ಬಳ್ಳಾರಿ: ಲೋಕಸಭೆ ಚುನಾವಣೆಯ ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರೊಂದಿಗೆ ಮಾಜಿ ಶಾಸಕ ಅನಿಲ್‌ಲಾಡ್ ನಗರದ ವಿವಿಧ ಪ್ರದೇಶದಲ್ಲಿ ಶನಿವಾರ ಪ್ರಚಾರ ನಡೆಸಿ, ಮತಯಾಚಿಸಿದರು. ನಗರದ ಬೆಂಗಳೂರು ರಸ್ತೆಯ ಬೆಂಕಿ ಮಾರೆಮ್ಮ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ಬಂಡಿಮೋಟ್, ಎಪಿಎಂಸಿ, 6, 7ನೇ ವಾರ್ಡ್ ವ್ಯಾಪ್ತಿಯ ಬಾಪೂಜಿನಗರ ಸೇರಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
ಮೆರವಣಿಗೆಯಲ್ಲಿ ವಾದ್ಯ ಮೇಳಗಳ ವಾದನಕ್ಕೆ ಮನಸೋತ ಪಾಲಿಕೆ ಸದಸ್ಯೆ ಫರ್ವೀನ್‌ಬಾನು ಅವರು ಸಖತ್ ಡ್ಯಾನ್ಸ್ ಮಾಡಿದರು. ಅವರೊಂದಿಗೆ ಪಾಲಿಕೆಯ ಮತ್ತೂಬ್ಬ ಸದಸ್ಯರು ಸಾಥ್ ನೀಡಿದರು. ಈ ಮೂಲಕ ಮೆರವಣಿಗೆ ತೆರಳಿದ ಪ್ರತಿಯೊಂದು ಓಣಿಯ ಮತದಾರರ ವಿಶೇಷ ಗಮನ ಸೆಳೆದರು.
ಈ ವೇಳ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ, ಬಿಜೆಪಿ ಅಂಗೈಯಲ್ಲಿ ಆಕಾಶ ತೋರಿಸುವಂತಹ ಕೆಲಸ ಮಾಡುತ್ತಿದೆ. ಕಳೆದ ಹದಿನೈದು ವರ್ಷಗಳ ಕಾಲ ಬಿಜೆಪಿ ಪಕ್ಷದೋರು ಸಂಸದರಾಗಿ ಆಯ್ಕೆಯಾಗಿದ್ದಾರೆ.
ಅಲ್ಲದೆ, ಕಳೆದ ಐದು ವರ್ಷಗಳ ಕಾಲ ಕೇಂದ್ರದಲ್ಲಿ ಆಳ್ವಿಕೆ ನಡೆಸಿದ ಬಿಜೆಪಿ ನೇತೃತ್ವದ ಸರ್ಕಾರ ಈ ಜಿಲ್ಲೆಗೆ ಕೊಟ್ಟಿರುವಂತಹ ಕೊಡುಗೆಯಾದರೂ ಏನೆಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲೆಸೆದರು. ಮಾಜಿ ಶಾಸಕ ಶಾಸಕ ಅನಿಲ್ ಲಾಡ್, ಪ್ರಚಾರ ಸಮಿತಿ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಪಾಲಿಕೆ ಸದಸ್ಯರಾದ ವೆಂಕಟ ರಮಣ, ಬಿ.ಕೆ.ಕೆರೆಕೊಡಪ್ಪ, ಬಿ.ಕುಮಾರಸ್ವಾಮಿ, ಮರಿದೇವಯ್ಯ, ಫರ್ವೀನ್ ಬಾನು, ಮುಖಂಡರಾದ ಅಸುಂಡಿ ಹೊನ್ನೂರಪ್ಪ, ಬಿ. ರಾಮಪ್ರಸಾದ, ಬಸವರಾಜ, ಜೀವೇಶ್ವರಿ ರಾಮಕೃಷ್ಣ, ಬಿ.ಚಂದ್ರ, ಡಿ.ಸೂರಿ, ಶಿವರಾಜ, ವೆಂಕಟೇಶ್ ಹೆಗಡೆ, ಜೆಡಿಎಸ್ ನಗರ ಅಧ್ಯಕ್ಷ ವಿಜಯ ಕುಮಾರ, ಪ್ರಚಾರ ಸಮಿತಿ ಸದಸ್ಯರಾದ ವಿಷ್ಣು ಬೋಯಪಾಟಿ, ಶೋಭಾ, ಮಹಮ್ಮದ ಅಜಂ ಇದ್ದರು.