ಬೆಳಗಾವಿ: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊನೆಯ ಅಧಿವೇಶನ ವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು.
Advertisement
ಸುದ್ದಿಗಾರರ ಜತೆ ಮಾತನಾಡಿ, ಸಿದ್ದರಾಮಯ್ಯ ತಮ್ಮ ರಾಜಕೀಯದ ಕೊನೆಯ ದಿನಗಳನ್ನು ಎಣಿಸುತ್ತಿದ್ದಾರೆ. ಇದಕ್ಕೆ ಕೆಲವೇ ದಿನಗಳು ಮಾತ್ರ ಉಳಿದಿದ್ದು ಬೆಳಗಾವಿ ಅಧಿವೇಶನವೇ ಅವರ ಕೊನೆ ಅಧಿವೇಶನ ವಾಗಲಿದೆ. ಈ ಹಿಂದೆಯೇ ನಾನು “ಚಳಿಗಾಲ ಅಧಿವೇಶನಕ್ಕೆ ಹೊಸ ಮುಖ್ಯಮಂತ್ರಿ ಇರುತ್ತಾರೆ’ ಎಂದಿದ್ದೆ.
ಮಾಡಲು ಸಾಧ್ಯವಿಲ್ಲ ಎಂದು ಬಿ.ವೈ. ವಿಜಯೇಂದ್ರ ಹೇಳಿದರು. ಕಾಂಗ್ರೆಸ್ನವರು ಸಿಎಂ ಸ್ಥಾನ ಹರಾಜಿಗಿಟ್ಟಿದ್ದಾರೆ. ಕೆಲವರು
ಐವತ್ತು ಕೋಟಿ, ನೂರು ಕೋಟಿ ಆಫರ್ ಮಾಡುತ್ತಿದ್ದಾರೆ. ಮುಖ್ಯವಾಗಿ ಶಾಸಕರೇ ಸಿದ್ದರಾಮಯ್ಯ ಅವರನ್ನು ಬ್ಲಾಕ್ಮೇಲ್
ಮಾಡುತ್ತಿದ್ದಾರೆ. ಅವರು ಐವತ್ತು ಕೋಟಿ ಕೊಡ್ತೇನೆ ಅಂತಿದ್ದಾರೆ, ನೀವೂ ಕೊಡಿ ಎಂದು ಬ್ಲಾಕ್ಮೇಲ್ ಮಾಡುತ್ತಿದ್ದಾರೆ. ಹೀಗಾಗಿ
ಸಿಎಂ ಆತಂಕದಲ್ಲಿದ್ದಾರೆ. ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವ ಚಿಂತೆಯಲ್ಲಿದ್ದಾರೆ ಎಂದರು.
Related Articles
ದೇಶಾದ್ಯಂತ ಸಂಘಟನಾ ಪರ್ವ ನಡೆಯುತ್ತಿದ್ದು, ಶುಕ್ರವಾರ ಬಿಜೆಪಿ ರಾಷ್ಟ್ರೀಯ ಅಧ್ಯ ಕ್ಷರು ದೆಹಲಿಯಲ್ಲಿ ಸಭೆ ಕರೆದಿದ್ದಾರೆ.
ಸಂಘ ಟನೆ ಕುರಿತು ಚರ್ಚಿಸಲು ರಾಜ್ಯಾಧ್ಯಕ್ಷನಾಗಿ ನಾನು ಹಾಜರಾಗುತ್ತೇನೆ. ಸಭೆಗೆ ಎಲ್ಲ ರಾಜ್ಯಾಧ್ಯಕ್ಷರು ಬರುತ್ತಿದ್ದಾರೆ. ಶಾಸಕ ರಮೇಶ್ ಜಾರಕಿಹೊಳಿ ನಮ್ಮ ಬಗ್ಗೆ ಪ್ರೀತಿ ತೋರಿಸುತ್ತಿದ್ದಾರೆ ಎನ್ನುವುದು ಮುಖ್ಯ. ಉದ್ದೇಶ ಏನೇ ಇರಲಿ ಆದರೆ ದುರುದ್ದೇಶ ಇರಲು ಸಾಧ್ಯವಿಲ್ಲ. ಅಲ್ಪಸ್ವಲ್ಪ ಗೊಂದಲ ಇರುತ್ತದೆ. ರಾಷ್ಟ್ರೀಯ ಪಕ್ಷದಲ್ಲಿ ಇದೆಲ್ಲಾ ಸಾಮಾನ್ಯ ಎಂದರು.
Advertisement
“ವಕ್ಫ್ ವಿಚಾರದಲ್ಲಿ ಕ್ರೆಡಿಟ್ ವಾರ್ ನಡೆಸುತ್ತಿಲ್ಲ’ವಕ್ಫ್ ಹೋರಾಟ ಕುರಿತು ಬಿಜೆಪಿಯಲ್ಲಿ ಭಿನ್ನಾಭಿಪ್ರಾಯವಿಲ್ಲ. ನಾವ್ಯಾರು ಕ್ರೆಡಿಟ್ ವಾರ್ ನಡೆಸುತ್ತಿಲ್ಲ. ನಮ್ಮ ಹೋರಾಟದಲ್ಲಿ ಯತ್ನಾಳ್ ಕೂಡ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಯಾರು ಮೊದಲು ಹೋರಾಟ ಆರಂಭಿಸಿದರು ಎಂಬುದು ಮುಖ್ಯವಲ್ಲ. ಪ್ರಧಾನಿ ಮೋದಿ ವಕ್ಫ್ ತಿದ್ದುಪಡಿ ತರಲು
ಹೊರಟಿದ್ದಾರೆ. ಅದಕ್ಕೆ ಪೂರಕವಾಗಿ ಹೋರಾಟ ನಡೆಸಲಾಗುತ್ತಿದೆ. ಪಕ್ಷಕ್ಕೆ ರೈತರ ಹಿತ ಮುಖ್ಯ. ಅದಕ್ಕಾಗಿ ಮೂರು ತಂಡವಾಗಿ ರಾಜ್ಯ ಪ್ರವಾಸ ಮಾಡಲಿದ್ದೇವೆ. ರೈತರ ಪರ ಹೋರಾಟ ಮಾಡುವುದು ಪಕ್ಷದ ಅಧ್ಯಕ್ಷನಾಗಿ ನನ್ನ ಕರ್ತವ್ಯ. ಬಸನಗೌಡ ಪಾಟೀಲ ಯತ್ನಾಳ, ಆರ್.ಅಶೋಕ್ ಸೇರಿದಂತೆ ನಾವ್ಯಾರು ಕ್ರೆಡಿಟ್ ವಾರ್ ನಡೆಸುತ್ತಿಲ್ಲ. ನಾವು ನಡೆಸುತ್ತಿರುವ ಹೋರಾಟದಲ್ಲಿ ಯತ್ನಾಳ್ ಕೂಡ ಭಾಗವಹಿಸಲಿದ್ದಾರೆ ಎಂದರು.