Advertisement

ಭಕ್ತರ ದಿಂಡಿ ಪಾದಯಾತ್ರೆ

12:50 PM Nov 01, 2017 | Team Udayavani |

ಉಪ್ಪಿನಬೆಟಗೇರಿ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠದ ಭಕ್ತರು ನ. 2ರಂದು ಹುಬ್ಬಳ್ಳಿಯಲ್ಲಿ ಜರುಗುವ ಶ್ರೀ ಮಾಧವಾನಂದ ಪ್ರಭುಜಿಯವರ 102ನೇ ಜಯಂತಿಯಲ್ಲಿ ಪಾಲ್ಗೊಳ್ಳಲು ಪಾದಯಾತ್ರೆಯಲ್ಲಿ ಉಪ್ಪಿನಬೆಟಗೇರಿಗೆ ಸೋಮವಾರ ಆಗಮಿಸಿದಾಗ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. 

Advertisement

ಗ್ರಾಮದ ಭಕ್ತರಾದ ನಿಂಗಪ್ಪ ಮೇದಾರ ಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಮಠದ ಶಿಷ್ಯರಾದ  ನಾಮದೇವ ಕುಡಚಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಮಾಧವಾನಂದ ಪ್ರಭುಜಿಯವರ ಜಯಂತಿ ಅಂಗವಾಗಿ ಹುಬ್ಬಳ್ಳಿಯ ವೀರಾಪುರ  ಓಣಿಯಲ್ಲಿ ಶ್ರೀ ಮಾಧವಾನಂದರು ಹುಟ್ಟಿದ ಮನೆಯಲ್ಲಿ ನ. 2ರಂದು ಸಂಜೆ ತೊಟ್ಟಿಲೋತ್ಸವ ನಡೆಯಲಿದೆ.

ವಿದ್ಯಾನಗರದ ಶ್ರೀ ಗಿರೀಶ್‌ ಆಶ್ರಮದಿಂದ ನಡೆಯುವ ಮೆರವಣಿಗೆಗೆ ಶ್ರೀ ಕ್ಷೇತ್ರ ಇಂಚಗೇರಿ ಮಠದ ಪೀಠಾ ಧಿಪತಿ ಶ್ರೀ ರೇವಣಸಿದ್ಧೇಶ್ವರ ಮಹಾರಾಜರು ಚಾಲನೆ ನೀಡುವರು ಎಂದು ತಿಳಿಸಿದರು. ಶಂಕ್ರಪ್ಪ ಕೌಜಲಗಿ ಮಾತನಾಡಿ, ಸರ್ವಧರ್ಮ ಭಾವೈಕ್ಯತೆಯ ಸಂಕೇತವೇ ಶ್ರೀ ಕ್ಷೇತ್ರ ಇಂಚಗೇರಿ ಮಠದ ಗುರುಗಳ ಸಂದೇಶವಾಗಿದ್ದು, ಇದನ್ನು ಸಾರುವ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು. 

ಸುಮಾರು 80ಕ್ಕೂ ಅ ಧಿಕ ಜನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಆಗಮಿಸಿದ್ದ ಯಾತ್ರಿಕರಿಗೆ ಭಕ್ತರಾದ ನಿಂಗಪ್ಪ ಮೇದಾರ, ಹವಳಪ್ಪ ಮೇದಾರ ಸಹೋದರರು ಉಪಹಾರ ಸೇವೆ ಸಲ್ಲಿಸಿದರು. ನಂತರ ಗ್ರಾಮದ ವಿವಿಧ ಓಣಿಯಲ್ಲಿ ಮೆರವಣಿಗೆ ಮೂಲಕ ಪಾದಯಾತ್ರೆಯು ಯಾದವಾಡ ಮಾರ್ಗವಾಗಿ ಹುಬ್ಬಳ್ಳಿಗೆ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next