Advertisement

ಶ್ರೀರಾಮುಲು ಅವರನ್ನು ಮಗನಂತೆ ಕಂಡಿದ್ದೆ, ಆದರೆ ಈಗ…:ಗಾಲಿ ರೆಡ್ಡಿ ಬೇಸರ

07:14 PM Feb 12, 2023 | Team Udayavani |

ಗಂಗಾವತಿ: ಮಗನಂತೆ,ಒಡಹುಟ್ಟಿದ ಸಹೋದರನಂತೆ ಸಚಿವ ಬಿ.ಶ್ರೀ ರಾಮುಲು ಅವರನ್ನು ಕಂಡಿದ್ದೇನೆ ಈಗ ಪರಿಸ್ಥಿತಿ ಬೇರಾಗಿದೆ ಎಂದು ಕೆಆರ್‌ಪಿ ಪಾರ್ಟಿ ಸಂಸ್ಥಾಪಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

Advertisement

ನಗರದ ಕನಕಗಿರಿ ರಸ್ತೆಯ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಚೇರಿಯಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ 35 ವಾರ್ಡ್ ಗಳ ಬೂತ್ ಮಟ್ಟ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಚಿವ ಬಿ. ಶ್ರೀ ರಾಮುಲು ಅವರನ್ನು ಮನೆಯ ಮಗನಂತೆ ಬೆಳಸಿ 1999 ರಲ್ಲಿ ಮುನ್ಸಿಪಾಲಿಟಿ ಸದಸ್ಯನ್ನಾಗಿ ಮಾಡಿದೆ. 2008 ರಲ್ಲಿ ಯಡಿಯೂರಪ್ಪ ರನ್ನು ಮುಖ್ಯ ಮಂತ್ರಿ ಮಾಡಿದ ಹೆಮ್ಮೆ ನನಗಿದೆ. ನಂತರ ನನ್ನನ್ನು ಪ್ಲ್ಯಾನ್ ಮಾಡಿ ಮೀನಿನ ಬಲೆಯ ತರಹ ನನ್ನನ್ನು ಬಂಧಿಸಿದರು. ಬಂಧಿಸುವ ಮೊದಲು ನನಗೆ ಕಾಂಗ್ರೆಸ್ ಪಕ್ಷದ ವರಿಷ್ಠರಿಂದ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ಆಮಿಷ ಒಡ್ಡಿದ್ದರು. ಅದರೇ ನಾನು ಸುಷ್ಮಾ ಸ್ವರಾಜ್ ಅಮ್ಮನಿಗೆ ಕೊಟ್ಟ ಮಾತು ತಪ್ಪಲಿಲ್ಲ ಬಿಜೆಪಿ ಬಿಡದೇ ಇರುವ ಕಾರಣಕ್ಕೆ ನನ್ನ ಬಂಧನವಾಯಿತು ಎಂದರು.

ನನ್ನ ಕನಸಿನ ಬಳ್ಳಾರಿ ಪ್ರವೇಶಕ್ಕೆ ಕೆಲವರ ಕುತಂತ್ರದಿಂದ ಅಡ್ಡಿಯಾಗಿದೆ.ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿಗೆ ಬಳ್ಳಾರಿ, ಗಂಗಾವತಿ ಪ್ರತಿಷ್ಠಿತ ಕ್ಷೇತ್ರಗಳಾಗಿದ್ದು ಕೆಆರ್‌ಪಿ ಪಾರ್ಟಿಗೆ ಬುನಾದಿಯಾಗಲಿವೆ ಎಂದರು.

ಬಳ್ಳಾರಿ ಮತ ಕ್ಷೇತ್ರದ ಸಭೆಯನ್ನು ಗಂಗಾವತಿಯಲ್ಲಿ ಮಾಡಲು ನನಗೆ ದುಃಖವಾಗುತ್ತಿದೆ. ಈ ಸಮಾವೇಶಕ್ಕೆ ಬರುವ ಮುಂಚೆ ನನಗೆ ಕಣ್ಣೀರು ತುಂಬಿ ಬಂತು ಕಾರಣ ನನ್ನವರನ್ನೂ ನನ್ನೂರಿನಲ್ಲಿ ಕಾಣಲು ನನಗೆ ಅವಕಾಶ ಇಲ್ಲದ್ದನ್ನು ನೆನಸಿಕೊಂಡು. ಅದರೇ ನನಗೆ ಜನ್ಮ ಕೊಟ್ಟ ತಾಯಿ ನನ್ನಮ್ಮನಾದರೇ ಭಗವಂತ ಕೊಟ್ಟು ವರ ನನ್ನ ಅರ್ಧಾಂಗಿ ಲಕ್ಷ್ಮೀ ಅರುಣಾ ಎಂದು ಗರ್ವದಿಂದ ಹೇಳುವೆ. ನನ್ನ ಜೀವನದಲ್ಲಿ ಬಹಳಷ್ಟು ಜನರು ಯಾವೋದೋ ಕಾರಣದಿಂದ ಬಂದು ಹೋಗಿದ್ದಾರೆ ಹೋದವರು ಹೊರಗಿನವರು ಇದ್ದವರ ಮಾತ್ರ ನನ್ನ ನಿಜವಾದ ಸಂಬಂಧಿಗಳು. ನಾನು ಚುನಾವಣಾ ಎಂಬ ಯುದ್ದದಲ್ಲಿ ಇಳಿದ್ದಿದ್ದಾಗಿದೆ ನೀವೆಲ್ಲರೂ ನನ್ನ ಕುಟುಂಬದ ಸದಸ್ಯರು ಹಿಂಜರಿಕೆ ಮಾತೇ ಇಲ್ಲ ಎಂದರು.

Advertisement

ಲಕ್ಷ್ಮೀ ಅರುಣಾರನ್ನು ಬಳ್ಳಾರಿ ಕ್ಷೇತ್ರದಲ್ಲಿ ಎಲ್ಲರೂ ಸೇರಿ ಹೆಚ್ಚಿನ ಬಹುಮತದಿಂದ ಗೆದ್ದು ಬರುವಂತೆ ಅರ್ಶಿವದಿಸಿ. ಇನ್ನೂ ಕೇಲವೇ ದಿನಗಳಲ್ಲಿ ನನ್ನ ಮೇಲೇ ಇರುವ ಎಲ್ಲಾ ಕೇಸುಗಳು ಮುಗಿಯಲಿದ್ದು, ಮತ್ತೆ ನಾನು ಬಳ್ಳಾರಿ ಗೆ ಬರುವೆ ಲಕ್ಷ್ಮೀ ಅರುಣಾ ರವರು ನಿಮ್ಮ ಮನೆಯ ಝಾನ್ಸಿ, ರಾಣಿ ಚೆನ್ನಮ್ಮ, ಒನಕೆ ಓಬವ್ವ ಎಂದು ತಿಳಿದು ಸಂಪೂರ್ಣ ಸಹಕಾರ ನೀಡಿ ಎಂದು ಮನವಿ ಮಾಡಿದರು.

ಬಳ್ಳಾರಿ ನಗರ ವಿಧಾನಸಭೆ ಅಭ್ಯರ್ಥಿ ಲಕ್ಷ್ಮೀ ಅರುಣಾ ಮಾತನಾಡಿ ಬಳ್ಳಾರಿ ನಗರ ವಿಧಾನಸಭೆಯ ಎಲ್ಲಾ35 ವಾರ್ಡ್ ಗಳ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಗಂಗಾವತಿಯಲ್ಲಿ ನಡೆಸಲಾಗುತ್ತಿದೆ.ಬಳ್ಳಾರಿಯಿಂದ ಆಗಮಿಸಿದ ಸಾವಿರಾರು ಕಾರ್ಯಕರ್ತರು ಜನಾರ್ದನ ರೆಡ್ಡಿಯವರ ಮಾತಿನಿಂದ ಪ್ರೇರಣೆ ಹೊಂದಿ ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರದಿಂದ ನನ್ನನ್ನು ಮೊದಲ ಬಾರಿಗೆ ಮಹಿಳಾ ಶಾಸಕಿ ಮಾಡುವಂತೆ ಮನವಿ ಮಾಡಿದರು.

ಸಮಾವೇಶದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ರಾಜಶೇಖರ ಗೌಡ, ಮಹಿಳಾ ಅಧ್ಯಕ್ಷೆ ಹಂಪಿರಮಣ, ಅಲ್ಪಸಂಖ್ಯಾತ ಘಟಕದ ಖುತಬ್ ಸಾಬ್, ಕೊಪ್ಪಳ ಜಿಲ್ಲಾ ಅಧ್ಯಕ್ಷ ಮನೋಹರ ಗೌಡ ಹೇರೂರು, ಬಳ್ಳಾರಿ ನಗರ ಅಧ್ಯಕ್ಷ ನವೀನ್, ಉಮರ್ ರಾಜ್, ಶ್ರೀನಿವಾಸ್ ಹಾಗೂ ಬಳ್ಳಾರಿಯಿಂದ ಆಗಮಿಸಿದ ಕಾರ್ಯಕರ್ತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next