ಬಳ್ಳಾರಿ: ನಗರದ ಸ್ವಚ್ಛತೆಗಾಗಿ ಹಗಲಿರುಳು ಕಾರ್ಯನಿರ್ವಹಿಸುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಗಮನ ನೀಡುವುದರ ಜತೆಗೆ ಕ್ಷಯರೋಗದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ| ಹನುಮಂತಪ್ಪ ಹೇಳಿದರು.
ನಗರದ ಶ್ರೀರಾಂಪುರ ಕಾಲೋನಿಯ ರೋಟರಿ ಭವನದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ, ಮಿಲ್ಲರ್‌ಪೇಟೆ ನಗರ ಆರೋಗ್ಯ ಕೇಂದ್ರ ಸಹಯೋಗದಲ್ಲಿ ರಾಷ್ಟ್ರೀಯ ಪರಿಷ್ಕೃತ, ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ಸಕ್ರಿಯ ಕ್ಷಯರೋಗ ಪತ್ತೆಹೆಚ್ಚುವಿಕೆ ಮತ್ತು ಚಿಕಿತ್ಸೆ ಆಂದೋಲನ ನಿಮಿತ್ತ ಪೌರಕಾರ್ಮಿಕರ ಆರೋಗ್ಯ ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಕೆ.ಜಿ. ವಿರೇಂದ್ರಕುಮಾರ ಮಾತನಾಡಿ, ಕ್ಷಯ ರೋಗವು ದೇಹದ ಇತರೆ ಭಾಗಗಳಿಗೂ ಹರಡಬಹುದು. ಒಮ್ಮೆ ಚಿಕಿತ್ಸೆಯನ್ನು ಆರಂಭಿಸಿದ ನಂತರ ಅರ್ಧದಲ್ಲಿ ನಿಲ್ಲಿಸಬಾರದು. ನಿಲ್ಲಿಸಿದರೆ, ಎಂಡಿಆರ್ ಟಿಬಿಯಾಗಿ ಬದಲಾವಣೆಯಾಗಿ ಹೆಚ್ಚಿನ ತೊಂದರೆಗಳನ್ನು ಉಂಟುಮಾಡುವುದಲ್ಲದೆ 2 ವರ್ಷಗಳ ಚಿಕಿತ್ಸೆಗೆ ಗುರಿಯಾಗಿಸುತ್ತದೆ. ಕ್ಷಯ ರೋಗ ವಿಮುಕ್ತಿಗೊಳಿಸವರೆಗೂ ಚಿಕಿತ್ಸೆಯನ್ನು ಪಡೆಯಬೇಕು ಎಂದರು.
ರಾಜ್ಯ ಐಇಸಿನ ಅಕಾರಿ ವಿನೋದ್ ಕುಮಾರ್, ಜಿಲ್ಲಾ ಕ್ಷಯರೋಗ ಮೇಲ್ವಿಚಾರಕ ಸಣ್ಣ ಕೇಶವ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ್, ಇನ್ನರ್‌ವಿಲ್ ಅಧ್ಯಕ್ಷೆ ಮಂಜುಳಾ ರಮಣ, ಮಾನಸಿಕ ತಜ್ಞ ಡಾ| ಸಲೀಂ, ಡಾ| ಸಿದ್ದಾರ್ಥ, ಡಾ| ಪೂರ್ಣಿಮ ಕಟ್ಟಿಮನಿ, ಡಾ| ನಾಗೇಶ್, ಡಾ| ಕಾಶಿಪ್ರಸಾದ್, ಡಾ| ಸುಧಾರಾಣಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ, ಕ್ಷಯ ಆರೋಗ್ಯ ಶಿಕ್ಷಣಾಧಿಕಾರಿ ಶಾಂತವ್ವ, ಡಿಪಿಎಂಸಿನ ಉದಯ್ ಕುಮಾರ್, ಎಸ್‌ಟಿಎಸ್‌ನ ಸಹನಾ, ಟಿಬಿಎಚ್ವಿನ ರಾಮಾಂಜಿನಿ, ಓಬುಳರೆಡ್ಡಿ, ಪ್ರದೀಪ್ ಕುಮಾರ್, ವೀರೇಶ್, ಚಂದ್ರಶೇಖರ್, ಬಸವರಾಜ, ರಾಜಗುರು, ಗುಡುದಯ್ಯ, ಪಂಪಾಪತಿ ಹಾಗೂ ಪಾಲಿಕೆಯಸ್ಯಾನಿಟರಿ ಇನ್ಸ್‌ಪೆಕ್ಟರ್, ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಇತರರು ಇದ್ದರು