ಕಾಣಿಯೂರು: ಬ್ಯಾಂಕಿನ ಕಡೆಯಿಂದ ಹಣ ದ್ವಿಗುಣ ಮಾಡುವ ಮೋದಿ ಸ್ಕೀಮ್ ನವರು ಎಂದು ಅಪರಿಚಿತನೊಬ್ಬ ಮನೆಗೆ ಬಂದು ಚಿನ್ನದ ಸರ ಎಗರಿಸಿ ಪರಾರಿಯಾದ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣಿಯೂರು ಸಮೀಪದ ದೋಳ್ಪಾಡಿ ಗ್ರಾಮದ ಪುಳಿಮರಡ್ಕದ ಲಲಿತಾ ಎಂಬವರು ದೂರು ನೀಡಿದ ಮಹಿಳೆ.
ಮನೆಯಿಂದ ಕಾಣಿಯೂರಿನತ್ತ ಮುಂಜಾನೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಅಪರಿಚಿತ ವ್ಯಕ್ತಿಯೊಬ್ಬ ಬೈಕ್ ನಿಲ್ಲಿಸಿ ಪರಿಚಯದವನಂತೆ ಮಹಿಳೆಯನ್ನು ಮಾತನಾಡಿಸಿ¨ªಾನೆ . ಆತ ನಾವು “ಬಡವರಿಗೆ ಬ್ಯಾಂಕಿನ ಕಡೆಯಿಂದ ಹಣ ದ್ವಿಗುಣ ಮಾಡುವ ಮೋದಿ ಸ್ಕೀಮ್‌ನವರು ಮನೆಯಲ್ಲಿ ಮಾತನಾಡೋಣ ಬನ್ನಿ ಎಂದು ಹೇಳಿ ಜತೆಯಲ್ಲಿಯೇ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಮಹಿಳೆಯ ಮನೆಗೆ ಕರೆದುಕೊಂಡು ಹೋಗಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಪರಿಚಿತನು ಮಹಿಳೆಯ ಬಳಿ 7, 000 ರೂ. ಕೊಟ್ಟಲ್ಲಿ 1 ಲಕ್ಷ ಹಣ ನೀಡುವುದಾಗಿ ತಿಳಿಸಿದ್ದು ಹಣವಿಲ್ಲ ಎಂದು ಹೇಳಿದಾಗ ಆತ ಮತ್ತೂಂದು ಕೊಡುಗೆ ಇದೆ ನೀವು 1 ಪವನ್ ಚಿನ್ನ ಕೊಟ್ಟರೆ ನಿಮಗೆ ಬ್ಯಾಂಕಿನಿಂದ 4 ಪವನ್ ಚಿನ್ನ ಸಿಗುತ್ತದೆ ಎಂದು ತಿಳಿಸಿದ್ದ. ಅದರಂತೆ ಮಹಿಳೆ ತನ್ನಲ್ಲಿದ್ದ 6 ಗ್ರಾಂ ತೂಕದ ಚಿನ್ನದ ಸರವನ್ನು ಕೊಡಲು ತನ್ನ ಕೈಯಲ್ಲಿ ಹಿಡಿದುಕೊಂಡು ಬಂದು ಅಪರಿಚಿತನ ಜತೆ ಮಾತನಾಡುವಾಗ ಸ್ವಲ್ಪ ಟೀ ಮಾಡಿಕೊಡಿ ಎಂದು ಕೇಳಿದ್ದ ಎನ್ನಲಾಗಿದೆ. ಮಹಿಳೆ ಚಿನ್ನದ ಸರವನ್ನು ಟೇಬಲ್ ಮೇಲೆ ಇರಿಸಿ ಟೀ ಮಾಡಲು ಹೋದಾಗ ಅಪರಿಚಿತ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.