ಹುಬ್ಬಳ್ಳಿ: ಕೆಪಿಎಲ್‌ನ ಬೆಳಗಾವಿ ಪ್ಯಾಂಥರ್ ಹಾಗೂ ನಮ್ಮ ಶಿವಮೊಗ್ಗ ನಡುವಿನ ಪಂದ್ಯ ವರುಣನ ಅವಕೃಪೆಯಿಂದ
ರದ್ದಾಗಿದೆ.
ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯ ರದ್ದುಗೊಂಡಿದ್ದರಿಂದ ಉಭಯ ತಂಡಗಳಿಗೆ ತಲಾ
ಒಂದು ಅಂಕ ನೀಡಲಾಯಿತು. ಟಾಸ್ ಗೆದ್ದ ಬೆಳಗಾವಿ ಪ್ಯಾಂಥರ್ μàಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಮ್ಮ ಶಿವಮೊಗ್ಗಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ಲಿಯಾನ್ ಖಾನ್ 14 ರನ್ ಗಳಿಸಿ ನಿರ್ಗಮಿಸಿದರೆ, ಅಬ್ರಾರ್ ಖಾಜಿ 12 ರನ್‌ಪೇರಿಸಿ ಪೆವಿಲಿಯನ್‌ಗೆ ಮರಳಿ ದರು. ತಂಡ ತ್ವರಿತ ಗತಿಯಲ್ಲಿ ವಿಕೆಟ್ ಕಳೆದುಕೊಂಡಿತು. ಬಾಲಚಂದ್ರ ಅಖೀಲ್ (20) ತಂಡದ ಮೊತ್ತ ಹೆಚ್ಚಿಸುವ ದಿಸೆಯಲ್ಲಿ ಪ್ರಯತ್ನಿಸಿದರಾದರೂ ಕಿಶೋರ್ ಬೌಲಿಂಗ್‌ನಲ್ಲಿ ವಿಕೆಟ್ ನೀಡಿದರು.
ಎಸ್.ಅರವಿಂದ ಬೌಲಿಂಗ್‌ನಲ್ಲಿ ಲಿಯಾನ್ ಖಾನ್ ರನೌಟ್ ಆದರೆ, ಅದೇ ಓವರ್‌ನಲ್ಲಿ ಅಬ್ದುಲ್ ಮಜೀದ್ (1) ಎಲ್‌ಬಿ ಬಲೆಗೆ ಬಿದ್ದರು. ಶಿವಮೊಗ್ಗ ತಂಡ 8.5 ನೇ ಓವರ್‌ನಲ್ಲಿ 50 ರನ್ ಗಳಿಸಿತು. ಸ್ಟುವರ್ಟ್ ಬಿನ್ನಿ, ಎಸ್. ಅರವಿಂದ, ಸ್ಟಾಲಿನ್ ಹೂವರ್, ಕಿಶೋರ ಕಾಮತ, ಶುಭಾಂಗ ಹೆಗಡೆ ತಲಾ 1 ವಿಕೆಟ್ ಗಳಿಸಿದರು.11.4 ನೇ ಓವರ್‌ನಲ್ಲಿ ಬ್ಯಾಟ್ಸ್‌ಮನ್‌ಗಳಾದ ಶೋಯೆಬ್ ಮ್ಯಾನೇಜರ್ ಹಾಗೂ ಅನಿರುದಟಛಿ ಜೋಶಿ ಕ್ರೀಸ್‌ನಲ್ಲಿದ್ದಾಗ ಮಳೆ ಬೀಳಲಾರಂಭಿಸಿತು. ಆಗ ಶಿವಮೊಗ್ಗ ತಂಡದ ಮೊತ್ತ 6 ವಿಕೆಟ್‌ಗೆ 75 ಆಗಿತ್ತು. ಮಧ್ಯಾಹ್ನ 4.12ಕ್ಕೆ ಆರಂಭಗೊಂಡ ಮಳೆ ನಿಂತಿರಲಿಲ್ಲ. ಹೀಗಾಗಿ ಸಂಜೆ 6.20ಕ್ಕೆ ಪಂದ್ಯ ರದ್ದು ಎಂದು ಘೋಷಿಸಿ ಉಭಯ ತಂಡಗಳಿಗೆ ತಲಾ 1 ಅಂಕ ನೀಡಲಾಯಿತು.
– ವಿಶ್ವನಾಥ ಕೋಟಿ