Advertisement

ಬೇಳಂಜೆ ಕಿಂಡಿ ಅಣೆಕಟ್ಟು ಪ್ರದೇಶ: ತಹಸೀಲ್ದಾರ್‌ ಭೇಟಿ, ಪರಿಶೀಲನೆ

12:02 AM Jan 23, 2020 | Sriram |

ಹೆಬ್ರಿ: ಬೇಳಂಜೆ ಕೆಳಬಾದ್ಲು ಸೀತಾನದಿಗೆ ಸುಮಾರು 2ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಿಂಡಿ ಅಣೆಕಟ್ಟು ಪ್ರದೇಶಕ್ಕೆ ಜ.21ರ ಸಂಜೆ ಹೆಬ್ರಿ ತಹಶೀಲ್ದಾರ್‌ ಮಹೇಶ್ಚಂದ್ರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಸಣ್ಣ ನೀರಾವರಿ ಇಲಾಖೆ ಅನು ದಾನದಡಿಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿದ್ದು, ಕಾರ್ಯರೂಪಕ್ಕೆ ಬರುವ ಮೊದಲೇ ಕಳಪೆ ಕಾಮಗಾರಿ ಎದ್ದು ತೋರುತ್ತಿದೆ. ಹಲಗೆ ಅಳವಡಿಕೆ ಸರಿಯಾಗಿಲ್ಲದ ಕಾರಣ ನೀರು ಹೊರಬರುತ್ತಿದೆ. ಅಣೆಕಟ್ಟಿನಲ್ಲಿ ಕೆಲವು ಕಡೆ ಕಾಂಕ್ರೀಟ್‌ ಹಾಗೂ ಕಬ್ಬಿಣ ಕೆಲವು ಎದ್ದು ಹೋಗಿ ನೀರು ಹೊರಬರುತ್ತಿದೆ. ಡ್ಯಾಮ್‌ ಮೇಲುಗಡೆ ಅಳವಡಿಸಿದ ತಡೆಗೋಡೆಗಳು ಎದ್ದು ಹೋಗಿವೆ ಎಂದು ಸ್ಥಳೀಯರಾದ ಪಾಂಡುರಂಗ ಪೂಜಾರಿ ಅವರು ತಹಸೀಲ್ದಾರ್‌ ಅವರ ಗಮನಕ್ಕೆ ತಂದರು. ಅಲ್ಲದೆ ಈ ಪ್ರದೇಶಕ್ಕೆ ಬರಲು ಸರಿಯದ ದಾರಿಯಿಲ್ಲ, ಈ ಬಗ್ಗೆ ಪರಿಶೀಲಿಸಬೇಕು ಎಂದು ಅಧಿಕಾರಿಗಳ ಗಮನಕ್ಕೆ ತಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ತಹಸೀಲ್ದಾರ್‌, ಶೀಘ್ರ ಸಂಬಂಧಪಟ್ಟವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು. ದಾರಿ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯತ್‌ ಗಮನಕ್ಕೆ ತರಲಾಗುವುದು ಎಂದರು.

ತಾ.ಪಂ. ಸದಸ್ಯ ಅಮೃತಕುಮಾರ್‌ ಶೆಟ್ಟಿ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪಾಲಣ್ಣ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next