Advertisement

ಕ್ರಮಬದ್ಧ ಅಧ್ಯಯನವೇ ವಿಜ್ಞಾನ

03:02 PM Dec 14, 2019 | Naveen |

ಬಳ್ಳಾರಿ: ತಾಲೂಕಿನ ಇಬ್ರಾಹಿಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ರೂಪನಗುಡಿ ಕ್ಲಸ್ಟರ್‌ ಮಟ್ಟದ ಮಕ್ಕಳ ವಿಜ್ಞಾನ ಹಬ್ಬಕ್ಕೆ ಚಾಲನೆ ನೀಡಲಾಯಿತು.

Advertisement

ಶಿಕ್ಷಣ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಸಮಗ್ರ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿರುವ ಮಕ್ಕಳ ವಿಜ್ಞಾನ ಹಬ್ಬವನ್ನು ವಿವಿಧ ಶಾಲಾ ವಿದ್ಯಾರ್ಥಿಗಳ ಕೋಲಾಟ ಮತ್ತು ಕುಂಭೋತ್ಸವಗಳ ಮೆರವಣಿಗೆಯ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು.

ಬಳಿಕ ಶಾಲೆಯ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮಕ್ಕೆ ಪೂರ್ವವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್‌ ರಾಮಚಂದ್ರಪ್ಪ ರಾಕೇಟ್‌ ಹಾರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿಜ್ಞಾನ ಎಂದರೆ ಕ್ರಮಬದ್ಧವಾದ ಅಧ್ಯಯನ. ವಿಜ್ಞಾನ ಎಂದರೆ ಕೇವಲ ನಿಖರವಾಗಿ ಹೇಳುವುದಷ್ಟೆ ಅಲ್ಲ ಅವುಗಳಿಗೆ ಪೂರಕವಾದ ಸಂಶೋಧನೆ, ಕಲೆ, ಸಾಹಿತ್ಯ, ಸಂಗೀತ, ನಾಟಕ, ಪ್ರಾಯೋಗಿಕ ಸಮ್ಮಿಲನದ ಸಂಗ್ರಹವೇ ವಿಜ್ಞಾನ ಎಂದು ವಿಶ್ಲೇಷಿಸಿದರು.

ಮಕ್ಕಳ ವಿಜ್ಞಾನ ಹಬ್ಬದಲ್ಲಿ ರೂಪನಗುಡಿ ಕ್ಲಸ್ಟರ್‌ ವ್ಯಾಪ್ತಿಯ ರೂಪನಗುಡಿ, ರಾಯಾಪುರ, ಶಂಕರಬಂಡೆ, ಯಾಳಿ³, ಕುಂಟನಾಳ್‌, ಲಿಂಗದೇವನಹಳ್ಳಿ, ಇಬ್ರಾಹಿಂಪುರ, ಬೊಬ್ಬುಕುಂಟೆ, ಚೇಳ್ಳಗುರ್ಕಿ, ಚರಕುಂಟೆ, ತೊಲಮಾಮಿಡಿ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಗಳ 150ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಜತೆಗೆ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ರಟ್ಟಿನ ಮನೆ, ಉದ್ಯಾನವನ, ವನ್ಯಜೀವಿಗಳುಳ್ಳ ಅರಣ್ಯ, ಮಣ್ಣಿನಿಂದ ಗಣೇಶ, ವಣ್ಯಜೀವಿಗಳ ಗೊಂಬೆಗಳನ್ನು ಪ್ರದರ್ಶಿಸಿದರು.

ವೇದಿಕೆ ಕಾರ್ಯಕ್ರಮ ಬಳಿಕ ವಸ್ತುಗಳನ್ನು ಪ್ರದರ್ಶಿಸಿ ಅವುಗಳ ಗುಣಲಕ್ಷಣಗಳ ಬಗ್ಗೆ ವಿವರಿಸಿದ್ದು ಗಮನ ಸೆಳೆಯಿತು. ಬಳಿಕ ವಿಜೇತ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ವಿತರಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಎಚ್‌.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ತಿಮ್ಮಪ್ಪ, ಸದಸ್ಯರು, ಶಾಲೆಯ ಭೂದಾನಿ ಬಿ.ಉಮೇಶ್‌, ಪಿಡಿಒ ಕಾಂತರಾಜ್‌, ಗ್ರಾಪಂ ಸದಸ್ಯರಾದ ಟಿ.ನಾಗರಾಜ್‌, ಕೋಟೆ ನಾಗರಾಜ್‌, ಉಮಾಪತಿ, ಶಿಕ್ಷಣ ಪ್ರೇಮಿ ಕಿರಣ್‌, ಶ್ರೀನಿವಾಸ್‌, ಶಾಲೆಯ ಮುಖ್ಯಗುರು ಡಿ.ಎರ್ರಿಸ್ವಾಮಿ, ಸಹ ಶಿಕ್ಷಕರಾದ ರೂಪಾ, ಶಫಿ , ಸಿಆರ್‌ಪಿ ವೇಣುಗೋಪಾಲ, ಅತಿಥಿ ಶಿಕ್ಷಕರು ಇದ್ದರು. ಇದೇ ವೇಳೆ ಎಸ್‌ಡಿಎಂಸಿ, ಗ್ರಾಪಂ ಸದಸ್ಯರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next