Advertisement

ಬೆಳಗಾವಿ: ಕೆಎಎಸ್ ಅಧಿಕಾರಿ ರೇಷ್ಮಾ ತಾಳಿಕೋಟೆ ಪತಿ ಆತ್ಮಹತ್ಯೆ

08:12 PM Feb 13, 2023 | Team Udayavani |

ಬೆಳಗಾವಿ: ಹಿಡಕಲ್ ಡ್ಯಾಂ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರೇಷ್ಮಾ ತಾಳಿಕೋಟೆ ಅವರ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ‌ ಮಧ್ಯಾಹ್ನ ಇಲ್ಲಿಯ ಅಜಮ್‌ ನಗರ ನಿವಾಸದಲ್ಲಿ ನಡೆದಿದೆ.

Advertisement

ಎಫ್‌ಡಿಎ(ಕಂದಾಯ ನಿರೀಕ್ಷಕ) ಜಾಫರ್ ಫಿರಜಾದೆ(39) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಜಮ್ ನಗರದಲ್ಲಿ ಇವರ ಅಣ್ಣನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.‌ ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಸಂಗಮೇಶ ನಗರದಲ್ಲಿ ಇರುವ ಸರ್ಕಾರಿ ತರಬೇತಿ ಸಂಸ್ಥೆಯಲ್ಲಿ ಜಾಫರ್ ಫಿರಜಾದೆ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾರ್ಯ ನಿಮಿತ್ತ ಪತ್ನಿ ರೇಷ್ಮಾ ತಾಳಿಕೋಟಿ ಬೆಂಗಳೂರಿಗೆ ತೆರಳಿದ್ದಾರೆ. ಇತ್ತೀಚೆಗಷ್ಟೇ ಖಾನಾಪುರ ತಹಶೀಲ್ದಾರ ಆಗಿದ್ದ ರೇಷ್ಮಾ ಹಿಡಕಲ್‌ ಡ್ಯಾಂ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗಾವಣೆ ಆಗಿದ್ದರು. ಬೆಂಗಳೂರಿನಿಂದ ಇವರು ಬಂದ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ. ರೇಷ್ಮಾ ತಾಳಿಕೋಟಿ ಆಗಮನಕ್ಕಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ.‌

ಕೆಲ‌ ದಿನಗಳ ಹಿಂದೆ ಜಾಫರ್ ಧಾರ್ಮಿಕ ಕೇಂದ್ರಕ್ಕೆ ತೆರಳಿದ್ದರು. ‌ಅಲ್ಲಿಂದ ಬಂದ ಬಳಿಕ ಖಿನ್ನತೆಗೆ ಒಳಗಾಗಿದ್ದರು. ಒಂಟಿಯಾಗಿಯೇ ಇದ್ದು ಮಾನಸಿಕವಾಗಿ ಅಸ್ವಸ್ಥಗೊಂಡಿದ್ದರು ಎಂದು ತಿಳಿದು ಬಂದಿದೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next