Advertisement
ಹಾಲಿ ಪಂಚಾಯತ್ ಕಟ್ಟಡ ಶಿಥಿಲಗೊಂಡಿರುವ ಕಾರಣದಿಂದ ಈಗ ಜಿಮ್ ಇರುವ ಕಟ್ಟಡಕ್ಕೆ ಪಂಚಾಯತ್ ಕಚೇರಿ ಸ್ಥಳಾಂತರಿಸಿ, ಶಿಥಿಲ ಕಟ್ಟಡಕ್ಕೆ ಇಲ್ಲಿನ ಜಿಮ್ ಸ್ಥಳಾಂತರಿಸುವ ಬಗ್ಗೆ ಗ್ರಾ.ಪಂ.ಚಿಂತನೆ ನಡೆಸಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ ಜಿಮ್ ಹೊಂದಲು ಬೇಕಾದ ಮಾನದಂಡಗಳು ಸ್ಥಳಾಂತರ ಕಟ್ಟಡದಲ್ಲಿ ಇಲ್ಲ ಎಂಬ ಆಕ್ಷೇಪಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿವೆ.
ಹಲವು ವರ್ಷದ ಹಿಂದೆ ಬೆಳ್ಳಾರೆ ಗ್ರಾ.ಪಂ.ಸರಕಾರಿ ಜಿಮ್ ತೆರೆಯುವ ಯೋಜನೆ ರೂಪಿಸಿ ಅದನ್ನು ಕಾರ್ಯಗತಗೊಳಿಸಲಾಗಿತ್ತು. ಬೆಳ್ಳಾರೆ ಪ್ರಾಥಮಿಕ, ಹೈಸ್ಕೂಲು, ಪ.ಪೂ.ಕಾಲೇಜು ಹಾಗೂ ಪೊಲೀಸ್ ಸ್ಟೇಶನ್ ಬಳಿಯಲ್ಲಿ ಇರುವ ಗ್ರಾ.ಪಂ. ಕಟ್ಟಡದಲ್ಲಿ ಆರಂಭಗೊಂಡಿತ್ತು. ಪಂಚಾಯತ್ ವತಿಯಿಂದಲೇ ನಿರ್ವಹಣೆ ನಡೆದು, ಬಳಿಕ ಗುತ್ತಿಗೆ ಮೂಲಕ ಜಿಮ್ ಕೇಂದ್ರ ನಡೆಸಲಾಯಿತು. ಆದರೆ ಅದು ಸಮರ್ಪಕ ರೀತಿಯಲ್ಲಿ ನಡೆಯದೇ ಮಲ್ಟಿ ಜಿಮ್ ಕೇಂದ್ರ ನಿರುಪಯುಕ್ತವಾಗಿದೆ. ಜಿಮ್ ಕೇಂದ್ರವನ್ನು ಪಂಚಾಯತ್ ಹಳೆ ಕಟ್ಟಡಕ್ಕೆ ಸ್ಥಳಾಂತರಿಸುವ ಪ್ರಸ್ತಾಪ ಅಧಿಕೃತವಾಗಿಲ್ಲ. ಆದರೆ ಪಂಚಾಯತ್ ಕಚೇರಿಯನ್ನು ಜಿಮ್ ಕೇಂದ್ರಕ್ಕೆ ಸ್ಥಳಾಂತರಿಸುವ ಸ್ಪಷ್ಟವಾಗಿದೆ. ಈಗಿರುವ ಜಿಮ್ ಕೇಂದ್ರದ ಕಟ್ಟಡ ಸರಕಾರದ ನಿಯಮಾವಳಿ ಹಾಗು ಜಿಮ್ ತಜ್ಞರ ಅಭಿಪ್ರಾಯಗಳಿಗೆ ಅನುಗುಣ ವಾಗಿ ಯೇ ಇದೆ. 40 ಫೀಟ್ ಉದ್ದ, 30 ಫೀಟ್ ಅಗಲವಿದೆ. ಪಾರದರ್ಶಕವಾದ ಕಿಟಿಕಿಗಳನ್ನು ಹೊಂದಿದ್ದು, ಅಗತ್ಯವಾದ ಸಲಕರಣೆಗಳು ಹಾಗೂ ಅನುಕೂಲಕರವಾದ ವಾತಾವರಣ ಇದೆ.
Related Articles
Advertisement