Advertisement

ಪೌಷ್ಟಿಕ ಆಹಾರದಿಂದ ಆರೋಗ್ಯ

04:19 PM Jul 03, 2019 | Naveen |

ಬಳ್ಳಾರಿ: ಪೌಷ್ಟಿಕ ಆಹಾರವನ್ನು ಸರಿಯಾದ ಸಮಯದಲ್ಲಿ ತಾಯಿ ಮತ್ತು ಮಗು ಸೇವಿಸಬೇಕು ಇದರಿಂದ ಆರೋಗ್ಯ ವೃದ್ಧಿಗೆ ಸಹಕಾರಿ ಎಂದು ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣಾನಾಯ್ಕ ಹೇಳಿದರು.

Advertisement

ನಗರದ ಅಂದ್ರಾಳ್‌ ಪ್ರದೇಶದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮರಿಸ್ವಾಮಿ ಮಠ ನಗರ ಆರೋಗ್ಯ ಕೇಂದ್ರ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪೌಷ್ಟಿಕ ಆಹಾರದ ಕೊರತೆ, ದೀರ್ಘ‌ಕಾಲದ ಅನಾರೋಗ್ಯ ಮಗುವಿನ ಅಪೌಷ್ಟಿಕತೆಗೆ ಕಾರಣವಾಗುತ್ತದೆ. ಅಪೌಷ್ಟಿಕತೆಯು ಅತಿಸಾರ ಭೇದಿ, ನ್ಯೂಮೋನಿಯಾದಂಥ ಅಸ್ವಸ್ಥತೆಗೆ ಕಾರಣವಾಗುವುದಲ್ಲದೇ ಗರ್ಭಿಣಿಗೆ ನಿಯಮಿತ ಪ್ರಸವ ಪೂರ್ವ ಆರೈಕೆ ಅತ್ಯವಶ್ಯಕ. ಮಗುವಿನ ಜನನದ ನಂತರ 6 ತಿಂಗಳವರೆಗೆ ಕೇವಲ ತಾಯಿ ಎದೆಹಾಲನ್ನು ಮಾತ್ರ ನೀಡಬೇಕು ಎಂದರು.

ಆರೋಗ್ಯವಂತ ಮಗು 6 ತಿಂಗಳ ನಂತರ ತಾಯಿ ಹಾಲಿನ ಜೊತೆ ಪೂರಕ ಆಹಾರವನ್ನು ನೀಡಬೇಕು. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ವಿಮ್ಸ್‌ ವೈದ್ಯಕೀಯ ಕಾಲೇಜಿನಲ್ಲಿರುವ ಪೌಷ್ಟಿಕ ಆಹಾರ ಪುನಶ್ಚೇತನ ಕೇಂದ್ರಕ್ಕೆ ಕಳುಹಿಸಿದಲ್ಲಿ ಮಗುವಿನ ಆರೋಗ್ಯದ ಆಧಾರದ ಮೇಲೆ 14 ದಿನಗಳವರೆಗ ಮಗುವಿಗೆ ಚಿಕಿತ್ಸೆ ಮತ್ತು ಉಪಚಾರವನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಈ ವೇಳೆ ತಾಯಿಗೆ ದೈನಂದಿನ ದುಡಿಮೆಯ ಸಹಾಯಧನವನ್ನು ಸಹ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತವ್ವ ಉಪ್ಪಾರ ಮಾತನಾಡಿ, ಮಗುವಿಗೆ ಬಾಲ್ಯದಲ್ಲಿ ಕಾಣುವ ರೋಗಗಳ ನಿಯಂತ್ರಣಕ್ಕಾಗಿ 10 ಮಾರಕ ರೋಗಗಳ ವಿರುದ್ಧ ಹಾಕುವ ಲಸಿಕೆಗಳನ್ನು ಕಾಲಕಾಲಕ್ಕೆ ಸಂಪೂರ್ಣ ಲಸಿಕೆ ಹಾಕಿಸಿ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪಾಲಕರು ಸಹಕರಿಸಬೇಕು ಎಂದರು.

Advertisement

ಇದೆ ವೇಳೆ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಯಂದಿರಿಗೆ, ಶಾಲಾ ಮಕ್ಕಳಿಗೆ ಭಿತ್ತಿ ಚಿತ್ರಗಳು ಹಾಗೂ ವೀಡಿಯೋ ಪ್ರದರ್ಶನದ ಮೂಲಕ ಆರೋಗ್ಯ ಜಾಗೃತಿ ಮೂಡಿಸಲಾಯಿತು ಮತ್ತು ಆರೋಗ್ಯದ ಸಮಸ್ಯೆಗಳಿಗೆ ಉತ್ತರಿಸಲಾಯಿತು.

ಈ ಸಂದರ್ಭದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ಗೀತಾ, ಪುಷ್ಪಲತಾ, ಪ್ರೊಜೆಕ್ಟ್ ನಿಷ್ಟ್ ನರಸಿಂಹಮೂರ್ತಿ, ಸಿಬ್ಬಂದಿ ಗೌಸ್‌ಬಾಷಾ, ಚಿದಾನಂದ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next