Advertisement
ಈ ಪ್ರದೇಶದ ಸ್ಥಳೀಯ ಕೃಷಿಕರು ನೀರು ಸಂಗ್ರಹಕ್ಕಾಗಿ ನಿರ್ಮಿಸುವ ಕಟ್ಟಗಳ ಸಂಖ್ಯೆ ಬಹಳ ಕಡಿಮೆಯಾಗಿದ್ದು ತೋಡಲ್ಲಿ ನೀರು ಬƒಗನೆ ಬತ್ತಿ ಹೋಗಲು ಇದೂ ಒಂದು ಕಾರಣವಾಗಿದೆ. ಸ್ವರ್ಗ ಮೊಳಕ್ಕಾಲು, ಪಾಲೆಪ್ಪಾಡಿ, ಪೊಯೆÂಗಳಲ್ಲಿ ಕಟ್ಟ ನಿರ್ಮಿಸದೇ ಇರುವುದು ಈ ಬಾರಿಯ ಜಲಕ್ಷಾಮಕ್ಕೆ ಕಾರಣವಾಗಿದೆ ಎಂದು ಜಲತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೆಚ್ಚುತ್ತಿರುವ ಕೊಳವೆಬಾವಿಗಳ ಉಪಯೋಗ ಕೃಷಿಕರನ್ನು ಕಟ್ಟಗಳಿಂದ ವಿಮುಖರನ್ನಾಗಿಸುತ್ತಿರುವುದೇ ಈ ಪ್ರದೇಶದಲ್ಲಿ ಕಟ್ಟಗಳ ಸಂಖ್ಯೆ ಕಡಿಮೆಯಾಗಲು ಹಾಗೂ ಆ ಮೂಲಕ ಬೇಗನೆ ತೋಡು ಬತ್ತಿ ಹೋಗಲು ಪ್ರಮುಖ ಕಾರಣವಾಗಿದೆ.
Related Articles
Advertisement
ಮನೆಯಂಗಳದ ಹರಿಯುವ ನೀರನ್ನು ತಡೆಹಿಡಿದು ಸುತ್ತುಬಳಸಿ ಸಾಗುವಂತೆ ಮಾಡುವ ಕ್ರಿಯಾ ಯೋಜನೆಯನ್ನೂ ಹಮ್ಮಿಕೊಂಡಿದ್ದು ಅದರಿಂದ ನೀರಿಂಗಿಸುವ ಹಾಗೂ ಎದುರಾಗುವ ûಾಮವನ್ನು ತಕ್ಕಮಟ್ಟಿಗೆ ಕಡಿಮೆಗೊಳಿಸುವ ಸರಳ ಸೂತ್ರವನ್ನು ಜನರಿಗೆ ಮನದಟ್ಟು ಮಾಡುವ ಪ್ರಯತ್ನ ಪ್ರಾರಂಭವಾಗಲಿದೆ. ಈ ರೀತಿ ಒಗ್ಗಟ್ಟಿನಿಂದ ಊರ ಜನರು ಒಂದಾಗಿ ಶ್ರಮವಹಿಸಿದರೆ ಮುಂದಿನ ವರ್ಷಗಳಲ್ಲಿ ಸ್ವರ್ಗ ಹಾಗೂ ಸುತ್ತುಮುತ್ತಲ ಪ್ರದೇಶಗಳಲ್ಲಿ ನೀರಿನ ಕೊರತೆ ಎದುರಾಗದು ಎಂಬುದು ಜಲತಜ್ಞರ ಬಲವಾದ ವಿಶ್ವಾಸ.ವರ್ಷಗಳ ಹಿಂದೆ ಉದ್ಯೋಗಿ ಖಾತರಿ ಯೋಜನೆಯಡಿಯಲ್ಲಿ ಖಾಸಗಿ ಜಾಮೀನು ಹಾಗೂ ಗುಡ್ಡೆಗಳಲ್ಲಿ ಬಹಳಷ್ಟು ಇಂಗು ಗುಂಡಿಗಳನ್ನು ನಿರ್ಮಿಸಲಾಗಿತ್ತಾದರೂ ಅವೈಜ್ಞಾನಿಕ ರೀತಿಯಲ್ಲಿ ಇಂಗು ಗುಂಡಿ ನಿರ್ಮಿಸಿರುವುದರಿಂದ ನೀರಿಂಗಿಸುವ ಪ್ರಯತ್ನ ಸಫಲವಾಗಿಲ್ಲ. ಮಣ್ಣಿನ ನೀರಿಂಗಿಸುವ ಗುಣದ ಅಧ್ಯಯನ ಹಾಗೂ ನೀರಿನ ಹರಿವನ್ನು ಸೂಕ್ಷ್ಮವಾಗಿ ಗಮನಿಸಿ ಅಧ್ಯಯನ ನಡೆಸಿ ಇಂಗುಗುಂಡಿಗಳನ್ನು ನಿರ್ಮಿಸುವ ಪ್ರಾಯೋಗಿಕ ಮತ್ತು ಉತ್ತಮ ರೀತಿಯ ಮರು ಪೂರಣದ ಸಾಧ್ಯೆತೆಗನುಸರಿಸಿ ಯೋಜನೆಗಳನ್ನು ರೂಪೀಕರಿಸಲಾಗುವುದು ಮತ್ತು ನೈಸರ್ಗಿಕ ಜಲಮೂಲಗಳ ಪುನಶ್ಚೇತನಕ್ಕೆ ಒತ್ತು ನೀಡಲಾಗುವುದು ಎಂದು ಜಲತಜ್ಞ ಶ್ರೀಪಡ್ರೆ ಅಭಿಪ್ರಾಯ ಪಟ್ಟರು.
ಇಂಗುವ ಸಾಧ್ಯತೆಮಳೆನೀರು ಗುಡ್ಡದ ಭಾಗದಿಂದ ಸುಲಭವಾಗಿ ಕೆಳಗಿಳಿದು ಬರುತ್ತದೆ. ಅದರಿಂದ ನೀರಿಂಗುವ ಸಾಧ್ಯೆತೆಯೂ ಕಡಿಮೆಯಾಗುತ್ತದೆ. ಆದುದರಿಂದ ಗುಡ್ಡ ಹಾಗೂ ಇನ್ನಿತರ ಎತ್ತರದ ಪ್ರದೇಶಗಳಿಂದ ನೀರು ಇಳಿದು ಬರುವ ವೇಗವನುj ನಿಯಂತ್ರಿಸುವುದಕ್ಕಾಗಿ ಇಂಗು ಗುಂಡಿಗಳನ್ನು ನಿರ್ಮಿಸಿದಲ್ಲಿ ಭೂಮಿಯಲ್ಲಿ ನೀರು ಇಂಗುವ ಸಾಧ್ಯತೆ ಬಹಳಷ್ಟು ಹೆಚ್ಚಾಗುತ್ತದೆ. ಮಾತ್ರವಲ್ಲದೆ ಈ ನೀರು ಒರತೆಯಾಗಿ ತಿಂಗಳುಗಳ ಕಾಲ ತೋಡು, ಬಾವಿಗಳಿಗೆ ಬಂದು ಸೇರುವ ಕಾರಣ ಅವುಗಳೂ ಸುಲಭದಲ್ಲಿ ಬತ್ತುವುದಿಲ್ಲ. ಹಾಗಾಗಿ ಸ್ವರ್ಗ ತೋಡಿಗೆ ನೀರುಣಿಸುವ ಮುಖ್ಯ ಕೇಂದ್ರಗಳನ್ನು ಗುರುತಿಸಿ ಎತ್ತರದ ಪ್ರದೇಶಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿ ನೀರಿಂಗಲು ಅನುವು ಮಾಡಿಕೊಡಲಾಗುವುದು. ತೋಡಿನ ಎರಡೂ ಬದಿಗಳಲ್ಲಿ ಮಳೆಗಾಲದಲ್ಲಿ ನೀರು ಹರಿಯುಗವ ಕಣಿವೆಗಳನ್ನು ಗುರುತಿಸಿ ನೀರಿಂಗಿಸುವ ಸಾಧ್ಯೆತಗಳನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು. ಶ್ರೀಪಡ್ರೆ ಜಲತಜ್ಞ – ಅಖೀಲೇಶ್ ನಗುಮುಗಂ