Advertisement

ಗಮನ ಸೆಳೆದ ಚಾಕ್‌ಪೀಸ್‌ ಕಲಾಕೃತಿ!

12:47 PM Feb 02, 2020 | Naveen |

ಬಳ್ಳಾರಿ: ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರದಿಂದ ಆರಂಭವಾದ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಾಕ್‌ಪೀಸ್‌ನಲ್ಲಿ ಅರಳಿದ ಹಲವಾರು ಸೂಕ್ಷ್ಮಕಲಾಕೃತಿಗಳು (ಮೈಕ್ರೋ ಆರ್ಟ್ಸ್) ಗಮನ ಸೆಳೆದವು.

Advertisement

ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಾಗಲೂರು-ಹೊಸಳ್ಳಿ ಗ್ರಾಮದ ರಾಜಶೇಖರ್‌ ಆಚಾರ್‌ ಅವರು ಚಾಕ್‌ಪೀಸ್‌ನಲ್ಲಿ ಸೂಕ್ಷ್ಮ ಕಲಾಕೃತಿಗಳನ್ನು ಕೆತ್ತಿದ್ದಾರೆ. ಕೇವಲ ಪಿಯುಸಿವರೆಗಷ್ಟೇ ವ್ಯಾಸಂಗ ಮಾಡಿರುವ ರಾಜಶೇಖರ್‌ ಆಚಾರ್‌ ಅವರು ಕಳೆದ 15 ವರ್ಷಗಳ ಹಿಂದೆ ಡಿಡಿ ಚಂದನವಾಹಿನಿಯಲ್ಲಿ ಪ್ರಸಾರವಾಗಿದ್ದ ಕಾರ್ಯಕ್ರಮವೊಂದರಿಂದ ಪ್ರೇರಣೆಯಾಗಿದ್ದು, ಇದನ್ನು ನಾನೇಕೆ ಪ್ರಯತ್ನಿಸಬಾರದು ಎಂದು ಬಿಡುವಿನ ವೇಳೆಯಲ್ಲೆಲ್ಲಾ ಚಾಕ್‌ಪೀಸ್‌ ಮೇಲೆ ಸೂಕ್ಷ್ಮವಾದ ಕಲಾಕೃತಿಗಳನ್ನು ಕೆತ್ತಿದ್ದಾರೆ.

ಕಳೆದ 15 ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರಾಜಶೇಖರ್‌ ಆಚಾರ್‌ ಅವರು, ಈವರೆಗೆ ಚಾಕ್‌ಪೀಸ್‌ಗಳ ಮೇಲೆ ಮದರ್‌ ಥೆರೆಸಾ, ಸಾಯಿಬಾಬಾ, ರವೀಂದ್ರನಾಥ್‌ ಟ್ಯಾಗೋರ್‌, ಗೊಮ್ಮಟೇಶ್ವರ, ಶಿಲಾಬಾಲಕಿ, ಶಿಲಾ ಕಂಬಗಳು, ಗಣೇಶ ಮೂರ್ತಿ, ಕನ್ನಡ ಮತ್ತು ತೆಲುಗು, ಆಂಗ್ಲಭಾಷೆಯ ವರ್ಣಮಾಲೆಗಳು ಈತನ ಕೈಯಲ್ಲಿ ಅರಳಿದ್ದು, ಸಮಮೇಳನದಲ್ಲಿ ಗಮನ ಸೆಳೆಯುತ್ತಿವೆ. ಈ ಹಿಂದೆ 15ನೇ ಕನ್ನಡ ಸಾಹಿತ್ಯ ಜಿಲ್ಲಾ ಸಮ್ಮೇಳನದಲ್ಲಿ ಈ ಸೂಕ್ಷ್ಮ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಅದಾದ ಬಳಿಕ ಇದೀಗ 21ನೇ ಸಮ್ಮೇಳನದಲ್ಲಿ ಪ್ರದರ್ಶಿಸಲಾಗುತ್ತಿದೆ. ಇದರಿಂದ ಯಾವುದೇ ಆದಾಯವನ್ನು ನಿರೀಕ್ಷಿಸದ ರಾಜಶೇಖರ್‌, ಸದ್ಯ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next