Advertisement

ಕ್ಷಯ ರೋಗಿಗಳಲ್ಲಿ ಬಳ್ಳಾರಿಗೆ 2ನೇ ಸ್ಥಾನ

06:22 PM Mar 25, 2022 | Team Udayavani |

ಬಳ್ಳಾರಿ: ಜನರಲ್ಲಿ ಕ್ಷಯರೋಗದ ಬಗೆಗಿನ ಅಜ್ಞಾನ, ತಾತ್ಸಾರ ಮನೋಭಾವನೆ ಜಿಲ್ಲೆಯಲ್ಲಿ ಕಾಯಿಲೆ ಪ್ರಮಾಣ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು, ರಾಜ್ಯದಲ್ಲೇ ಬಳ್ಳಾರಿ ಜಿಲ್ಲೆ 2ನೇ ಸ್ಥಾನದಲ್ಲಿದೆ ಎಂದು ಕ್ಷಯರೋಗ ನಿರ್ಮೂಲನಾಧಿಕಾರಿ ಡಾ| ಇಂದ್ರಾಣಿ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕೇಂದ್ರ, ವಾರ್ತಾ ಇಲಾಖೆ, ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನ ಹಾಗೂ ಸ್ಟಾಪ್‌ ಟಿಬಿ ಯೋಜನೆ ಸಹಯೋಗದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆಯ ಅಂಗವಾಗಿ ಟಿಬಿ ಸೋಲಿಸಿ ದೇಶ ಗೆಲ್ಲಿಸಿ ಅಡಿ ಮಾಧ್ಯಮ ಪ್ರತಿನಿಧಿಗಳಿಗೆ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕ್ಷಯ ರೋಗಿಗಳು ಅಧಿಕ ಸಂಖ್ಯೆಯಲ್ಲಿರುವ ಕೊಪ್ಪಳ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. 4626 ರೋಗಿಗಳನ್ನು ಹೊಂದಿರುವ ವಿಭಜಿತ ಬಳ್ಳಾರಿ ಜಿಲ್ಲೆ 2ನೇ ಸ್ಥಾನದಲ್ಲಿದ್ದು, ರಾಯಚೂರು, ಬೆಂಗಳೂರು (ಬಿಬಿಎಂಪಿ), ಕಲಬುರಗಿ ಕ್ರಮವಾಗಿ 3,4,5ನೇ ಸ್ಥಾನಗಳಲ್ಲಿವೆ.

ಕ್ಷಯ ರೋಗದ ಬಗ್ಗೆ ಸಾಮಾನ್ಯ ಜನರಲ್ಲಿ ತುಂಬ ತಾತ್ಸಾರ ಮನೋಭಾವನೆಯಿದೆ. ಕೇವಲ ಕೆಮ್ಮು ಅಷ್ಟೇ ಅಲ್ಲ ಅದೇನು ಮಾಡಲಿದೆ ಎಂದು ಬಹುತೇಕರು ಅದರ ಪತ್ತೆಗೆ ಮುಂದಾಗದೆ. ಆಸ್ಪತ್ರೆಗೆ ತೆರಳಿ ಚಿಕಿತ್ಸೆಯನ್ನೂ ಪಡೆಯಲ್ಲ. ಇದಕ್ಕೆ ಪ್ರಮುಖ ಕಾರಣ, ಕ್ಷಯ ರೋಗದ ಬಗೆಗಿನ ಅಜ್ಞಾನ, ತಾತ್ಸಾರ ಮನೋಭಾವನೆ, ಮಾನಸಿಕ ಖನ್ನತೆಗಳಾಗಿವೆ. ಪ್ರತಿಯೊಬ್ಬರಲ್ಲೂ ಕ್ಷಯ ಇರುತ್ತದೆ. ಆದರೆ, ರೋಗ ನಿರೋಧಕ ಶಕ್ತಿ ರೋಗವನ್ನು ತಡೆಯಲಿದ್ದು, ಅದು
ಕಡಿಮೆಯಾದಾಗ ಕಾಯಿಲೆಯು ಉಲ್ಬಣವಾಗಿ ಗಂಭೀರ ಪರಿಣಾಮ ಬೀರಲಿದೆ ಎಂದು ವಿವರಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ 2021ನೇ ಸಾಲಿನಲ್ಲಿ ಒಟ್ಟು 4626 ಕ್ಷಯರೋಗಿಗಳು ಕಂಡು ಬಂದಿದ್ದಾರೆ. ಇವರಲ್ಲಿ ಶೇ.63.9ರಷ್ಟು ಪುರುಷರು ಮತ್ತು ಶೇ.36.1ರಷ್ಟು ಮಹಿಳೆಯರು, ಇಬ್ಬರು ಮಾತ್ರ ಮಂಗಳಮುಖೀಯರು ನೋಂದಣಿಯಾಗಿರುತ್ತಾರೆ. ಇದರಲ್ಲಿ ಒಟ್ಟು 211 ಮಕ್ಕಳಿಗೆ ಕ್ಷಯರೋಗ ಇರುವುದು ದೃಢಪಟ್ಟಿದ್ದು ಅದರಲ್ಲಿ ಶೇ.55.9ರಷ್ಟು ಗಂಡು ಮಕ್ಕಳು ಹಾಗೂ ಶೇ.44.1ರಷ್ಟು ಹೆಣ್ಣು ಮಕ್ಕಳು ಇರುವುದು ಗಮನಾರ್ಹ. ಒಟ್ಟು ರೋಗಿಗಳಲ್ಲಿ 419 (ಶೇ.9ರಷ್ಟು) ರೋಗಿಗಳು ಮರಣ ಹೊಂದಿದ್ದು, ಅದರಲ್ಲಿ ಶೇ.74ರಷ್ಟು ಪುರುಷ ಕ್ಷಯರೋಗಿಗಳು ಮರಣ ಹೊಂದಿದ್ದಾರೆ ಎಂದು ಅವರು ವಿವರಿಸಿದರು.

Advertisement

ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನದ ಯೋಜನಾ ನಿರ್ವಾಹಕಿ ಡಾ|ತೇಜಸ್ವಿನಿ ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿರುವ ಕ್ಷಯರೋಗಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ವಿಶ್ಲೇಷಣೆ ಮಾಡಿದರೆ ಅದರಲ್ಲಿ ಮಹಿಳೆಯರು ಹಾಗೂ ಮಂಗಳಮುಖೀಯರು ಕಡಿಮೆ ಸಂಖ್ಯೆಯಲ್ಲಿರುವುದು ಸರಿಯೇ ಎನ್ನುವುದು ಪ್ರಶ್ನೆಯಾಗಿದೆ. ಆದರೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷಯರೋಗಕ್ಕೆ ತುತ್ತಾಗಲು ಹಲವು ಕಾರಣಗಳನ್ನು ನೋಡಬಹುದು. ಅದರಲ್ಲಿ ಪ್ರಮುಖವಾಗಿ ಪೌಷ್ಟಿಕತೆಯ ಪ್ರಮಾಣ, ಕಾರ್ಖಾನೆಗಳಲ್ಲಿ ಅಪಾಯದ ವಲಯದಲ್ಲಿ ಕೆಲಸ ಮಾಡುವಂತಹ ಮಹಿಳೆಯರು ಹಾಗೂ ಪುರುಷ ಕ್ಷಯರೋಗಿಗಳ ಬೆಂಬಲ ಹಾಗೂ
ಆರೈಕೆ ಸೇವೆಯಲ್ಲಿರುವ ಮಹಿಳೆಯರು ಅಥವಾ ಅವರಿಗೆ ಯಾವುದೇ ಸೇವಾ ಸೌಲಭ್ಯಗಳು ದೊರಕುತ್ತಿಲ್ಲವೇ? ಎಂಬ ಅಂಶಗಳು ಕ್ಷೇತ್ರ ಭೇಟಿ ನೀಡಿದಾಗ ಕಂಡುಬಂದಿವೆ ಎಂದರು.

ಕ್ಷಯರೋಗದ ಲಕ್ಷಣಗಳಿವು: ಕ್ಷಯರೋಗವು ಮೈಕ್ರೋಬ್ಯಾಕ್ಟೀರಿಯಾ ಟ್ಯೂಬರ್‌ ಕ್ಯೂಲೋಸಿಸ್‌ ಎಂಬ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗ. ಎರಡು ವಾರಗಳ ಕಾಲ ಹೆಚ್ಚು ಅವಯ ಕೆಮ್ಮು, ಸಂಜೆ ವೇಳೆ ಜ್ವರ, ರಾತ್ರಿ ವೇಳೆ ಬೆವರುವುದು, ಕಫ, ಕಫದಲ್ಲಿ ರಕ್ತ ಬೀಳುವುದು, ಎದೆ ನೋವು, ಹಸಿವಾಗದಿರುವುದು, ತೂಕ ಇಳಿಕೆ ಕ್ಷಯರೋಗದ ಲಕ್ಷಣಗಳಾಗಿವೆ ಎಂದರು. ಇದೇ ವೇಳೆ ಹುಲಿಕುಂಟೆರಾಯ ತೊಗಲುಗೊಂಬೆ ಕಲಾತಂಡದಿಂದ ಕ್ಷಯರೋಗ ಕುರಿತು ನಡೆಸಿಕೊಟ್ಟ ಪ್ರದರ್ಶನ ಗಮನಸೆಳೆಯಿತು.

ಡಿಸಿ ಪವನಕುಮಾರ ಮಾಲಪಾಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ|ಎಚ್‌.ಎಲ್‌. ಜನಾರ್ದನ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಬಸರೆಡ್ಡಿ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಅನಿಲಕುಮಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಮರಿಯಂಬಿ, ತಾಲೂಕು ಆರೋಗ್ಯಾಧಿಕಾರಿ ಡಾ| ಮೋಹನಕುಮಾರಿ, ಜಿಲ್ಲಾ ಮಲೇರಿಯಾ ನಿರ್ಮೂಲನಾ ಅಧಿಕಾರಿ ಡಾ|ಅಬ್ದುಲ್ಲಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next