ಬೆಳಗಾವಿ: ಇದು ಆಷಾಢ ಏಕಾದಶಿ ಸಂದರ್ಭದಲ್ಲಿ ಪಂಢರಪುರಕ್ಕೆ ವಾರಕರಿಗಳ ಜತೆಗೆ ಪಾದಯಾತ್ರೆಯಲ್ಲಿ ತೆರಳಿ ನಂತರ ಮನೆಗೆ ಹಿರೋನಂತೆ ಬಂದ ನಾಯಿಯ ಕಥೆ. ಅಚ್ಚರಿ ಎನಿಸಿದರೂ ಸತ್ಯ. ಇದು ನಡೆದಿದ್ದು ನಿಪ್ಪಾಣಿ ತಾಲೂಕಿನ ಯಮಗರಣಿ ಗ್ರಾಮದಲ್ಲಿ. ಇಲ್ಲಿಯ ಜ್ಞಾನದೇವ ಕುಂಬಾರ ಅವರ ಮನೆಯ ನಾಯಿ ಈಗ ಎಲ್ಲರ ಮನೆ ಮಾತು.ಎಲ್ಲರಿಗೂ ಅಚ್ಚುಮೆಚ್ಚು.
Advertisement
ಪಂಢರಪುರಕ್ಕೆ ವಾರಕರಿಗಳ ಜತೆಗೆ ಪಾದಯಾತ್ರೆಯಲ್ಲಿ ಹೋಗಿ ತಪ್ಪಿಸಿಕೊಂಡಿದ್ದ ನಾಯಿ ನಂತರ 200 ಕಿಮೀ ಕ್ರಮಿಸಿ ಸುರಕ್ಷಿತವಾಗಿ ಮತ್ತೆ ತನ್ನ ಮಾಲೀಕನ ಮನೆ ಸೇರಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಆಷಾಢ ಏಕಾದಶಿಯ ಅಂಗವಾಗಿಯಮಗರ್ಣಿ ಗ್ರಾಮದಿಂದ ಪಂಢರಪೂರಕ್ಕೆ ದಿಂಡಿ ಯಾತ್ರೆ ಹೋಗಿತ್ತು.
Related Articles
ಸಂತೋಷವಾಗಿದೆ ಎಂದು ಕಂಬಾರ್ ಭಾವುಕರಾಗಿ ಹೇಳಿದರು.
Advertisement
ನಾಯಿಯು ತನ್ನ ಮಾಲೀಕ ಮತ್ತು ಊರಿನ ಜನರನ್ನು ಹುಡುಕುತ್ತ 200 ಕಿಮೀ ಕ್ರಮಿಸಿದೆ. ಗ್ರಾಮಕ್ಕೆ ತಲುಪಲು ಸರಿಯಾದ ಮಾರ್ಗವನ್ನು ಕಂಡುಕೊಳ್ಳಲು ದೇವರೇ ಸ್ವತಃ ಅದಕ್ಕೆ ಸಹಾಯ ಮಾಡಿದ್ದಾನೆ. ನಿಜಕ್ಕೂ ನಾವು ಪಾಂಡುರಂಗನಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಅವನ ದಯದಿಂದಲೇ ನಾಯಿ ಸುರಕ್ಷಿತವಾಗಿ ಮನೆಗೆ ಮರಳಿದೆ ಎಂದು ಜ್ಞಾನದೇವ ಕುಂಬಾರ ಹೆಮ್ಮೆಯಿಂದ ಹೇಳಿದರು.
ಏಕಾಂಗಿಯಾಗಿ ಸುರಕ್ಷಿತವಾಗಿ ಊರಿಗೆ ಬಂದಿರುವ ಈ ನಾಯಿಗೆ ಗ್ರಾಮಸ್ಥರು ಭವ್ಯ ಸ್ವಾಗತ ಮಾಡಿದ್ದಾರೆ. ನಾಯಿಯ ಕೊರಳಿಗೆ ಹೂ ಮಾಲೆ ಹಾಕಿ ಊರಿನಲ್ಲಿ ಪಾಂಡುರಂಗ ದೇವಸ್ಥಾನ ದಿಂದ ಕುಂಬಾರ ಗಲ್ಲಿಯವರೆಗೂ ಮೆರವಣಿಗೆ ಮಾಡಿದರು. ಇದೇ ಸಂದರ್ಭದಲ್ಲಿ ಗ್ರಾಮದ ಜನರಿಗೆ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು.