Advertisement
ಸಮಸ್ಯೆ ಇರುವುದು ಈ “…ರೆ’ಯಲ್ಲಿ. “…ರೆ’ ಎಂಬುದು ನಮ್ಮಲ್ಲಿ ಸಂಶಯದ ಎಳೆಯೊಂದು ಇದೆ ಎಂಬುದರ ಸೂಚನೆಯೇ ಅಲ್ಲವೇ? ಸರ್ವಶಕ್ತನಾದ ಪರ ಮಾತ್ಮನು ನಾವು ಕೇಳಿ ಕೊಂಡದ್ದನ್ನು ಈಡೇರಿ ಸುತ್ತಾನೆಯೋ ಇಲ್ಲವೋ ಎಂಬ ಶಂಕೆ ಈ “ರೆ’ಯಲ್ಲಿದೆ.
Related Articles
Advertisement
ಇಲ್ಲೊಂದು ಕಥೆಯಿದೆ. ಒಂದು ರಾಜ್ಯದಲ್ಲಿ ಒಮ್ಮೆ ಬರಗಾಲ ಆರಂಭ ವಾಯಿತು. ವರ್ಷಾನುಗಟ್ಟಲೆ ಮಳೆ ಬರಲಿಲ್ಲ. ಎಲ್ಲೆಡೆಯೂ ಕ್ಷಾಮ, ಹಾಹಾ ಕಾರ. ಕೊನೆಗೆ ಎಲ್ಲರೂ ಸೇರಿ ಮುನಿ ಯೊಬ್ಬರ ಬಳಿಗೆ ಹೋದರು. ಅವರು ಒಂದು ಒಳ್ಳೆಯ ದಿನ ಗೊತ್ತುಪಡಿಸಿ ರಾಜಧಾನಿಯಲ್ಲಿ ಎಲ್ಲರೂ ಜತೆಗೂಡಿ ಪ್ರಾರ್ಥನೆ ಮಾಡಬೇಕು ಎಂದು ಸೂಚಿಸಿದರು.
ಆ ಸುದಿನ ಬಂತು. ಎಲ್ಲರೂ ನಗರ ದಲ್ಲಿ ಸೇರಿದರು. ಒಂದು ಮಗು ಮಾತ್ರ ಕೊಡೆ ಹಿಡಿದುಕೊಂಡು ಬಂದಿತ್ತು.ಮಗುವಿನ ಕೈಯಲ್ಲಿ ಛತ್ರಿ ಕಂಡು ಎಲ್ಲರೂ ನಗುವವರೇ. ಮಳೆ ಬಾರದೆ ವರ್ಷಗಳೇ ಸಂದಿವೆ, ಆಗಸದಲ್ಲಿ ಮೋಡಗಳ ಸುಳಿವು ಕೂಡ ಇಲ್ಲ; ಇಂತಹ ಹೊತ್ತಿನಲ್ಲಿ ಕೊಡೆ ಹಿಡಿದು ಬರು ವುದು ಎಂದರೆ ನಗು ಬಾರದೆ ಇರುತ್ತದೆಯೇ!
ಅಲ್ಲಿ ಸೇರಿದ್ದವರಲ್ಲಿ ಒಬ್ಬರು ಹೇಳಿದರು, “ಅಯ್ಯೋ ಮಗಾ! ಯಾಕೆ ಕೊಡೆ ತಂದಿದ್ದೀ? ಎಲ್ಲರೂ ನಿನ್ನನ್ನು ನೋಡಿ ನಗುತ್ತಿದ್ದಾರಲ್ಲ’. ಮಗು ಮುಗ್ಧವಾಗಿ ಉತ್ತರಿಸಿತು, “ಅಲ್ಲಲ್ಲ, ನೀವು ಪ್ರಾರ್ಥನೆ ಮಾಡು ತ್ತೀರಲ್ಲ? ಅದು ಮಳೆ ಬರಲಿ ಎಂದೇ ತಾನೇ? ಹಾಗಾಗಿ ಮಳೆ ಬಂದೇ ಬರು ತ್ತದೆ ಎಂದುಕೊಂಡು ಕೊಡೆ ತಂದೆ!’ ಎಲ್ಲರೂ ಪ್ರಾರ್ಥನೆ ನಡೆಸಿದರು. ಆದರೆ ಮಳೆ ಬರಲಿಲ್ಲ. ಕೊನೆಗೆ ಕೊಡೆ ತಂದ ಮಗು ಕೋರಿಕೊಂಡಾಗ ಆಗಸದಲ್ಲಿ ಮೋಡಗಳು ದಟ್ಟೈಸಿ ಮಳೆಗರೆದವಂತೆ. ಪೂರ್ಣ ನಂಬಿಕೆ, ವಿಶ್ವಾಸ, ಏಕಾಗ್ರತೆ ಇವೆಲ್ಲವಕ್ಕೂ ಇದು ಅನ್ವಯವಾಗುತ್ತದೆ – ಅದು ಸಂಪೂರ್ಣವಾಗಿರಬೇಕು. ಸಂಶಯದ ಕೂದಲೆಳೆ ಇದ್ದರೂ ಅದು ಆತ್ಯಂತಿಕವಲ್ಲ, ಸಂಪೂರ್ಣವಲ್ಲ. ಕೊಡೆ ಹಿಡಿದು ಬಂದ ಮಗುವನ್ನು ಕಂಡು ನಕ್ಕವರು ಮೂರ್ಖರಾಗಿದ್ದರು; ಮುನಿ ಹೇಳಿದ ಮಾತಿನ ಮೇಲೆ, ತಾವು ಸಲ್ಲಿಸಲಿರುವ ಪ್ರಾರ್ಥನೆಯ ಮೇಲೆ ಪೂರ್ಣ ವಿಶ್ವಾಸ ಹೊಂದಿದವರಾಗಿ ರಲಿಲ್ಲ. ಆದರೆ ಮಗು ಮಾತ್ರ ಮಳೆ ಬಂದೇ ಬರುತ್ತದೆ ಎಂದು ನಂಬಿತ್ತು, ಹಾಗಾಗಿಯೇ ಛತ್ರಿ ತಂದಿತ್ತು.
ನಾವು ಕೂಡ ಹಲವು ಬಾರಿ ಹೀಗೆಯೇ ಪ್ರಾರ್ಥಿಸುತ್ತೇವೆ ಮತ್ತು ಬೇಡಿಕೆ ಈಡೇರದಾಗ, “ನನಗೆ ಇದು ಸಾಧ್ಯವೇ ಇಲ್ಲ ಎಂದು ಮೊದಲೇ ಗೊತ್ತಿತ್ತು’ ಎಂದು ಹೇಳಿಕೊಳ್ಳುತ್ತೇವೆ!
( ಸಾರ ಸಂಗ್ರಹ)