Advertisement

ಸಂತ್ರಸ್ತರ ನೆರವಿಗೆ ಧಾವಿಸಿದ ಜನ

01:14 PM Aug 11, 2019 | Team Udayavani |

ಬಳ್ಳಾರಿ: ಪ್ರವಾಹ, ನೆರೆಹಾವಳಿಯಿಂದ ಉತ್ತರ ಕರ್ನಾಟಕ ತತ್ತರಿಸಿರುವ ಹಿನ್ನೆಲೆಯಲ್ಲಿ ನೆರೆಹಾವಳಿ ಸಂತ್ರಸ್ತರಿಗೆ ನೆರವಾಗುವ ದೃಷ್ಟಿಯಿಂದಾಗಿ ಶಾಸಕರಾದ ಬಿ.ಶ್ರೀರಾಮುಲು, ಜಿ.ಸೋಮಶೇಖರರೆಡ್ಡಿ ಅವರು ನಗರದಲ್ಲಿ ಸಾರ್ವಜನಿಕರಿಂದ ಶನಿವಾರ ದೇಣಿಗೆ ಸಂಗ್ರಹಿಸಿದರು.

Advertisement

ನಗರದ ಎಸ್‌ಪಿ ವೃತ್ತದಲ್ಲಿನ ಬಿಜೆಪಿ ಕಚೇರಿಯಿಂದ ಆರಂಭವಾದ ದೇಣಿಗೆ ಸಂಗ್ರಹ ನಗರದ ಪ್ರಮುಖ ಬೀದಿ, ರಸ್ತೆಗಳಲ್ಲಿನ ವಾಣಿಜ್ಯ ಮಳಿಗೆ ಸೇರಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದರು. ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು, ನಗರ ಶಾಸಕ ಜಿ.ಸೋಮಶೇಖರರೆಡ್ಡಿಯವರು ದೇಣಿಗೆ ಡಬ್ಬಿಯನ್ನು ಹಿಡಿದು ಸಾರ್ವಜನಿಕರಿಂದ ಹಣ ಸಂಗ್ರಹಿಸಿದರು.

ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ಶ್ರೀರಾಮುಲು, ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹದಿಂದಾಗಿ ಅಲ್ಲಿನ ಜನಜೀವನ ಅಸ್ತವ್ಯವಸ್ಥಗೊಂಡಿದೆ. ಸಾವಿರಾರು ಮನೆಗಳು ನೆರೆಹಾವಳಿಗೆ ತುತ್ತಾಗಿದ್ದು, ಆಸ್ತಿಪಾಸ್ತಿ ಹಾನಿಯಿಂದಾಗಿ ಲಕ್ಷಾಂತರ ಜನರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆದ್ದರಿಂದ ಅಲ್ಲಿನ ಸಂತ್ರಸ್ತರಿಗೆ ಕೆಲವು ಅಗತ್ಯ ವಸ್ತುಗಳನ್ನು ಕಳುಹಿಸಿ ಸ್ವಲ್ಪ ಸಹಾಯವನ್ನು ನೀಡುವ ಮೂಲಕ ಅವರಿಗೆ ನೆರವು ನೀಡಬೇಕಾಗಿದೆ. ಹಾಗಾಗಿ ಬಿಜೆಪಿ ವತಿಯಿಂದ ದೇಣಿಗೆ ಸಂಗ್ರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಸಂಸದರಾದ ದೇವೇಂದ್ರಪ್ಪ, ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್‌ ರೆಡ್ಡಿ, ಮಾಜಿಶಾಸಕ ಸುರೇಶ್‌ ಬಾಬು, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷೆ ನಿಶ್ಚಿತ, ಮುಖಂಡರಾದ ವೀರಶೇಖರ್‌ ರೆಡ್ಡಿ, ಮೊತ್ಕರ್‌ ಶ್ರೀನಿವಾಸ್‌, ಮಲ್ಲನಗೌಡ, ಕೃಷ್ಣಾರೆಡ್ಡಿ, ರಾಜು, ಪ್ರಕಾಶ್‌ರೆಡ್ಡಿ, ಅಶೋಕ್‌ ಕುಮಾರ್‌ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next