Advertisement

ನಾಳೆ ಉಚ್ಛಂಗಿದುರ್ಗದಲ್ಲಿ ಸಿದ್ದು ಪ್ರಚಾರ

04:12 PM Apr 19, 2019 | Team Udayavani |

ಹರಪನಹಳ್ಳಿ: ಲೋಕಸಭಾ ಚುನಾವಣೆ ದಾವಣಗೆರೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಅವರ ಪರ ಮಾತಯಾಚಿಸಲು ಏ.20ರಂದು ಮಧ್ಯಾಹ್ನ 1ಗಂಟೆಗೆ ಉಚ್ಚಂಗಿದುರ್ಗ ಗ್ರಾಮಕ್ಕೆ ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅಗಮಿಸಲಿದ್ದಾರೆ ಎಂದು ಜಿಪಂ ಸದಸ್ಯ ಎಚ್‌. ಪರಶುರಾಮಪ್ಪ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖಂಡರಾದ ಸಿ.ಎಂ. ಇಬ್ರಾಹಿಂ, ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ, ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ, ಮಾಜಿ
ಸಚಿವ ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ, ಮೈತ್ರಿ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ, ಹರಿಹರ ಶಾಸಕ ರಾಮಪ್ಪ, ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌, ಜೆಡಿಎಸ್‌ ಮುಖಂಡ ಅರಸೀಕೆರೆ ಎನ್‌.ಕೊಟ್ರೇಶ್‌, ಕೆಪಿಸಿಸಿ ಮಹಿಳಾ ರಾಜ್ಯ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್‌ ಮುಂತಾದವರು
ಭಾಗವಹಿಸಲಿದ್ದಾರೆ ಎಂದರು.

ಬಹಿರಂಗ ಸಭೆ ಅಂಗವಾಗಿ ಹರಪನಹಳ್ಳಿ, ಜಗಳೂರು ಸೇರಿದಂತೆ
ಜಿಲ್ಲಾದ್ಯಂತ ಸುಮಾರು 15 ರಿಂದ 20 ಸಾವಿರ ಕಾಂಗ್ರೆಸ್‌ ಪಕ್ಷದ
ಮುಖಂಡರು, ಪದಾಧಿ ಕಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪೊಲೀಸ್‌ ವರಿಷ್ಠಾ ಧಿಕಾರಿ ಭೇಟಿ: ಕಾಂಗ್ರೆಸ್‌ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಉಚ್ಚಂಗಿದುರ್ಗ ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸ್‌ ಜಿಲ್ಲಾ ವರಿಷ್ಠಾಧಿ ಕಾರಿ ಆರ್‌.ಚೇತನ್‌
ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ವೇದಿಕೆ ನಿರ್ಮಾಣ, ಹೆಲಿಪ್ಯಾಡ್‌ ನಿರ್ಮಾಣದ ಕುರಿತು ತಜ್ಞರ ಸಲಹೆಯನ್ನು ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ನಾಗೇಶ್‌ ಐತಾಳ್‌, ಸಿಪಿಐ
ಡಿ.ದುರುಗಪ್ಪ, ಅರಸೀಕೆರೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕಮ್ಮತ್ತಹಳ್ಳಿ
ಎಸ್‌.ಮಂಜುನಾಥ್‌, ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ.
ಶಿವಕುಮಾರಸ್ವಾಮಿ ಮುಖಂಡರಾದ ಬೈರೇಶ್‌, ಗೋಡೆಪ್ರಕಾಶ್‌,
ವೀರೇಂದ್ರ ಪಾಟೀಲ್‌, ಸಲಾಂ ಸಾಬ್‌, ಟಿ.ಮಂಜಪ್ಪ, ಮಂಜುನಾಥ್‌, ಬಸವನಗೌಡ, ಚಂದ್ರಪ್ಪ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next