Advertisement

ಬೆಳಗಾವಿ: ಮಳೆಯಲ್ಲೇ ನೆನೆದು ಅಗ್ನಿವೀರರ ಆಕರ್ಷಕ‌ ಪಥಸಂಚಲನ

08:30 AM Aug 05, 2023 | Team Udayavani |

ಬೆಳಗಾವಿ: ನಗರದ‌ ಮರಾಠಾ ಲಘು ಪದಾತಿ‌ ದಳದಲ್ಲಿ ತರಬೇತಿ ಪೂರ್ಣಗೊಳಿಸಿರುವ ಅಗ್ನಿವೀರ ಮೊದಲ ತಂಡದ ನಿರ್ಗಮನ ಪಥಸಂಚಲನ ಶನಿವಾರ ಪ್ರಶಿಕ್ಷಣಾರ್ಥಿಗಳು ಮಳೆಯಲ್ಲೇ ನೆನೆದು ಪಥಸಂಚಲನ ನಡೆಸಿದರು.

Advertisement

ಎಂ.ಎಲ್.ಐ.ಆರ್. ಕೇಂದ್ರದಲ್ಲಿ 31 ವಾರಗಳ ಕಾಲ ತರಬೇತಿ ಪಡೆದ 111 ಅಗ್ನಿವೀರರು ದೇಶ ಕಾಯಲು ಸಜ್ಜಾದರು. ಅಗ್ನಿ ವೀರರ ನಿರ್ಗಮನ ಪಥಸಂಚಲನ ಗಮನಸೆಳೆಯಿತು. ತರಬೇತಿ ಮುಗಿಸಿದ ಅಗ್ನಿವೀರರು ದೇಶಸೇವೆಗೆ ಸಮರ್ಪಣೆಗೊಂಡರು.

31 ವಾರಗಳ ಕಾಲ ತರಬೇತಿಯಲ್ಲಿ ಪಡೆದ ಕೌಶಲ,‌ ಕಸರತ್ತುಗಳನ್ನು ಮಳೆಯಲ್ಲೇ ಪ್ರದರ್ಶಿಸಿದರು. ಮಳೆ ಮಧ್ಯೆಯೂ ಶಿಬಿರಾರ್ಥಿಗಳು ನಡೆಸಿದ ಆಕರ್ಷಕ ಪಥಸಂಚಲನ ಗಮನಸೆಳೆಯಿತು.

ಜ್ಯೂನಿಯರ್ ಲೀಡರ್ಸ್ ವಿಂಗ್ ಕಮಾಂಡರ್, ವಿಎಸ್ ಮೇಜರ್ ಜನರಲ್ ಆರ್.ಎಸ್. ಗುರಯ್ಯ ಅಗ್ನಿವೀರರನ್ನು ಉದ್ದೇಶಿಸಿ ಮಾತನಾಡಿದರು. ಐಆರ್ ಸಿ ಕಮಾಂಡೆಂಟ್ ಬ್ರಿಗೇಡಿಯರ್ ಜಯದೀಪ್ ಮುಖರ್ಜಿ ಸೇರಿದಂತೆ ಅಧಿಕಾರಿಗಳು ಹಾಗೂ ಸೈನಿಕರ ಕುಟುಂಬಸ್ಥರ ಇದ್ದರು.

ಇದನ್ನೂ ಓದಿ: ಕಾಶ್ಮೀರದ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌: 3 ಯೋಧರು ಹುತಾತ್ಮ, ಉಗ್ರರಿಗಾಗಿ ಮುಂದುವರೆದ ಶೋಧ

Advertisement
Advertisement

Udayavani is now on Telegram. Click here to join our channel and stay updated with the latest news.

Next