಾಂಶಕ್ಕೂ ಮುನ್ನ ಭವಿಷ್ಯ ನಿರ್ಧರಿಸಿಕೊಂಡ ಜೆಡಿಎಸ್ ಅಭ್ಯರ್ಥಿ ಅನಿಲ್ ಲಾಡ್

12:58 PM May 08, 2023 | Team Udayavani |

ಬಳ್ಳಾರಿ: ವಿಧಾನಸಭೆ ಚುನಾವಣೆಯಲ್ಲಿ 30 ಸಾವಿರಕ್ಕೂ ಹೆಚ್ಚು ಮತಗಳು ಲಭಿಸಲಿವೆ ಎಂದಿರುವ ಬಳ್ಳಾರಿ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅನಿಲ್ ಲಾಡ್, ಅಧಿಕೃತ ಫಲಿತಾಂಶ ಹೊರಬೀಳುವ ಮುನ್ನವೇ ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಿಕೊಂಡು ಕ್ಷೇತ್ರದ ಮತದಾರರಲ್ಲಿ ಅಚ್ಚರಿ ಮೂಡಿಸಿದರು.

Advertisement

ನಗರದ ಮರ್ಚೇಡ್ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಮತಬ್ಯಾಂಕ್ ಇಲ್ಲ. ಕುಮಾರಣ್ಣ ಅವರ ಸಾಲಮನ್ನಾ, ಪಂಚರತ್ನ ಯೋಜನೆಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಲಿವೆ. ಹಾಗಾಗಿ ನಗರ ಪ್ರದೇಶದ ಜನರಿಗೆ ಅಷ್ಟಾಗಿ ಯೋಜನೆಗಳಿ‌ಲ್ಲ. ಕಳೆದ 2013 ರಲ್ಲಿ ಅಂದಿನ ಜೆಡಿಎಸ್ ಅಭ್ಯರ್ಥಿ ಮುನ್ನಾ ಗೆ 16 ಸಾವಿರಕ್ಕೂ ಹೆಚ್ಚು, ಕಳೆದ 2018 ರಲ್ಲಿ ಮಹ್ಮದ್ ಇಕ್ಬಾಲ್ ಹೊತೂರ್ ಅವರಿಗೆ 6 ಸಾವಿರಕ್ಕೂ‌ ಹೆಚ್ಚು ಮತಗಳು ಲಭಿಸಿವೆ. ಈ ಬಾರಿಯ 2023 ನೇ ಚುನಾವಣೆಯಲ್ಲಿ ನನಗೆ ಸುಮಾರು 30 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆಯುವೆ. ಅದಕ್ಕಿಂತ ಕಡಿಮೆ ಪಡೆದಲ್ಲಿ ಜನರ ಸೇವೆಗೆ ನಾನು ಅನರ್ಹ ಎಂದಹ ನಿರ್ಧರಿಸುತ್ತೇನೆ ಎಂದು ತಮ್ಮ ಭವಿಷ್ಯವನ್ನು ತಾವೇ ಬಹಿರಂಗ ಪಡಿಸಿಕೊಂಡರು.

ಇದನ್ನೂ ಓದಿ:ಪ್ರವಾಸಿಗರೇ ಗಮನಿಸಿ..  ಮತದಾನ ದಿನದಂದು ಕವಿಶೈಲ, ಕವಿಮನೆ ಬಂದ್

ಈ ವೇಳೆ ಜಿಲ್ಲಾಧ್ಯಕ್ಷ ಸೋಮಲಿಂಗನಗೌಡ, ವಾದಿರಾಜ್ ಶೆಟ್ಟಿ, ರೋಷನ್ ಬಾಷ ಸೇರಿ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next