Advertisement
ಬ್ರೆಜಿಲ್ ಸರ್ಕಾರದ ನಿರ್ದೇಶನ ಪ್ರಕಾರ, ಸೋಂಕು ದೃಢಪಟ್ಟವರು ಸ್ವಯಂಪ್ರೇರಿತವಾಗಿ ಹಾಗೂ ಕಡ್ಡಾಯವಾಗಿ 3 ವಾರಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕು. ಸದ್ಯ ಆ ದೇಶದಲ್ಲಿ ಹೊಸ ಕಾಯಿಲೆಯ ಮೂರು ಕೇಸುಗಳು ದೃಢಪಟ್ಟಿವೆ.
ಭಾರತದಲ್ಲಿಯೂ ಮಂಕಿಪಾಕ್ಸ್ ಬಗ್ಗೆ ಕಟ್ಟೆಚ್ಚರ ವಹಿಸಲು ನಿರ್ಧರಿಸಲಾಗಿದೆ. ಅಂತಾರಾಷ್ಟ್ರೀಯ ಗಡಿ ಭೂ, ಜಲ ಗಡಿ ಪ್ರದೇಶ, ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಮೇಲೆ ನಿಗಾ ವಹಿಸಲು ಕೇಂದ್ರ ಸರ್ಕಾರ ಸೂಚಿಸಿದೆ. ವಿಶೇಷವಾಗಿ ಆಫ್ರಿಕಾ ಖಂಡದ ದೇಶಗಳಿಂದ ಆಗಮಿಸುವವರ ಮಾದರಿಯನ್ನು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಲು ನಿರ್ದೇಶನ ನೀಡಲಾಗಿದೆ. 92 ಕೇಸು; 12 ರಾಷ್ಟ್ರ:
ವಿಶ್ವ ಆರೋಗ್ಯ ಸಂಸ್ಥೆ ಸದ್ಯ ನೀಡಿದ ಮಾಹಿತಿ ಪ್ರಕಾರ ಜಗತ್ತಿನ 12 ದೇಶಗಳಲ್ಲಿ 92 ಮಂಕಿಪಾಕ್ಸ್ ಕೇಸುಗಳು ದೃಢಪಟ್ಟಿವೆ. 28 ಪ್ರಕರಣಗಳ ಬಗ್ಗೆ ಇನ್ನೂ ಅಧ್ಯಯನ ನಡೆಸಲಾಗುತ್ತಿದೆ ಎಂದು ಡಬ್ಲೂéಎಚ್‌ಒ ಸ್ಪಷ್ಟಪಡಿಸಿದೆ.