Advertisement

ಲೋಕ ಸಮರಕ್ಕೆ ಅಗತ್ಯ ಪೂರ್ವ ಸಿದ್ಧತೆ

01:29 PM Apr 18, 2019 | Naveen |

ಬಳ್ಳಾರಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಮತಗಟ್ಟೆ ಸೇರಿದಂತೆ ಚುನಾವಣಾ ಸಂಬಂಧ ಕೈಗೊಳ್ಳಲಾಗಿದ್ದ ಅಗತ್ಯ ಸಿದ್ಧತಾ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿ ಕಾರಿ ಡಾ| ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದರು.

Advertisement

ನಗರದ ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಘೋಷಣೆಯಾದ ಬಳಿಕ ಸ್ವೀಪ್‌ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಈವರೆಗೆ ಒಟ್ಟು 28.38 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ
ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಒಟ್ಟು 1925 ಮತಗಟ್ಟೆ ಸ್ಥಾಪಿಸಲಾಗಿದೆ. ಇದರಲ್ಲಿ ಅಂಗವಿಕಲರಿಗೆ ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ 141 ವ್ಹೀಲ್‌ ಚೇರ್‌ ವ್ಯವಸ್ಥೆ ಮಾಡಲಾಗಿದೆ. ಮತದಾನದ ದಿನದಂದು ವಿಶೇಷ ಚೇತನರ ಸಹಾಯಕ್ಕಾಗಿ
1816 ಸ್ವಯಂ ಸೇವಕರನ್ನು ನೇಮಿಸಲಾಗಿದೆ.

ಬಳ್ಳಾರಿ ಜಿಲ್ಲೆಗೆ ಸಂಬಂಧಿ ಸಿದಂತೆ ಹಿರಿಯ ಕಲಾವಿದೆ ಸುಭದ್ರಮ್ಮ ಮನ್ಸೂರ್‌ ಇವರನ್ನು ಚುನಾವಣೆಯ ಜಿಲ್ಲಾ ಐಕಾನ್‌ರನ್ನಾಗಿ ನಿಯೋಜಿಸಲಾಗಿದೆ.

ಬಳ್ಳಾರಿ ನಗರದ ಮತಗಟ್ಟೆ ಸಂಖ್ಯೆ 132ರಲ್ಲಿ ವಿಶೇಷ ಚೇತನ ಅಧಿ ಕಾರಿ, ಸಿಬ್ಬಂದಿಗಳಿಂದ ಕಾರ್ಯನಿರ್ವಹಿಸುವ ಮತಗಟ್ಟೆಯನ್ನು
ಗುರುತಿಸಲಾಗಿದೆ. ಜಿಲ್ಲೆಯದ್ಯಾಂತ 19 ಸಖೀ ಮತಗಟ್ಟೆ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

53 ಸಾವಿರ ಯುವಕರಿಂದ ಮೊದಲ ಮತದಾನ: ಗಣಿನಾಡು ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಮೊದಲ ಬಾರಿಗೆ 53 ಸಾವಿರ ಯುವ ಮತದಾರರು ಮತದಾನ
ಮಾಡಲಿದ್ದಾರೆ. ಕ್ಷೇತ್ರದಲ್ಲಿ 8,80,488 ಮಹಿಳಾ ಮತದಾರರು, 871191 ಪುರುಷರು, 232 ಇತರೆ ಸೇರಿದಂತೆ ಒಟ್ಟು 1751911 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಜಿಲ್ಲೆಯ ಸಂಡೂರು, ಕೂಡ್ಲಿಗಿ,
ಹಡಗಲಿ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಬಳ್ಳಾರಿ ಗ್ರಾಮೀಣ, ಬಳ್ಳಾರಿ ನಗರ, ಕಂಪ್ಲಿ, ವಿಜಯನಗರ, ಹಗರಿಬೊಮ್ಮನಹಳ್ಳಿ ಕ್ಷೇತ್ರಗಳಲ್ಲೂ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

Advertisement

ಮತದಾನ ಕಾರ್ಯಕ್ಕೆ 2687 ಪಿಆರ್‌ಒ, 2667 ಎಪಿಆರ್‌ಒ, 5553 ಮತಗಟ್ಟೆ ಅ ಧಿಕಾರಿಗಳು, 435 ಮೈಕ್ರೋ ಅಬjರ್‌ವರ್‌ಗಳನ್ನು
ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಬಳ್ಳಾರಿ ನಗರದಲ್ಲಿ ಓಲಾ ಕ್ಯಾಬ್‌ ಸಂಸ್ಥೆಯವರು
ಮತದಾನದ ದಿನದಂದು ವಿಶೇಷ ಚೇತನರನ್ನು ಮತಗಟ್ಟೆ
ಕರೆದುಕೊಂಡು ನಂತರ ಮನೆಗೆ ಬಿಡಲು ಉಚಿತ
ಸೇವೆಯನ್ನು ಒದಗಿಸಲು ಮುಂದೆ ಬಂದಿದ್ದಾರೆ. ಮತದಾನದ ದಿನದಂದು ಮತಗಟ್ಟೆಗಳಲ್ಲಿ ಪ್ರತಿ ಮತಗಟ್ಟೆಗೆ ಒಬ್ಬರಂತೆ (2408) ಜಾಗೃತಿ ತಂಡದ ಸದಸ್ಯರನ್ನು ಸ್ವಯಂ ಸೇವಕರಾಗಿ ನೇಮಿಸಲಾಗಿದೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸುಮಾರು 4 ಲಕ್ಷ ಕುಟುಂಬಗಳಿಗೆ ಮತದಾರರ ಮಾರ್ಗದರ್ಶಿ ವಿತರಿಸಲಾಗಿದೆ. ಜಿಲ್ಲೆಯಲ್ಲಿನ ಎಲ್ಲ ಮತಗಟ್ಟೆ ಸ್ಥಳಗಳಲ್ಲಿ ಇಲ್ಲಿಯವರೆಗೆ 2 ಬಾರಿ ಪ್ರಾತ್ಯಕ್ಷಿತೆ ನೀಡಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯಾದ್ಯಾಂತ ಹಲವಾರು ಸ್ವೀಪ್‌ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ
ಹಾಗೂ ಮತದಾರರಲ್ಲಿ ಮತದಾನದ ಮಹ್ವತದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಬಳ್ಳಾರಿ ನಗರದಲ್ಲಿ ಮೋತಿ ಸರ್ಕಲ್‌ ಹತ್ತಿರ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ಬಸವೇಶ್ವರ ನಗದಲ್ಲಿ ಕವಿಗೋಷ್ಠಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದರು.

ಮತದಾರರಿಗೆ ತಮ್ಮ ಮತ ಯಾವ ಮತಗಟ್ಟೆಯಲ್ಲಿದೆ ಎನ್ನುವ ಬಗ್ಗೆ ಚೀಟಿಯನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.
ದೊರೆಯದವರು ಮತದಾನ ದಿನದಂದು ಮತಗಟ್ಟೆ ಕೇಂದ್ರದ
ಬಳಿ ಬಿಎಲ್‌ಒಗಳಿಂದ ಪಡೆಯಬಹುದು. ಜತೆಗೆ ಮತದಾರರು ತಮ್ಮ ಗುರುತಿನ ಚೀಟಿಯನ್ನು ತೋರಿಸಿದರೆ ಮಾತ್ರ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಹರಗಿನದೋಣಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಸದ್ಯ ತಾತ್ಕಾಲಿಕವಾಗಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು,
ಶಾಶ್ವತ ಪರಿಹಾರಕ್ಕಾಗಿ 32 ಕೋಟಿ ರೂ. ಯೋಜನೆ ರೂಪಿಸಲಾಗಿದೆ ಎಂದರು.

36 ಚೆಕ್‌ಪೋಸ್ಟ್‌ ಸ್ಥಾಪನೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಂತರಾಜ್ಯಗಳ ಗಡಿಯಲ್ಲಿ 11 ಚೆಕ್‌ಪೋಸ್ಟ್‌, ಅಂತರ್‌ಜಿಲ್ಲೆಗಳಲ್ಲಿ 11, ಜಿಲ್ಲೆಯಲ್ಲಿ 14 ಸೇರಿ ಒಟ್ಟು 36 ಚೆಕ್‌ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಚುನಾವಣೆಯಲ್ಲಿ ಭದ್ರತೆ
ದೃಷ್ಟಿಯಿಂದಾಗಿ 1804 ರೌಡಿಷೀಟರ್‌, 137 ಕಮ್ಯುನಲ್‌ ಗೂಂಡಾಗಳು, 492 ಕ್ರಿಮಿನಲ್‌ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 42 ಜನರಿಗೆ ಗಡಿಪಾರು ಮಾಡಲು ನೋಟಿಸ್‌ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1472 ಶಸ್ತ್ರಾಸ್ತ್ರಗಳಿಗೆ ಪರವಾನಗಿ
ನೀಡಲಾಗಿದ್ದು, ಬ್ಯಾಂಕ್‌, ಎಟಿಎಂ ಸೇರಿ 27ಕ್ಕೆ ವಿನಾಯಿತಿ ನೀಡಲಾಗಿದೆ. ಉಳಿದ 1445 ಶಸ್ತ್ರಾಸ್ತ್ರಗಳನ್ನು ಸಮೀಪದ ಪೊಲೀಸ್‌ ಠಾಣೆಗಳಲ್ಲಿ ಡೆಪಾಜಿಟ್‌ ಮಾಡಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಕೆ.ನಿತೀಶ್‌ ಸೇರಿದಂತೆ ಇತರರಿದ್ದರು.

ಪೊಲೀಸ್‌ ಸಿಬ್ಬಂದಿ ನಿಯೋಜನೆ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಪೂರ್ವ, ಚುನಾವಣಾ ದಿನ, ಚುನಾವಣಾ ನಂತರದ ದಿನ ಎಂದು ಒಟ್ಟು ಮೂರು ಹಂತದ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಚುನಾವಣೆಯಲ್ಲಿ 1 ಎಸ್‌ಪಿ, 1 ಎಎಸ್‌ಪಿ, 12 ಡಿವೈಎಸ್‌ಪಿ, 29 ಸಿಪಿಐ, 36 ಪಿಎಸ್‌ಐ, 154 ಎಎಸ್‌ಐ, 1639 ಎಚ್‌ಸಿ, ಪಿಸಿ, 1419ಗೃಹ
ರಕ್ಷಕದಳದ ಸಿಬ್ಬಂದಿ ನಿಯೋಜಿಸಲಾಗಿದೆ. ಜತೆಗೆ ಈಗಾಗಲೇ 1 ಪ್ಯಾರಾಮಿಲಿಟರಿ ತುಕಡಿ ಬಂದಿದ್ದು, ದಕ್ಷಿಣ ಕರ್ನಾಟಕದಲ್ಲಿ ಚುನಾವಣೆ ಬಳಿಕ ಇನ್ನು ನಾಲ್ಕು ತುಕಡಿಗಳು ಬರಲಿವೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next