Advertisement

ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ

05:14 PM Nov 22, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ನಾಲ್ಕು ದಿನಗಳ ಹಿಂದೆ ಬೆಳಗಾವಿ ವಿಮಾನ ನಿಲ್ದಾಣದ ಕಂಪೌಂಡ್‌ ಬಳಿ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಹಂತಕರ ಶೋಧಕ್ಕೆ ಜಾಲ ಬೀಸಿದ್ದಾರೆ. ಮಧ್ಯರಾತ್ರಿ ಯುವಕ ನಡೆದುಕೊಂಡು ಹೋಗುವಾಗ ಈತನ ಕಡೆ ಇದ್ದ ಐಫೋನ್‌ಗಾಗಿ ಕೊಲೆ ಆಯಿತಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ.

Advertisement

ಮೂಲತಃ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದ, ಸದ್ಯ ಶ್ರೀನಗರದ ನಿವಾಸಿ ನಿಂಗನಗೌಡ ಸಂಗನಗೌಡ ಸಣ್ಣಗೌಡ್ರ(26) ಎಂಬ ಯುವಕನನ್ನು ಹತ್ಯೆ ಮಾಡಿರುವ ಬಗ್ಗೆ ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಈತನ ಕಡೆಯಿದ್ದ ಐಫೋನ್‌ ನೋಡಿದ್ದ ದುರುಳರು ಮೊಬೈಲ್‌ ಕದ್ದುಕೊಂಡು ಯುವಕ ನಿಂಗನಗೌಡನನ್ನು ಹತ್ಯೆ ಮಾಡಿದ್ದಾರೆಯೇ ಅಥವಾ ಬೇರೆ ಕಾರಣಕ್ಕೆ ಕೊಲೆ ಮಾಡಿದ್ದಾರೆಯೋ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕೆಎಲ್‌ಇ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಮಹಾಂತೇಶ ಕಲ್ಲೋಳಿ ಅವರ ಬಳಿ ನಿಂಗನಗೌಡ ಸಣ್ಣಗೌಡ ಕಾರು ಚಾಲಕನಾಗಿದ್ದನು. ನ. 17ರಂದು ವೈದ್ಯರ ಕುಟುಂಬವನ್ನು ಕರೆದುಕೊಂಡು ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಹೋಗಿದ್ದನು. ದರ್ಶನ ಮುಗಿಸಿ ಯರಗಟ್ಟಿಗೆ ವಾಪಸ್‌ ಬಂದಾಗ ಅಲ್ಲಿಯೇ ಇಳಿದು ತನ್ನ ತಾಯಿಯ ತವರೂರು ಉಜ್ಜಿನಕೊಪ್ಪ ಗ್ರಾಮಕ್ಕೆ ಹೋಗುವುದಾಗಿ ಹೇಳಿದ್ದಾನೆ. ಆಗ ವೈದ್ಯರು ಇದಕ್ಕೆ ಒಪ್ಪಿಕೊಂಡು ಆತನನ್ನು ಕಳುಹಿಸಿ ತಾವೇ ಕಾರು ಚಲಾಯಿಸಿಕೊಂಡು ಬೆಳಗಾವಿಗೆ ಬಂದಿದ್ದಾರೆ.

ನ. 17ರಂದು ಸಂಜೆಯ ಹೊತ್ತಿಗೆ ಯರಗಟ್ಟಿಗೆ ಇಳಿದ ಯುವಕ ನಿಂಗನಗೌಡ ಉಜ್ಜಿನಕೊಪ್ಪಕ್ಕೆ ಹೋಗಿ ತನ್ನ ಅಳಿಯನನ್ನು ಕರೆದುಕೊಂಡು ಮತ್ತೂಬ್ಬ ಸ್ನೇಹಿತ ಸೇರಿ ಮೂವರು ಯರಗಟ್ಟಿಗೆ ಬಂದಿದ್ದಾರೆ. ಯರಗಟ್ಟಿಯ ರೇಣುಕಾ ವೈನ್ಸ್‌ನಲ್ಲಿ ಮೂವರೂ ಸಾರಾಯಿ ಕುಡಿದು ಅಲ್ಲಿಂದ ಬೆಳಗಾವಿಗೆ ವಾಪಸ್‌ ಹೋಗುವುದಾಗಿ ಅಲ್ಲಿಂದ ಬಂದಿದ್ದಾನೆ. ಬಸ್‌ ಹತ್ತಿಕೊಂಡು ಬಂದ ಯುವಕ
ಬೆಳಗಾವಿಗೆ ಟಿಕೆಟ್‌ ತೆಗೆಸಿದ್ದಾನೆ.

ಬೆಳಗಾವಿ ಬದಲು ಮೋದಗಾಕ್ಕೆ ಇಳಿದಿದ್ದ: ಬೆಳಗಾವಿವರೆಗೆ ಟಿಕೆಟ್‌ ತೆಗೆಸಿದ್ದರೂ ಮೋದಗಾ ಗ್ರಾಮದ ಹತ್ತಿರ ಬಂದಾಗ ಬಸ್‌ ನಿಲ್ಲಿಸುವಂತೆ ಹೇಳಿದ್ದಾನೆ. ಅಲ್ಲಿ ಇಳಿದ ಯುವಕ ನಿಂಗನಗೌಡ ಸಮೀಪದ ಹೊಟೇಲ್‌ಗೆ ರಾತ್ರಿ 10 ಗಂಟೆ ಸುಮಾರಿಗೆ ಹೋಗಿ ಸೆಕ್ಯೂರಿಟಿ ಗಾರ್ಡ್‌ ಬಳಿ ಗಾರ್ಡನ್‌ ಎಲ್ಲಿದೆ ಎಂದು ವಿಚಾರಿಸಿದ್ದಾನೆ. ಆಗ ಮುಂದೆ ಹೋಗುವಂತೆ ಹೇಳಿದಾಗ, ಅಲ್ಲಿಂದ
ನಡೆದುಕೊಂಡೇ ಮುಂದೆ ಬಂದಿದ್ದಾನೆ. ಮೊಬೆ„ಲ್‌ನಲ್ಲಿ ಗೂಗಲ್‌ ಮ್ಯಾಪ್‌ ಆನ್‌ ಮಾಡಿಕೊಂಡೇ ಸಾಗಿದ್ದಾನೆ ಎಂದು ತಿಳಿದು
ಬಂದಿದೆ.

Advertisement

ತಾಯಿಯೊಂದಿಗೆ ಕೊನೆ ಮಾತು: ರಾತ್ರಿ ಬಹಳ ಹೊತ್ತಾದರೂ ಮಗ ಬರಲಿಲ್ಲ ಎಂಬ ಕಾರಣಕ್ಕೆ ತಾಯಿ ತನ್ನ ಮಗ ನಿಂಗನಗೌಡಗೆ ಕರೆ ಮಾಡಿದ್ದಾಳೆ. ರಾತ್ರಿ 12:30ರ ಸುಮಾರಿಗೆ ತಾಯಿ ಕರೆ ಮಾಡಿದಾಗ, ಇನ್ನು ಕೆಲವೇ ಹೊತ್ತಿನಲ್ಲಿ ಬರುತ್ತೇನೆ ಎಂದು ಹೇಳಿ ಕಾಲ್‌ ಕಟ್‌ ಮಾಡಿದ್ದಾನೆ. ನಂತರ ಕೆಲ ಹೊತ್ತಿನ ಬಳಿಕ ಈತನ ಮೊಬೈಲ್‌ ನಾಟ್‌ ರಿಚೇಬಲ್‌ ಆಗಿದೆ. ತಾಯಿಯೊಂದಿಗೆ ಕೊನೆಯದಾಗಿ ಮಾತನಾಡಿದ್ದಾನೆ. ಕಳೆದ 10 ವರ್ಷಗಳಿಂದ ನಿಂಗನಗೌಡನ ತಾಯಿ ಹಾಗೂ ಸಹೋದರ ಬೆಳಗಾವಿಯ ಶ್ರೀನಗರದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ನಿಂಗನಗೌಡ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು, ಇನ್ನೊಬ್ಬ ಸಹೋದರನೂ ಕೆಲಸ ಮಾಡುತ್ತಾನೆ. ಈ ಕುರಿತು ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಿಕೆಟ್‌ಗಾಗಿ ಫೋನ್‌ ಪೇ ಮಾಡಿದ್ದ
ಯರಗಟ್ಟಿಯಿಂದ ಬೆಳಗಾವಿಗೆ ಬರಲು ಈತನ ಬಳಿ ನಗದು ಹಣ ಇರಲಿಲ್ಲ. ತನ್ನ ಸಹೋದರನ ಕಡೆಯಿಂದ ಫೋನ್‌ ಪೇ ಮೂಲಕ ಒಂದು ಸಾವಿರ ರೂ. ಹಣ ಹಾಕಿಸಿಕೊಂಡಿದ್ದಾನೆ. ಬಸ್‌ ನಿರ್ವಾಹಕನಿಗೆ ರಾತ್ರಿ 8:30ರ ಸುಮಾರಿಗೆ ಫೋನ್‌ ಪೇ ಮೂಲಕ ಹಣ ಸಂದಾಯ ಮಾಡಿ ಟಿಕೆಟ್‌ ತೆಗೆಸಿಕೊಂಡಿದ್ದಾನೆ. ಮೋದಗಾ ಬಳಿ ಬಸ್‌ನಿಂದ ಇಳಿದ ಕೂಡಲೇ ಸಮೀಪದ ಹೊಟೇಲ್‌ಗೆ ಹೋಗಿ ಅಲ್ಲಿಂದ ಮತ್ತೆ ಮುಂದೆ ಸಾಗಿ ಹೋಗುವಾಗ ಈತನ ಬಳಿ ಐಫೋನ್‌ನಲ್ಲಿ ಗೂಗಲ್‌ ಮ್ಯಾಪ್‌ ಆನ್‌ ಇತ್ತು. ಕುಡಿದ ಮತ್ತಿನಲ್ಲಿ ಇದ್ದಾಗ ಐಫೋನ್‌ ನೋಡಿದ ದುರುಳರು ಮೊಬೈಲ್‌ ಕದ್ದುಕೊಂಡು ಈತನ ಹತ್ಯೆ ಮಾಡಿದ್ದಾರೆಯೇ ಅಥವಾ ಬೇರೆ ಕಾರಣಕ್ಕೆ ಈತನನ್ನು ಕೊಲೆ ಮಾಡಲಾಗಿದೆಯೇ ಎಂಬ ಶಂಕೆ ವ್ಯಕ್ತಪಡಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಪೊಲೀಸರಿಂದ ತೀವ್ರ ತನಿಖೆ
ಯುವಕನ ತಲೆ ಮೇಲೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಹತ್ಯೆಯಾದ ವಿಷಯ ಗೊತ್ತಾಗುತ್ತಿದ್ದಂತೆ ಈತನ ಜೇಬಿನಲ್ಲಿ ದ್ವಿಚಕ್ರ ವಾಹನದ ಕೀಲಿ ಕೈ ಸಿಕ್ಕಾಗ ತನಿಖೆ ಮತ್ತಷ್ಟು ಚುರುಕುಗೊಳಿಸಿದರು. ಪಕ್ಕದಲ್ಲಿ ಎಲ್ಲಿಯಾದರೂ ವಾಹನ ಇದೆಯೇ ಎಂಬುದನ್ನು ಶೋಧ ನಡೆಸಿದ್ದಾರೆ. ಈತನ ಗುರುತು ಪತ್ತೆ ಆಗುತ್ತಿದ್ದಂತೆ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಕೊಲೆಯಾದ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಇಲ್ಲದ್ದಕ್ಕೆ ಯಾವುದೇ ಕುರುಹುಗಳು ಸಿಗುತ್ತಿಲ್ಲ. ಆದರೂ ಮಾರಿಹಾಳ ಠಾಣೆ ಪೊಲೀಸರು ಹಂತಕರ ಶೋಧಕ್ಕೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. *ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next